ಚಿತ್ರದುರ್ಗ:
ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿಯನ್ನು ಅನಗತ್ಯವಾಗಿ ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ನೀಡಿದರು.
ಪತ್ರಕರ್ತರಾಗಿ ಜನಪರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುವ ದೊಡ್ಡಿಪಾಳ್ಯ ನರಸಿಂಹಮೂರ್ತಿರವರನ್ನು 20 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಿ ಸಂವಿಧಾನದ ನಾಲ್ಕನೆ ಅಂಗ ಪತ್ರಿಕೋಧ್ಯಮಕ್ಕೆ ಅವಮಾನ ಮಾಡಲಾಗಿದೆಯಲ್ಲದೆ ಪತ್ರಿಕಾ ಸ್ವಾತಂತಕ್ಕೆ ಧಕ್ಕೆ ತರಲಾಗಿದೆ ಎಂದು ಪ್ರತಿಭಟನಾನಿರತ ಪತ್ರಕರ್ತರು ಆಪಾದಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಕರ್ತರಿಗೆ ನಿಷ್ಠಾವಂತರಾಗಿ ತನ್ನ ಅಭಿಪ್ರಾಯ ಗಳನ್ನು ಸಾಂವಿಧಾನಿಕ ಬದ್ಧವಾಗಿ ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವಂತಾಗಬೇಕು. ಇಲ್ಲವಾದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ನಿರ್ಭಯವಾಗಿ ವೃತ್ತಿಪರತೆ ನಡೆಸುವಂತಹ ಪತ್ರಕರ್ತರನ್ನು ಮತ್ತು ಹೋರಾಟಗಾರರನ್ನು ಭಯಗೊಳಿಸುವಂತಹ ಹುನ್ನಾರವನ್ನು ಸರ್ಕಾರಗಳು ಮಾಡಬಾರದು. ಹಾಗಾಗಿ ಈ ಕೂಡಲೇ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಬಿಡುಗಡೆಗೊಳಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶ ಕಲ್ಪಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಮತ್ತು ಸಂಬಂಧಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೆಕೆಂದು ಆಗ್ರಹಿಸಿದರು.
ಪ್ರತಿಭಟನೆ ನಿರತರಲ್ಲಿಗೆ ಬಂದು ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸಂಗಪ್ಪ ಪತ್ರಕರ್ತರ ಹಿತಕಾಪಾಡುವಂತೆ ಮಾಡಿದ ಮನವಿಯನ್ನು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಕಳುಹಿಸಿ ಪತ್ರಕರ್ತರ ಮನವಿ ಕಳುಹಿಸುವ ಕಾರ್ಯಮಾಡಲಾಗುವುದು ಎಂದರು
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಲಕ್ಷ್ಮಣ್, ಉಪಾಧ್ಯಕ್ಷ ಕುಮಾರ್ ಸ್ವಾಮಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡಗೆರೆ, ಖಜಾಂಚಿ ಮೆಘ ಗಂಗಾಧರ ನಾಯ್ಕ, ನಿರ್ದೇಶಕರುಗಳಾದ ನಾಕೀಕೆರೆ ತಿಪ್ಪೇಸ್ವಾಮಿ, ಸಿ.ಪಿ ಮಾರುತಿ, ಪತ್ರಕರ್ತರುಗಳಾದ ಜಿ.ಬಿ. ನಾಗರಾಜ್, ಓಂಕಾರ ಮೂರ್ತಿ, ಎಂ.ಎನ್. ಅಹೋಬಳಪತಿ, ಜೆ.ತಿಪ್ಪೇಸ್ವಾಮಿ, ಪುಟ್ಟಸ್ವಾಮಿ, ಗೊಂಡಬಾಳು ಬಸವರಾಜ್, ದ್ವಾರಕನಾಥ್, ಬಿ.ಆರ್.ನಾಗೇಶ್ ಕೆ.ಎಂ. ಮುತ್ತುಸ್ವಾಮಿ, ಬಸವರಾಜ್ ಮುದೆನೂರ್, ಕಿರಣ್ ಕುಮಾರ್, ನೂರ್ ಅಹಮದ್, ಗಜೇಂದ್ರ, ಶೀನಿವಾಸ್, ಸುಮಿತ್ರ ಪಾಲ್,ದರ್ಶನ್, ಗೌನಹಳ್ಳಿ ಗೋವಿಂದಪ್ಪ, ರಾಜು, ಬ್ರಹ್ಮಗಿರಿ ಶ್ರೀನಿವಾಸ್, ಇನ್ನು ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
