ಬೆಂಗಳೂರು :
ಕಳೆದ ಜುಲೈ ಮತ್ತು ಅಗಸ್ಟ್ ತಿಂಗಳುಗಳಲ್ಲಿ ಸಂಭವಿಸಿದ ಅತೀವೃಷ್ಟಿ ಹಾಗೂ ಪ್ರವಾಹದಿಂದಾಗಿ ನೇಕಾರಿಕೆ ವೃತ್ತಿಯ ವಿದ್ಯುತ್ ಮಗ್ಗಗಳಿಗೆ ರಾಜ್ಯ ಸರ್ಕಾರ ಪರಿಹಾರ ಮೊತ್ತ ಘೋಷಿಸಿರುವುದು ಬೆಳಗಾವಿ ಜಿಲ್ಲೆಯ ನೇಕಾರರಲ್ಲಿ ನಿರಾಳಭಾವ ಮೂಡಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ತಲಾ ವಿದ್ಯುತ್ ಮಗ್ಗಕ್ಕೆ 25 ಸಾವಿರ ರೂಪಾಯಿಗಳ ಪರಿಹಾರ ಪ್ರಕಟಿಸಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಕ್ನನಡ ಸಂಘಟೆಗಳ ಕ್ರಿಯಾ ಸಮಿತಿ ನೇಕಾರರ ಗಮನಕ್ಕೆ ತಂದು ಸಂತಸ ವ್ಯಕ್ತಪಡಿಸಿದೆ.
ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು, ಆಕಾಶವಾಣಿಯೊಂದಿಗೆ ಮಾತಾಡಿ, ನೆರೆಹಾನಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ನೇಕಾರರಿಗೆ ಸೂಕ್ತ ಪರಿಹಾರಕ್ಕೆ ಸಂಘಟೆ ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೆಟ್ಟಿ ಆಗಿ ಒತ್ತಾಯಿಸಿತ್ತು. ಪರಿಸ್ಥಿತಿ ಅವಲೋಕಿಸಿದ ಮುಖ್ಯಮಂತ್ರಿಗಳು ಪರಿಹಾರ ನೀಡಲು ಮುಂದಾಗಿರುವುದು ನೇಕಾರರಿಗೆ ತಮ್ಮ ಉದ್ಯೋಗ ನಿರ್ವಹಣೆಗೆ ಅನುಕೂಲವಾಗಲಿದೆ’ ಎಂದು ತಿಳಿಸಿದ್ದಾರೆ.
ರಾಮದುರ್ಗದ ನೇಕಾರರಾದ ರಾಮಚಂದ್ರ ಯಾದವಾಡ ಅವರು, ಆಕಾಶವಾಣಿಯೊಂದಿಗೆ ಮಾತನಾಡಿದ್ದು, ರಾಮದುರ್ಗ ಸೇರಿದಂತೆ ಹಲಗತ್ತಿ, ಮನಿಹಾಳ, ಸುರೇಬಾ, ಸವದತ್ತಿ, ಮುನವಳ್ಳಿ ಮೊದಲಾದ ಕಡೆಯ ನೇಕಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಎರವು ನೀಡುತ್ತಿರುವುದು ನೆಮ್ಮದಿ ಮೂಡಿದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ