ಪಾವಗಡ
ಪಟ್ಟಣದ ಎಸ್ಬಿಐ ಬ್ಯಾಂಕ್ನಲ್ಲಿ ಪಾಸ್ ಪುಸ್ತಕ ಎಂಟ್ರಿ ಮಾಡುವ ಯಂತ್ರ ಕೆಟ್ಟು ಹೋಗಿದ್ದು, ಕಳೆದ 3 ತಿಂಗಳಿಂದ ಗ್ರಾಹಕರು ಪರದಾಡುವಂತಾಗಿದೆ. ಪಟ್ಟಣದ ಹೊಸಬಸ್ ನಿಲ್ದಾಣದ ಸಮೀಪ ಇರುವ ಈ ಬ್ಯಾಂಕ್ನಲ್ಲಿ ಸಾವಿರಾರು ಗ್ರಾಹಕರು ಖಾತೆಗಳನ್ನು ತೆರೆದು ವ್ಯವಹಾರ ಮಾಡುತ್ತಿದ್ದಾರೆ. ತಮ್ಮ ಖಾತೆಗಳಿಗೆ ಹಣ ಜಮೆಯಾಗಿರುವ ಬಗ್ಗೆ ನಿಖರ ಮಾಹಿತಿ ಪಡೆಯಲು ಪಾಸ್ ಪುಸ್ತಕಕ್ಕೆ ಎಂಟ್ರಿ ಮಾಡಿಸಬೇಕಾಗುತ್ತದೆ. ಆದರೆ ಕಳೆದ 3 ತಿಂಗಳಿಂದ ಎಂಟ್ರಿ ಮಾಡುವ ಯಂತ್ರ ಕೆಟ್ಟು ಹೋಗಿದ್ದು, ಇದರಿಂದ ಗ್ರಾಹಕರು ನಿತ್ಯ ಬ್ಯಾಂಕ್ಗೆ ಅಲೆದು ರೋಸಿ ಹೋಗಿದ್ದಾರೆ.
ಸರ್ಕಾರಿ ನೌಕರರು, ನಿವೃತ್ತ ನೌಕರರು, ಅಂಗವಿಕಲರು, ಸ್ವಹಾಯಸಂಘಗಳ ಸದಸ್ಯರುಗಳು, ಬಿಸಿಯೂಟ ಯೋಜನೆಯ ನೌಕರರು, ಅಸಂಘಟಿತ ಕಾರ್ಮಿಕರು, ವ್ಯಾಪಾರಸ್ಥರು, ಇತರೆ ಗ್ರಾಹಕರು ಈ ಬ್ಯಾಂಕ್ನಲ್ಲಿ ಖಾತೆ ತೆರೆದು ಲಕ್ಷಾಂತರ ರೂ.ಗಳ ವ್ಯವಹಾರ ನಡೆಸುತ್ತಿದ್ದಾರೆ. ಆದರೆ ಕಾಲಕಾಲಕ್ಕೆ ತಮ್ಮ ವ್ಯವಹಾರದ ಬಗ್ಗೆ ದಾಖಲೆ ಆಗದಿದ್ದ ಪಕ್ಷದಲ್ಲಿ ತಮ್ಮ ಖಾತೆಯ ಬಗ್ಗೆ ಖಚಿತ ಮಾಹಿತಿ ಸಿಗುವುದಿಲ್ಲ.
ಬ್ಯಾಂಕಿನಲ್ಲಿ ಕಂಪ್ಯೂಟರ್ ಮೂಲಕ ಎಂಟ್ರಿ ಮಾಡಿಸಬೇಕಾದರೆ ಅರ್ಜಿ ಬರೆದು ಘಂಟೆಗಟ್ಟಲೆ ಕಾಯಬೇಕು. ಅಲ್ಲದೆ ಇದಕ್ಕೆ ಸೇವಾ ಶುಲ್ಕ ನಮ್ಮ ಖಾತೆಯಿಂದ ಕಡಿತಗೊಳ್ಳುತ್ತದೆ ಎಂದು ಗ್ರಾಹಕರಾದ ರಾಮಾಂಜಿನಪ್ಪ, ಹನುಮಂತರಾಯಪ್ಪ, ಸುವರ್ಣ, ಅನುಸೂಯಮ್ಮ ಚಂದ್ರಕಲಾ ಅಲವತ್ತುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








