ಬೆಂಗಳೂರು :
ಪ್ರವಾಹದಿಂದ ಬೆಳೆ ನಷ್ಟಗೊಂಡವರಿಗೆ ಕರ್ನಾಟಕ ಸರ್ಕಾರದಿಂದ ಹೆಚ್ಚುವರಿಯಾಗಿ 10 ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಕುರಿತು ಘೋಷಣೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹದ ಕುರಿತು ವಿಧಾನಸಭೆಯಲ್ಲಿ ವಿವರವಾದ ಚರ್ಚೆ ನಡೆಯಿತು. ಚರ್ಚೆಗೆ ಉತ್ತರ ನೀಡುವಾಗ ಯಡಿಯೂರಪ್ಪ ಹೆಚ್ಚುವರಿಯಾಗಿಯಾಗಿ 10 ಸಾವಿರ ರೂ. ಪರಿಹಾರವನ್ನು ನೀಡುವುದಾಗಿ ಹೇಳಿದರು. ಹಾನಿಗೊಳಗಾದ ಬೆಳೆಗಳಿಗೆ ಎನ್ಡಿಆರ್ಎಫ್ ಅಡಿ ನೀಡುವ ಪರಿಹಾರ ಹಾಗೂ ಸರ್ಕಾರದಿಂದ ನೀಡುವ ಒಟ್ಟಾರೆ ಪರಿಹಾರದವನ್ನು ಸರ್ಕಾರ ಬಿಡುಗಡೆ ಮಾಡಿದೆ. ಅಡಿಕೆ ಮತ್ತು ರೇಷ್ಮೆ ಬೆಳೆ ನಾಶಕ್ಕೂ ಪರಿಹಾರ ನೀಡಲಾಗುತ್ತದೆ.
ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಹಾನಿಗೊಳಗಾಗಿರುವ ಮನೆಗಳನ್ನು ಎ, ಬಿ, ಸಿ ಎಂದು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಎ, ಬಿ ಮತ್ತು ಸಿ ಮನೆಗಳಿಗೆ ವಿವಿಧ ಶ್ರೇಣಿಯ ಪರಿಹಾರವನ್ನು ನೀಡಲಾಗುತ್ತದೆ. ಪ್ರವಾಹದಿಂದ ಅಂಗಡಿಗಳಿಗೆ ಹಾನಿಯಾಗಿದ್ದರೆ ಅದಕ್ಕೂ ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ