ಅಬಕಾರಿ ದಾಳಿ ಅಕ್ರಮ ಮದ್ಯ ವಶ..!

ಕೊರಟಗೆರೆ

     ಅಬಕಾರಿ ನಿಯಮಗಳಿಗೆ ವಿರುದ್ದವಾಗಿ ಸ್ವಾಧೀನತೆ, ಸಾಗಾಣಿಕೆ, ಮಾರಾಟ ಇತ್ಯಾದಿಗಳಲ್ಲಿ ಜಪ್ತಿ ಮಾಡಿ ಮುಟ್ಟುಗೋಲು ಹಾಕಿಕೊಂಡಿರುವ ಮದ್ಯಪಾನದ ಸಿಟ್ರಾ ಪಾಕೆಟ್‍ಗಳನ್ನು ಪಟ್ಟಣದ ಅಬಕಾರಿ ಕಚೇರಿ ಆವರಣದಲ್ಲಿ ಸೋಮವಾರ ನಾಶಪಡಿಸಲಾಯಿತು.

     ಕೊರಟಗೆರೆ ಅಬಕಾರಿ ವಲಯ ಕಚೇರಿ ಆವರಣದಲ್ಲಿ ಮಧುಗಿರಿ ಅಬಕಾರಿ ಉಪಅಧೀಕ್ಷಕ ಸುಭಾಶ್‍ಚಂದ್ರ ನೇತೃತ್ವದೊಂದಿಗೆ ತುಮಕೂರು ಕೆಎಸ್‍ಬಿಸಿಎಲ್ ವ್ಯವಸ್ಥಾಪಕ ಹೆಚ್.ಎಂ.ಗೌಡ, ಕೊರಟಗೆರೆ ಅಬಕಾರಿ ನಿರೀಕ್ಷಕ ರಾಮಮೂರ್ತಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಸುಮಾರು 50 ಸಾವಿರ ರೂ. ಮೌಲ್ಯದ 66.09 ಲೀಟರ್ ಮದ್ಯವನ್ನು ನಾಶ ಪಡಿಸಲಾಗಿದೆ.

     2019-20ನೆ ಸಾಲಿನ ಲೋಕಸಭಾ ಚುನಾವಣೆ ವೇಳೆಯಲ್ಲಿ ಅಕ್ರಮವಾಗಿ ಮಧ್ಯ ಶೇಖರಣೆ ಮತ್ತು ಸಾಕಾಣಿಕೆ ಮಾಡುತ್ತಿದ್ದ ದಾಳಿ ನಡೆಸಿ ವಶಪಡಿಸಿಕೊಳ್ಳಲಾದ ಮದ್ಯವನ್ನು ಸೋಮವಾರ ಮಧ್ಯಾಹ್ನ ಕಚೇರಿ ಆವರಣದಲ್ಲಿ ನಾಶಪಡಿಸಲಾಗಿದೆ. ಕಚೇರಿ ಆವರಣದಲ್ಲಿ ಗುಂಡಿ ತೋಡಿ ಅದರಲ್ಲಿ ಮದ್ಯದ ಸಿಟ್ರಾ ಪಾಕೆಟ್ ಹರಿದು ಮದ್ಯವನ್ನು ಸುರಿದು ಅಬಕಾರಿ ಇಲಾಖೆಯವರು ನಾಶಪಡಿಸಿದ್ದಾರೆ.

      ಅಬಕಾರಿ ಇಲಾಖೆಯ ಉಪನೀರಿಕ್ಷಕ ಅರುಣಕುಮಾರ್, ವೈಷ್ಣವಿ, ಕಂದಾಯ ಇಲಾಖೆಯ ನಕುಲ್, ಅಬಕಾರಿ ಸಿಬ್ಬಂದಿ ಮಂಜುಳಾ, ಮಲ್ಲಿಕಾರ್ಜುನ್, ಪುಷ್ಪ್ಪಲತಾ, ಕೊಂಡಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link