ಫೋಸ್ಕೋ ಪ್ರಕರಣ ದಾಖಲಾತಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ..!

ಬೆಂಗಳೂರು

      ದೇಶದ ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಕಳೆದ ವರ್ಷ ಮಕ್ಕಳ ವಿರುದ್ಧ ಅತಿಹೆಚ್ಚು ಅಪರಾಧ ಕೃತ್ಯಗಳು ಸಂಭವಿಸಿರುವ ವರದಿಯಾಗಿದ್ದು ಆತಂಕ ಹೆಚ್ಚಿಸಿದೆ.ದೇಶದಲ್ಲಿ ಮಕ್ಕಳ ವಿರುದ್ಧದ ಅಪರಾಧ ಕೃತ್ಯಗಳ ಸಂಖ್ಯೆ ಶೇ. 20 ರಷ್ಟು ಹೆಚ್ಚಳವಾಗಿದ್ದರೆ, ರಾಜ್ಯದಲ್ಲಿ ಶೇ. 32 ರಷ್ಟು ಏರಿಕೆಯಾಗಿರುವುದು ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದಲ್ಲಿ ವರದಿಯಲ್ಲಿ ಪತ್ತೆಯಾಗಿದೆ

     ದಕ್ಷಿಣ ರಾಜ್ಯಗಳ ಪೈಕಿ ಕೇರಳದಲ್ಲಿ ಶೇ. 23.7, ತಮಿಳುನಾಡಿನಲ್ಲಿ ಶೇ. 23.6, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ ಶೇ. 29.8 ಮತ್ತು 23.1 ರಷ್ಟು ಹೆಚ್ಚಳ ಕಂಡಿದ್ದು ರಾಜ್ಯವು ಅದಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಹೊಂದಿರುವುದು ಕಂಡುಬಂದಿದೆ.

    ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳಲ್ಲಿ ಕರ್ನಾಟಕ ದೇಶದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಮಕ್ಕಳ ವಿರುದ್ಧದ ಅಪರಾಧಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದ್ದು, ಒಟ್ಟು 1,582 ಪ್ರಕರಣಗಳು ದಾಖಲಾಗಿವೆ.ದೆಹಲಿಯಲ್ಲಿ ಗರಿಷ್ಠ ಅಂದರೆ, ಈ ಪ್ರಮಾಣ 6,844, ಮುಂಬೈನಲ್ಲಿ 3,290, ಪ್ರಕರಣಗಳು ದಾಖಲಾಗಿವೆ. ಮಕ್ಕಳ ವಿರುದ್ಧದ ಅಪರಾಧಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದ್ದರೆ, ಮಕ್ಕಳ ಅಪಹರಣ, ಹತ್ಯೆ, ಅಪ್ರಾಪ್ತ ವಯಸ್ಸಿನ ಮಕ್ಕಳ ಸರಬರಾಜು ಮತ್ತು ಫೋಕ್ಸೋ ಕಾಯ್ದೆಯಡಿ ಅಪರಾಧಗಳ ವಿಚಾರದಲ್ಲಿ ಬೆಂಗಳೂರು ಮೂರು ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

      ವಿಶೇಷ ಸುರಕ್ಷಾ ಯೋಜನೆಗಳ ಲಭ್ಯತೆ ಹೆಚ್ಚಿಸುವ ಗುಣಮಟ್ಟದ ಸೇವೆಗಳ ಮತ್ತು ದೊಡ್ಡಪ್ರಮಾಣದ ಜಾಗೃತಿ, ಅಭಿಯಾನಗಳ ಅಗತ್ಯವಿದೆ ಎಂದು ವಿಭಾಗದ ನೀತಿ ಸಂಶೋಧನೆ, ಪ್ರತಿಪಾದನೆ ಮತ್ತು ದಾಖಲಾತಿ ನಿರ್ದೇಶಕಿ ಪ್ರೀತಿ ಮಹರಾ ಅವರು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link