ಹಾಸ್ಟೆಲ್​ ವಾರ್ಡನ್​​ನಿಂದ ಥಳಿತಕ್ಕೊಳಗಾದ ನಾಲ್ಕನೇ ತರಗತಿ ಬಾಲಕ ಸಾವು

ಹುಬ್ಬಳ್ಳಿ: 

   ಹಾಸ್ಟೆಲ್​ ವಾರ್ಡ್​ನಿಂದ ಹಲ್ಲೆಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ಕನೇ ತರಗತಿ ಪುಟ್ಟ ಬಾಲಕ ಮೃತಪಟ್ಟಿರುವ ದುರ್ಘಟನೆ ಭಾನುವಾರ ನಡೆದಿದೆ.  ಹುಬ್ಬಳ್ಳಿಯ ನೇಕಾರ ನಗರದ ಮೃತ್ಯಂಜಯ ಹಿರೇಮಠ್​ ಎಂಬುವರ ಮಗ ನಾದವಿಜಯ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ. ಮೂರು ತಿಂಗಳ ಹಿಂದೆ ನಾದವಿಜಯನನ್ನು ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿರುವ ‘ಛಾತ್ರಾಲಯ ವಸತಿ’ ನಿಲಯಕ್ಕೆ ಸೇರಿಸಲಾಗಿತ್ತು.

  ವಿಜಯ ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡಿದ್ದಾನೆಂದು ವಾರ್ಡನ್‌ ಅವನ ಹೊಟ್ಟೆಗೆ ಒದ್ದು ಮನಬಂದಂತೆ ಥಳಿಸಿದ್ದಾರೆ . ಇದರಿಂದ ಬಾಲಕನಿಗೆ ಗಂಭೀರ ಗಾಯವಾಗಿತ್ತು. ಮತ್ತು ಹೊಟ್ಟೆಯಲ್ಲಿ ಬಾವು ಕಾಣಿಸಿಕೊಂಡಿದೆ ನಂತರ ಬಾಲಕ ಒಂದೂವರೆ ತಿಂಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಹುಡುಗನನ್ನು. ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಮೊದಲು ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆಗೂ ಮುನ್ನವೇ ಭಾನುವಾರ ಆಸ್ಪತ್ರೆಯಲ್ಲೆ ಮೃತಪಟ್ಟಿದ್ದಾನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link