ಶಾಸಕರಿಗೆ ಧೈರ್ಯವಿದ್ದರೆ ವರದಿ ಬಹಿರಂಗ ಪಡಿಸಲಿ

ಚಿತ್ರದುರ್ಗ:

     ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ತರಲು ಬಿಡುವುದಿಲ್ಲ ಎಂದು ತರಹೆವಾರಿ ಹೇಳಿಕೆ ನೀಡುತ್ತಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪನವರಿಗೆ ನಿಜವಾಗಿಯೂ ದೈರ್ಯವಿದ್ದರೆ ಸರ್ಕಾರದ ಜೊತೆ ಮಾತನಾಡಿ ವರದಿಯನ್ನು ಬಹಿರಂಗಪಡಿಸಲಿ ಎಂದು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಮುತ್ತಣ್ಣ ವೈ.ಬೆಣ್ಣೂರ ಸವಾಲು ಹಾಕಿದರು.

     ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನ್ಯಾಯಮೂರ್ತಿ ಎ.ಜೆ.ಸದಾಶಿವರವರು ಪರಿಶಿಷ್ಟ ಜಾತಿಯ 101 ಉಪಜಾತಿಗಳ ಸ್ಪರ್ಶ-ಅಸ್ಪರ್ಶ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲೇನಿದೆ ಎನ್ನುವುದು ಸರ್ಕಾರಕ್ಕೆ ಹಾಗೂ ಶಾಸಕರುಗಳಿಗೆ ಗೊತ್ತಿಲ್ಲ. ಹಾಗಾಗಿ ವರದಿಯಲ್ಲಿರುವ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೆ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದರು

    ಹಿಂದಿನ ಸಮ್ಮಿಶ್ರ ಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮುಟ್ಟಲು ಇಲ್ಲ. ತಿರಸ್ಕರಿಸಲೂ ಇಲ್ಲ. ವೈಜ್ಞಾನಿಕವಾಗಿ ಸಿದ್ದಪಡಿಸಿರುವ ವರದಿಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಅಡ್ಡಗಾಲು ಹಾಕುತ್ತಿರುವುದು ತರವಲ್ಲದ ನಡವಳಿಕೆ ಎಂದರು

    ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಶಿವಾನಂದ ಮಬ್ರೂಮಕರ್ ಮಾತನಾಡಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಿಂದ ಬುದ್ದ, ಬಸವ, ಅಂಬೇಡ್ಕರ್‍ರವರ ಆಸೆಯಂತೆ ಎಲ್ಲರಿಗೂ ಸಮಾನತೆ ಸಿಗಲಿದೆ. ಇದರಿಂದ ಭೋವಿ, ಲಂಬಾಣಿ ಜನಾಂಗಕ್ಕೆ ಯಾವುದೇ ಅನ್ಯಾಯವಾಗುವುದಿಲ್ಲ ಎನ್ನುವುದನ್ನು ಸದಾಶಿವ ಆಯೋಗದ ವರದಿ ವಿರೋಧಿಸುತ್ತಿರುವವರು ತಿಳಿದುಕೊಳ್ಳಲಿ ಎಂದರು

    ನ್ಯಾಯವಾದಿ ಬೆನಕನಹಳ್ಳಿ ಎನ್.ಚಂದ್ರಪ್ಪ ಮಾತನಾಡುತ್ತ ಸದಾಶಿವ ಆಯೋಗದ ವರದಿ ಜಾರಿಗಾಗಿ ನಿರಂತರವಾಗಿ ಧರಣಿ, ಹೋರಾಟ, ಪಂಜಿನ ಮೆರವಣಿಗೆ, ಪಾದಯಾತ್ರೆ ನಡೆಸಿಕೊಂಡು ಬರುತ್ತಿದ್ದೇವೆ. ರಾಜ್ಯಾದ್ಯಂತ ಜಿಲ್ಲಾವಾರು ಪ್ರವಾಸ ಮಾಡಿ ಪರಿಶಿಷ್ಟ ಜಾತಿಯ 101 ಉಪಜಾತಿಗಳ ಸಾಮಾಜಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಿ ನ್ಯಾಯಮೂರ್ತಿ ಎ.ಜೆ. ಸದಾಶಿವ ರವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಜಾರಿಗೆ ತರುವಲ್ಲಿ ಜನಪ್ರತಿನಿಧಿಗಳಿಗೆ ಆಸಕ್ತಿ ಇಲ್ಲದಂತಾಗಿದೆ ಎಂದರು

     ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷ ಹುಲ್ಲೂರು ಕುಮಾರಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ ಕೂಡಿಗೆಹಳ್ಳಿ, ಸಿ.ಮುನಿಕೃಷ್ಣ, ಮೂರ್ತಿ ತಿಪ್ಪಗೊಂಡನಹಳ್ಳಿ, ರವಿರಾಜ್ ಕೋಗಿಲು, ತಾಲೂಕು ಅಧ್ಯಕ್ಷ ಎಸ್.ಲಿಂಗರಾಜು, ಕೆ.ರಾಜಣ್ಣ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap