ಬಾಗಲಕೋಟೆ:

ಮನೆ ಮೇಲ್ಛಾವಣಿ ಕುಸಿದು 11 ತಿಂಗಳ ಕೂಸು ಸಾವನ್ನಪ್ಪಿದ ಘಟನೆ ಬಾಗಲಕೋಟೆಯ ತೇರದಾಳ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ನಡೆದಿದೆ.
ಅಚಲ ಬುಜಬಲಿ ತಿಮ್ಮಣ್ಣವರ ಮೃತ ಮಗು. ತಮದಡ್ಡಿ ಗ್ರಾಮ ಪ್ರವಾಹಕ್ಕೆ ಸಿಲುಕಿತ್ತು. ಹೀಗಾಗಿ ಮಣ್ಣಿನ ಮನೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಮಗುವಿನ ತಾಯಿ ಅಕ್ಷತಾ ಬುಜಬಲಿ ತಿಮ್ಮಣ್ಣವರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ತೇರದಾಳ ಶಾಸಕ ಸಿದ್ದು ಸವದಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬಾಲಕನ ಕುಟುಂಬಸ್ಥರಿಗೆ ಐದು ಲಕ್ಷ ಪರಿಹಾರ ಭರವಸೆ ನೀಡಿದ್ದಾರೆ. ಗಾಯಾಳು ಮಹಿಳೆಯ ಆಸ್ಪತ್ರೆ ವೆಚ್ಚ ಸರಕಾರದಿಂದ ಭರಿಸುವ ಭರವಸೆಯನ್ನ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








