ಚಿತ್ರದುರ್ಗ:
ಜಿಲ್ಲಾ ಪಂಚಾಂಯತ್‍ನ್ನು ಹೊರಗುತ್ತಿಗೆ ಪಡೆದ ರಶ್ಮಿ ಕಂಪ್ಯೂಟರ್ ಇದರ ಮಾಲಿಕ ಜಿಲ್ಲಾ ಪಂಚಾಯತ್ ಸದಸ್ಯರಾಗಿದು,್ದ ವರದಿಯೊಂದಿಗೆ ಇವರ ಸದಸ್ಯತ್ವ ರದ್ದತಿಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಸೂಚಿಸಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರವು ಸುಮಾರು 11.36 ಕೋಟಿ ರೂ. ಗಳಷ್ಟು ರಶ್ಮಿ ಕಂಪ್ಯೂಟರ್‍ಗೆ ಹೊರಗುತ್ತಿಗೆ ಬಾಬ್ತು ಪಾವತಿಸಲಾಗಿದೆ. ಆದರೆ ಅವ್ಯವಹಾರದ ಬಗ್ಗೆ ಈ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಹೊರಗುತ್ತಿಗೆ ಪಡೆದ ಯಾವುದೇ ಸಂಸ್ಥೆಯು ನೌಕರರ ಇಎಸ್‍ಐ, ಪಿಎಫ್ ಪಾವತಿಸಬೇಕು. ಜಿಲ್ಲಾಧಿಕಾರಿಗಳ ತನಿಖಾ ವರಿದಿಯನ್ವಯ ಇಎಸ್‍ಐ, ಪಿಎಫ್ ಕಟ್ಟಿರುವ ಬಗ್ಗೆ ವರದಿಯಾಗಿದೆ. ಈ ಆಧಾರದಲ್ಲಿ ಎಫ್.ಐ.ಆರ್ ಸಹ ದಾಖಲಾಗಿದೆ ಎಂದು ಜಿ.ಪಂ. ಸಿಇಓ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಸಚಿವರು ಮಾತನಾಡಿ ಎಲ್ಲಾ ಸಮಗ್ರ ವರದಿಯೊಂದಿಗೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ವರದಿಯೊಂದಿಗೆ ಈ ಸಂಸ್ಥೆಯ ಮುಖ್ಯಸ್ಥರು ಜಿಲ್ಲಾಪಂಚಾಯತ್ ಸದಸ್ಯರಾಗಿರುವುದರಿಂದ ಇವರೆ ಚೆಕ್ ಡ್ರಾ ಮಾಡಿರುತ್ತಾರೆ. ಇವರ ಸದಸ್ಯತ್ವ ರದ್ದು ಮಾಡಲು ಸರ್ಕಾರಕ್ಕೆ ವರದಿ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಶೌಚಾಲಯ ನಿರ್ಮಾಣದಲ್ಲಿ ಸಾಕಷ್ಟು ಅವ್ಯವಹಾರವಾಗಿದ್ದು, ಈ ಬಗ್ಗೆ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಕಾರ್ಯಾಪಾಲಕ ಇಂಜಿನಿಯರ್ ನೇತೃತ್ವದಲ್ಲಿ ತನಿಖೆ ಮಾಡಿ 1 ತಿಂಗಳಲ್ಲಿ ವರದಿ ನೀಡಲು ಸೂಚಿಸಿದರು.ಕೇಂದ್ರ ಸರ್ಕಾರ ವೃತ್ತಿಪರ ಯುವಜನತೆಗೆ ಸ್ವ ಉದ್ಯೋಗ ಕೈಗೊಳ್ಳಲು ಮುದ್ರಾಯೋಜನೆಯಡಿ ಭದ್ರತಾ ರಹಿತವಾಗಿ 10 ಲಕ್ಷ ಸಾಲ ಕೊಡುವ ಯೋಜನೆ ರೂಪಿಸಲಾಗಿದೆ. ಆದರೆ ಬ್ಯಾಂಕಿನಿಂದ ಸರಿಯಾಗಿ ಯೋಜನೆ ಅನುಷ್ಠಾನ ಮಾಡುತ್ತಿಲ್ಲ. ಜಿಲ್ಲೆಯಲ್ಲಿ 11230 ಫಲಾನುಭವಿಗಳಿಗೆ 607 ಕೋಟಿ ಸಾಲ ವಿತರಿಸಲಾಗಿದ್ದರೂ, ಈ ಬಗ್ಗೆ ಸಾಕಷ್ಟು ದೂರುಗಳಿವೆ ತಾಲ್ಲೂಕುವಾರು ಫಲಾನುಭವಿಗಳ ವಿವರವನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸಂಸದರಾದ ಎ. ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಶಾಸಕರಾದ ಎಂ. ಚಂದ್ರಪ್ಪ ಪೂರ್ಣಿಮ ಶ್ರೀನಿವಾಸ್ ಸೂಚಿಸಿದರು.ಈ ವೇಳೆ ಮುದ್ರಾ ಎಂದರೆ ಏನು ಎಂದು ವಿವರಿಸಲು ಲೀಡ್ ಬ್ಯಾಂಕ್ ಮ್ಯಾನೇಜರ್‍ಗೆ ಕೇಳಿದಾಗ ವಿವರಿಸಲು ತಡವರಿಸಿದಾಗ ಈ ಬಗ್ಗೆ ನಿಮಗೆ ಗೊತ್ತಿಲ್ಲ, ಫಲಾನುಭವಿಗಳಿಗೆ ಯಾವ ರೀತಿ ಅನುಕೂಲ ಕಲ್ಪಿಸುತ್ತೀರಾ ಎಂದು ತಿಳಿಸಿ ಸರಿಪಡಿಸಿಕೊಳ್ಳಲು ಸೂಚಿಸಲಾಯಿತು.
ಲೀಡ್ ಬ್ಯಾಂಕ್ ಮ್ಯಾನೇಜರ್ ಮತ್ತೆ ಇತರೆ ಬ್ಯಾಂಕಿನವರು ಕೇಳುತ್ತಿಲ್ಲ ಎಂದಾಗ ಯಾವ ಉಪಯೋಗವಾಗುತ್ತದೆ ಎಂದು ಶಾಸಕರಾದ ಟಿ. ರಘುಮೂರ್ತಿ ಪ್ರಸ್ತಾಪಿಸಿದಾಗ ನಿನ್ನ ಮೇಲೆ ನಾವೆಲ್ಲರೂ ಕಣ್ಣಿಟ್ಟಿದೇವೆ ಸರಿಯಾಗಿ ಕೆಲಸ ಮಾಡದಿದ್ದಲ್ಲಿ ನೀವು ಮನೆಗೆ ಹೋಗುತ್ತೀರ ಎಂದು ಜಿಲ್ಲಾ ಸಚಿವರು ಎಚ್ಚರಿಸಿದರು.
ಡಾ. ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2016-17, 2017-18 ರಲ್ಲಿನ ಟೆಂಡರ್ ಬಗ್ಗೆ ಕೋರ್ಟ್‍ನಲ್ಲಿದ್ದು ತೆರವುಕೊಳ್ಳಲಾದ ಕಾರಣ ಕೊರೆದ ಕೊಳವೆ ಬಾವಿಗಳಿಗೆ ಪಂಪ್ ಮೋಟರ್ ಕೊಡಲು ಸಾಧ್ಯವಾಗಿಲ್ಲ. ಕೊರೆಯುವುದು ಬಾಕಿ ಇದ್ದು, ಮಳೆಗಾಲ ಮುಗಿದ ನಂತರ ಬಾಕಿ ಫಲಾನುಭವಿಗಳ ಕೊಳವೆ ಬಾವಿ ಕೊರೆಯಲಾಗುತ್ತದೆ. ಎ.ಸಿ.ಎಸ್ ಸಮಾಜ ಕಲ್ಯಾಣ ಇಲಾಖೆ ಕೋರ್ಟ್‍ನಲ್ಲಿ ತಡೆಯಾಜ್ಞೆ ಇದ್ದು, ಸರ್ಕಾರದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಕ್ರಮಕೈಗೊಳ್ಳಲು ಸಭೆಯಲ್ಲಿ ತಿಳಿಸಿ, ವಾರದ ಅವಕಾಶ ನೀಡಲಾಯಿತು.