ಕ್ಯಾತಸಂದ್ರ ಪೊಲೀಸರ ಕಾರ್ಯಾಚರಣೆ: 6 ದರೋಡೆಕೋರರ ಬಂಧನ

ತುಮಕೂರು
    ಆರು ಜನ ದರೋಡೆಕೋರರನ್ನು ಸೆರೆ ಹಿಡಿದಿರುವ ಕ್ಯಾತಸಂದ್ರ ಪೊಲೀಸರು, ಈ ಮೂಲಕ ಒಟ್ಟು 7.5 ಲಕ್ಷ ರೂ. ಅಂದಾಜಿನ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಂಶಿಕೃಷ್ಣ ತಿಳಿಸಿದ್ದಾರೆ.2 ಚಿನ್ನದ ಸರಗಳು, 1 ಚಿನ್ನದ ಉಂಗುರ, ಒಂದು ಟಾಟಾ ಬೋಲ್ಡ್ ಕಾರು, 3 ಬೈಕ್‍ಗಳು, 3 ಮೊಬೈಲ್ ಫೋನ್‍ಗಳನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ 1 ದರೋಡೆ ಪ್ರಕರಣ, 4 ಸುಲಿಗೆ ಪ್ರಕರಣಗಳು, 2 ಕಳವು ಪ್ರಕರಣಗಳನ್ನು ಭೇದಿಸಿದಂತಾಗಿದೆ ಎಂದು ಅವರು ಮಂಗಳವಾರ ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
    ತುಮಕೂರು ನಗರದ ದೇವರಾಯನದುರ್ಗ ರಸ್ತೆಯಲ್ಲಿ ಸಿದ್ಧಗಂಗಾ ಮಠದ ಕ್ರಾಸ್ ಬಳಿ ಒಂದು ಕಾರು ಮತ್ತು ಮೂರು ಬೈಕ್‍ಗಳಲ್ಲಿ ಆರು ಜನರು ಬಂದಿದ್ದು, ಮಾರಕಾಸ್ತ್ರಗಳನ್ನು ಹೊಂದಿದ್ದಾರೆಂದೂ, ಈ ದಾರಿಯಲ್ಲಿ ಬರುವ ವಾಹನಗಳನ್ನು ತಡೆದು ದರೋಡೆ ಮಾಡಲು ಹೊಂಚು ಹಾಕಿದ್ದಾರೆಂದೂ ಅ.17 ರಂದು ರಾತ್ರಿ 8-25 ರಲ್ಲಿ ಕ್ಯಾತಸಂದ್ರ ಪೊಲೀಸರಿಗೆ ಮಾಹಿತಿ ಬಂದಿದೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
     ಅಲ್ಲಿದ್ದ ಯೋಗೀಶ್ ಅಲಿಯಾಸ್ ಯೋಗಿ (28 ವರ್ಷ, ಅಗರೆ ಗ್ರಾಮ, ಬೇಲೂರು ತಾಲ್ಲೂಕು, ಹಾಸನ ಜಿಲ್ಲೆ), ರಮಣ ಅಲಿಯಾಸ್ ರೇಣುಕರಾಜು (24 ವರ್ಷ, ಕಾರು ಚಾಲಕ, ಪೀಣ್ಯ ದಾಸರಹಳ್ಳಿ, ಬೆಂಗಳೂರು), ಬಸವರಾಜು ಅಲಿಯಾಸ್ ಬಸವ (20 ವರ್ಷ, ಬಸವನಹಳ್ಳಿ, ಕೊರಟಗೆರೆ ತಾಲ್ಲೂಕು), ವಿಜಿ ಅಲಿಯಾಸ್ ವಿಜಯಕುಮಾರ್ (32 ವರ್ಷ, ಸರ್ಜಾಪುರ, ಆನೆಕಲ್ ತಾಲ್ಲೂಕು, ಬೆಂಗಳೂರು ಜಿಲ್ಲೆ), ಚೇತನ (22 ವರ್ಷ, ಹನುಮನಾಳ್, ಹಾಸನ ಜಿಲ್ಲೆ), ಸಿದ್ದು ಅಲಿಯಾಸ್ ಸಿದ್ದೇಶ (23 ವರ್ಷ, ದೊಡ್ಡಬಿದರಕಲ್ಲು, ಬೆಂಗಳೂರು ಉತ್ತರ) ಎಂಬುವವರನ್ನು ವಶಕ್ಕೆ ತೆಗೆದುಕೊಂಡರು. 
    ಈ ಆರು ಜನರನ್ನು ಪೊಲೀಸರು ತನಿಖೆಗೊಳಪಡಿಸಿದಾಗ, ಕಳೆದ ಒಂದು ತಿಂಗಳ ಹಿಂದೆ ದೇವರಾಯನದುರ್ಗದಲ್ಲಿ ಸುಲಿಗೆ ಮಾಡಿದ್ದುದು, ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಸುಲಿಗೆ ಮಾಡಿದ್ದುದು, ಬೆಂಗಳೂರು ಜಿಲ್ಲೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಸುಲಿಗೆ ವಾಡಿದ್ದುದು, ಬೆಂಗಳೂರಿನ ಬನಶಂಕರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತು ಡಾಬಸ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದುದು ಬೆಳಕಿಗೆ ಬಂದಿತು.
     ಆರೋಪಿಗಳಿಂದ 2 ಚಿನ್ನದ ಸರಗಳು, 1 ಚಿನ್ನದ ಉಂಗುರ, ಒಂದು ಟಾಟಾ ಬೋಲ್ಡ್ ಕಾರು, 3 ಬೈಕ್‍ಗಳು, 3 ಮೊಬೈಲ್ ಫೆÇೀನ್‍ಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದು, ಇದರಿಂದಾಗಿ 1 ದರೋಡೆ ಪ್ರಕರಣ, 4 ಸುಲಿಗೆ ಪ್ರಕರಣಗಳು, 2 ಕಳವು ಪ್ರಕರಣಗಳನ್ನು ಭೇದಿಸಿದಂತಾಗಿದೆ ಎಂದು ಎಸ್ಪಿ ವಿವರಿಸಿದ್ದಾರೆ. 
      ಎಸ್ಪಿ ಡಾ.ವಂಶಿಕೃಷ್ಣ ಮತ್ತು ಅಡಿಷನಲ್ ಎಸ್ಪಿ ಉದೇಶ್ ಅವರ ಮಾರ್ಗದರ್ಶನದಲ್ಲಿ ತುಮಕೂರು ನಗರ ಡಿವೈಎಸ್ಪಿ ಎಚ್.ಜೆ. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಕ್ಯಾತಸಂದ್ರ ಸರ್ಕಲ್ ಇನ್ಸ್‍ಪೆಕ್ಟರ್ ಎಸ್.ಶ್ರೀಧರ್, ಕ್ಯಾತಸಂದ್ರ ಸಬ್‍ಇನ್ಸ್‍ಪೆಕ್ಟರ್ ರಾಮಪ್ರಸಾದ್, ಎಎಸ್ಸೈಗಳಾದ  ಗುರುಮಲ್ಲಾರಾಧ್ಯ ಮತ್ತು ಕೃಷ್ಣಮೂರ್ತಿ, ಹೆಡ್‍ಕಾನ್ಸ್‍ಟೆಬಲ್‍ಗಳಾದ ಮೋಹನ್‍ಕುಮಾರ್, ದೇವರಾಜು, ಮಂಜುನಾಥ್, ಕಾನ್ಸ್‍ಟೆಬಲ್‍ಗಳಾದ ರಮೇಶ್, ಮನು, ಸೈಯದ್ ರಿಫತ್‍ಅಲಿ, ಮಂಜುನಾಥ್, ಗಣಕಯಂತ್ರ ವಿಭಾಗದ ರಮೇಶ್ ಅವರು ಈ ಪತ್ತೆ ಕಾರ್ಯವನ್ನು ನಡೆಸಿದ್ದಾರೆ. ಕ್ಯಾತಸಂದ್ರ ಪೊಲೀಸರ ಈ ಯಶಸ್ಸನ್ನು ಎಸ್ಪಿ ಡಾ. ವಂಶಿಕೃಷ್ಣ ಪ್ರಶಂಸಿಸಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap