ಮಧುಗಿರಿ: ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ..!

ತುಮಕೂರು:

    ಅಂಗವಿಕಲರ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಲಂಚ ಪಡೆಯುತ್ತಿರುವ ಮಧುಗಿರಿ ತಾಲ್ಲೂಕು ವಿವಿದ್ದೋದೇಶ ಪುನರ್ವಸತಿ ಕಾರ್ಯಕರ್ತರನ್ನು ವಜಾಗೊಳಿಸಿ ಅಂಗವಿಕಲರ ನಡುವೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು. ಇದರಿಂದ ಅಂಗವಿಕಲರನ್ನು ವಂಚಿಸಲಾಗುತ್ತಿದೆ ಎಂದು ಪ್ರತಿಭಟನೆ ನಡೆಸಲಾಯಿತು.

    ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಎದುರು ಶ್ರೀ ಪಂಡಿತ್ ಪುಟ್ಟರಾಜು ಗವಾಯಿ ತಾಲ್ಲೂಕ್ ಅಂಗವಿಕಲರ ಒಕ್ಕೂಟದ ವತಿಯಿಂದ ಸ್ಥಳೀಯ ಅಧಿಕಾರಿಗಳನ್ನು ವಜಾ ಗೊಳಿಸದೇ ವಿಳಂಬ ದೋರಣೆ ಮಾಡುತ್ತಿರುವವರನ್ನು ಖಂಡಿಸಿ ಧರಣಿ ಕೈಗೊಳ್ಳಲಾಯಿತು.ಬಿಎಸ್‍ಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ ಮಾತನಾಡಿ, ಸುಪ್ರಿಂ ಕೋರ್ಟ್ ಆರು ತಿಂಗಳ ಹಿಂದೆ ಇವರನ್ನು ಅಂಗವಿಕಲ ಎಂಬ ಹೆಸರಿನಿಂದ ಕರೆಯಬಾರದೆಂದು ಆದೇಶ ಹೊರಡಿಸಿದೆ.

    ಸಮಾಜದಲ್ಲಿ ಇವರನ್ನು ಸಾಮಾನ್ಯ ಜನರಂತೆ ಗೌರವಯುತವಾಗಿ ಕಾಣಬೇಕು ಎಲ್ಲರಿಗೂ ಸಿಗುವ ಸೌಲಭ್ಯಗಳು ಇವರಿಗೂ ಸಮಾನವಾಗಿ ದೊರಕಬೇಕು. ಸಮಾನ ಪ್ರಾತಿನಿಧ್ಯವನ್ನು ಕೊಡಬೇಕು ಸುಪ್ರೀಂ ಕೋರ್ಟ್ ತಿಳಿಸಿದೆ. ಆದರೆ ಅಂಗವಿಕಲರ ಗುರುತಿನ ಚೀಟಿಗಳನ್ನು ಕೊಡುವ ಸಂದರ್ಭದಲ್ಲಿ ಹಾಗೂ ಸಂಸದರ ನಿಧಿ, ಮತ್ತು ಶಾಸಕರ ನಿಧಿ ಹಾಗೂ ವಿವಿಧ ಇಲಾಖೆಗಳಿಂದ ಬರುವ ಅಂಗವಿಕಲರ ತ್ರಿಚಕ್ರವಾಹನಗಳಿಗೆ ಇಲ್ಲಿನ ಸ್ಥಳೀಯ ಅಧಿಕಾರಿಗಳು, ಹಾಗೂ ಮಧ್ಯವರ್ತಿಗಳು ಅಂಗವಿಕಲರ ಬಳಿ ದುಪ್ಪಟ್ಟು ಹಣವನ್ನು ಪಡೆದು ವಂಚಿಸುತ್ತಿರುವುದು ಶೋಚನೀಯ ಸಂಗತಿ. ಕೂಡಲೇ ಈ ರೀತಿಯ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.

    ಜಿಲ್ಲಾ ಅಂಗವಿಕಲ ಒಕ್ಕೂಟದ ಉಪಾಧ್ಯಕ್ಷ ಚಂದ್ರಶೇಖರಯ್ಯ ಮಾತನಾಡಿ, ಮಧುಗಿರಿ ತಾಲ್ಲೂಕು ವಿವಿದ್ದೋದೇಶ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರಾದ ನಾಗೇಶ ಎಂಬುವರು ತಾವು ಸ್ವತಃ ಅಂಗವಿಕಲರೇ ಆಗಿದ್ದರೂ, ಅಂಗವಿಕಲರ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಲಂಚ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಜಿಲ್ಲಾ ಪಂಚಾಯತ್ ಕಚೇರಿಗೆ ಕಳೆದ ಮೂರು ವರ್ಷದ ಹಿಂದೆಯೆ ದೂರು ನೀಡಿದ್ದರೂ ವಿಚಾರಣೆಗೆ ಬಂದಿಲ್ಲ ಎಂದು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ನಾಗೇಶ್ ಅವರನ್ನು ಮಧುಗಿರಿಯಿಂದ ವಜಾಗೊಳಿಸಿದಿದ್ದರೆ ತಾಲ್ಲೂಕು ಮತ್ತು ಜಿಲ್ಲಾ ಅಂಗವಿಕಲ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಪ್ರತಿಭಟನಾಕಾರರ ಅಹವಾಲನ್ನು ಸ್ವೀಕರಿಸಿ ಮಾತನಾಡಿ, ಇದಕ್ಕೆ ಸಿಬಿಐ ಬರಬೇಕು, ಅವರಿಲ್ಲದೆ ಏನನ್ನು ಮಾಡಲಿಕ್ಕಾಗುವುದಿಲ್ಲ. ನೀವೆಲ್ಲರೂ ಸಿಬಿಐ ಬರುವವರೆಗೆ ಇಲ್ಲೇ ಇರಿ, ಕಾಫಿ ಕೊಡಿಸುತ್ತೇವೆ, ನೀರು ಕೊಡಿಸುತ್ತೇವೆ ಎಂದು ಲೇವಡಿ ಉತ್ತರಗಳನ್ನು ನೀಡಿದರು. ಮಾತು ಮುಂದುವರೆಸಿದರ ಅವರು, ಯಾವುದೇ ಅಧಿಕಾರಿಗಳನ್ನು ಸುಮ್ಮನೆ ವಜಾಗೊಳಿಸುವುದಕ್ಕಾಗುವುದಿಲ್ಲ ಕಾನೂನು ರೀತಿಯಲ್ಲಿ ಮಾಡಬೇಕು ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕೊಟ್ಟು ಲಿಖಿತ ಅರ್ಜಿಯನ್ನು ನೀಡಿದರೆ ಮರುದಿನವೇ ಕ್ರಮ ಕೈಗೊಂಡು ವಿಚಾರಣೆಗೆ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದರು. ಪ್ರತಿಭಟನೆಯಲ್ಲಿ ಶ್ರೀ ಪಂಡಿತ್ ಪುಟ್ಟರಾಜು ಗವಾಯಿ ತಾಲ್ಲೂಕು ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಹನುಮಂತರಾಯಪ್ಪ, ರಂಗನಾಥಪ್ಪ ಸಿದ್ದಾಪುರ, ವೆಂಕಟೇಶ್ ಮಧುಗಿರಿ, ವಾಸು, ಜ್ಯೋತಿ, ಲತಮ್ಮ, ಕೆಂಚಪ್ಪ ಸೇರಿದಂತೆ ಮುಂತಾದವರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap