ಭಾರತಕ್ಕೆ ಆಹಾರ ರಫ್ತು ಮಾಡುವ ಸಾಮಥ್ರ್ಯವಿದೆ : ಡಾ ಕಾಮಾನಿ

ಚಿತ್ರದುರ್ಗ

    ಎಲ್ಲರೂ ಆಹಾರವನ್ನು ಹಿತವಾಗಿ, ಮಿತವಾಗಿ, ಬಳಸಿಕೊಂಡು ಬೇರೆಯವರು ಹಸಿವಿನಿಂದ ಬಳಲದಂತೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಪರಿಸರ ತಜ್ಞರಾದ ಡಾ. ಕಾಮಾನಿ. ಕೆ. ಕೆ ಕರೆ ನೀಡಿದರು.

     ಚಿತ್ರದುರ್ಗ ರೋಟರಿ ಕ್ಲಬ್‍ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಆಹಾರ ದಿನ 2019ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ಹಸಿವಿನಿಂದ ಬಳಲದೆ ಆಹಾರ ಪಡೆದು ಶಾಂತಿ ನೆಮ್ಮದಿಯ ಬದುಕನ್ನು ರೂಢಿಸಿಕೊಳ್ಳಲು ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು 1945 ರಲ್ಲಿ ಸಂಯುಕ್ತ ರಾಷ್ಟ್ರ ಸಂಘ ಅಮೇರಿಕಾದಲ್ಲಿ ಅಕ್ಟೋಬರ್ 16 ರಂದು ಆಚರಣೆಗೆ ಬಂದಿತು ಎಂದರು.

     ಭೂಮಿಯು 510 ಲಕ್ಷ ಚದುರ ಕಿಲೋಮೀಟರ್ ಮೇಲ್ಮೈ ಸುತ್ತಳತೆ ಹೊಂದಿದ್ದು 1% ನೀರು, 29% ಭೂ ಭಾಗದಲ್ಲಿ ಕೇವಲ 11% ಪ್ರದೇಶದಲ್ಲಿ ಬೆಳೆಯನ್ನು ಬೆಳೆಯಬಹುದಾಗಿದೆ. ಇದರಲ್ಲಿ 1.3% ಮಾತ್ರ ಶಾಶ್ವತ ಬೆಳೆಗಳನ್ನು ಬೆಳೆಯಬಹುದಾದ ಯೋಗ್ಯ ಪ್ರದೇಶವಾಗಿದೆ. ವಿಶ್ವದಲ್ಲಿ ಯು. ಎಸ್. ಎ 15 ಲಕ್ಷ ಹೆಕ್ಟರ್ , ಭಾರತ 160 ಲಕ್ಷ ಹೆಕ್ಟರ್, ರಷ್ಯಾ 122 ಲಕ್ಷ ಹೆಕ್ಟರ್, ಚೀನಾ 103 ಲಕ್ಷ ಹೆಕ್ಟರ್ ಕ್ರಷಿ ಭೂಮಿಯನ್ನು ಹೊಂದಿದ ದೇಶಗಳು ಕ್ರಮವಾಗಿ ಆಹಾರ ಉತ್ಪನ್ನಗಳ ಬೆಳೆಯುವಲ್ಲಿ ಅಗ್ರ ಸ್ಥಾನದಲ್ಲಿವೆ ಎಂದು ತಿಳಿಸಿದರು.

     ಭಾರತದ ಸುಮಾರು 5% ಭೂ ಭಾಗ ಕ್ರಷಿಗೆ ಅನುಕೂಲಕರವಾಗಿದ್ದು ಸುಮಾರು 100 ಕ್ಕೂ ಹೆಚ್ಚು ದೇಶಗಳಿಗೆ ಆಹಾರ ಉತ್ಪನ್ನಗಳನ್ನ ರಫ್ತು ಮಾಡುವ ಸಾಮಥ್ರ್ಯ ಹೊಂದಿವೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ರಾಸಾಯನಿಕಗಳ ಬಳಕೆ, ಪೆÇೀಷಕಾಂಶಗಳ ಪ್ರಮಾಣದ ಆಹಾರ ಉತ್ಪನ್ನಗಳನ್ನು ಸಂಸ್ಕರಿಸಿ, ಕೆಡದಂತೆ ಇಟ್ಟು ಸಾಗಿಸುವುದು ಸಾಹಸಮಯ ಕಾರ್ಯವಾಗಿದೆ. ರೈತರು ಆಧುನಿಕ ತಂತ್ರಜ್ಞಾನವನ್ನು ಬಳಸಿ,ಬೇಡಿಕೆಗೆ ಅನುಗುಣವಾದ ಆಹಾರ ಉತ್ಪನ್ನಗಳನ್ನು ಬೆಳೆದು, ವ್ಯವಸ್ಥಿತ ವ್ಯಾಪಾರದಂದಿಗೆ ಇಸ್ರೇಲ್ ಮಾದರಿಯ ಕ್ರಷಿ ಉದ್ಯೋಗದಿಂದ,ರಾಷ್ಟ್ರದ ಸಮಗ್ರ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಬೇಕಾಗಿದೆ ಎಂದು ಹೇಳಿದರು.

      ಎಲ್ಲರೂ ಪ್ರಜ್ಞೆಯಿಂದ ಮದುವೆ, ಜಾತ್ರೆ, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ವ್ಯಯವಾಗದಂತೆ ಎಚ್ಚರವಹಿಸಬೇಕಾಗಿದೆ. ಸಮ ಪ್ರಮಾಣದ  ಪೋಷಕಾಂಶಗಳ ಆಹಾರ,ದೇಹದ,ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಆಹಾರದ ಸ್ವಾವಲಂಬನೆ, ಸಾಂಸ್ಕೃತಿಕ, ಹಾಗೂ ರಾಜಕೀಯ ಬೆಳವಣಿಗೆಗೆ ಮುಖ್ಯ ಪಾತ್ರ ವಹಿಸುತ್ತದೆ. “ಹಸಿದ ಹೊಟ್ಟೆಗಳಿಗೆ ಉಣ ಬಡಿಸುವ ಗುಣ ಬೆಳೆಸಿಕೊಳ್ಳೋಣ ಎಂದು ಕಿವಿ ಮಾತು ಹೇಳಿದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ್ ಅಧ್ಯಕ್ಷತೆ ವಹಿಸಿದ್ದರು. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ರೀನಾವೀರಭದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು,ಇನ್ನರ್ ವ್ಹೀಲ್ ಕಾರ್ಯದರ್ಶಿ ಕವಿತಾ ಜೈನ್ ರೋಟರಿ ಕ್ಲಬ್ ಕಾರ್ಯದರ್ಶಿ ವಿನೋದ್ ಭಾಪ್ನ . ಡಾ. ದೀಪಕ್ ಮುಂತಾದ ಸದಸ್ಯರುಗಳು ಹಾಜರಿದ್ದರು. ಮಾನಸಿಕ ಸ್ವಾಸ್ತ್ಯತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap