ಬುಲಂದ್ ಶಹರ್:
ರಸ್ತೆ ಬದಿ ಮಲಗಿದ್ದ ಭಕ್ತಾದಿಗಳ ಮೇಲೆ ಬಸ್ ಹರಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಳಗ್ಗೆ ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದಿದೆ.
Bulandshahr: 7 people have died after a bus ran over them near Gangaghat in Narora, early morning today. The deceased were sleeping on roadside when the incident took place.
— ANI UP (@ANINewsUP) October 11, 2019
ತೀರ್ಥಯಾತ್ರೆಗೆಂದು ಗಂಗಾಘಾಟ್ ಗೆ ಬಂದಿದ್ದ ಜನರು ಪಾದಚಾರಿ ಮಾರ್ಗದಲ್ಲಿ ಮಲಗಿದ್ದರು. ಈ ವೇಳೆ ಖಾಸಗಿ ಬಸ್ಸೊಂದು ಅವರ ಮೇಲೆ ಹರಿದು, ನಾಲ್ವರು ಮಹಿಳೆಯರು, ಮೂರು ಮಕ್ಕಳು ಸೇರಿದಂತೆ ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರೆಲ್ಲರೂ ಉತ್ತರಪ್ರದೇಶದ ಹತ್ರಾಸ್ ಮೂಲದವರು ಎಂದು ತಿಳಿದುಬಂದಿದೆ. ವೈಷ್ಣೋದೇವಿ ದರ್ಶನ ಪಡೆದು ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ, ಅಪಘಾತದ ನಂತರ ಬಸ್ ಚಾಲಕ ಪರಾರಿಯಾಗಿದ್ದು ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
