ವೈಭವದ ವಾಲ್ಮೀಕಿ ಜಯಂತಿ..!

ಹಿರಿಯೂರು

       ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ವೈಭವದಿಂದ ನಡೆಯಿತು. ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜ್ ರವರು ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

      ನಂತರ ತಾಲ್ಲೂಕು ಕಛೇರಿ ಆವರಣದಲ್ಲಿ ಅಲಂಕೃತ ಅಶ್ವ ರಥದಲ್ಲಿ ಪ್ರತಿಷ್ಟಾಪಿಸಿದ್ದ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಭವ್ಯವಾದ ಮೆರವಣಿಗೆ ನಡೆಯಿತು. ವೀರಗಾಸೆ ನೃತ್ಯ ಕಹಳೆ ವಿವಿಧ ವಾದ್ಯ ಸಂಗೀತ ಗಳೊಂದಿಗೆ ಡಿ.ಜೆ ಯ ಹಾಡುಗಳಿಗೆ ಯುವಕರು ಕುಣಿದಾಡುವ ದೃಶ್ಯ ಕಂಡುಬಂತು.

     ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಾಜೇಶ್ವರಿಗಿರೀಶ್, ಶಶಿಕಲಾಸುರೇಶ್ ಬಾಬು, ಸಿ.ಬಿ.ಪಾಪಣ್ಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ ಹಾಗೂ ಸದಸ್ಯರು ನಗರಸಭೆ ಸದಸ್ಯರು ಪೌರಾಯುಕ್ತರಾದ ಹೆಚ್.ಮಹಾಂತೇಶ್ ಸಮಾಜ ಕಲ್ಯಾಣ ಅಧಿಕಾರಿ ಸುಮತಿ ಹಾಗೂ ಅಧಿಕಾರಿವರ್ಗದವರು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಿರಿಯೂರು ಶಾಖೆ ಅಧ್ಯಕ್ಷರಾದ ಜೆ.ಬಿ.ರಾಜು, ಯುವಘಟಕ ಬಬ್ಬೂರು ಅಧ್ಯಕ್ಷರಾದ ಎ.ಸಿದ್ದೇಶ್, ಎಸ್.ಲೋಕೇಶ್, ರಮೇಶ್, ಮಂಜುನಾಥ್‍ಮಾಳಿಗೆ, ನಳಿನಾಕ್ಷಿ, ಇಂದ್ರಮ್ಮ, ಪುಷ್ಪಲತಾ, ಶ್ರೀಧರ್, ಚಿದಾನಂದ, ಹಾಗೂ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link