450ರ ಗಡಿ ದಾಟಿದ ದೆಹಲಿ ವಾಯು ಮಾಲಿನ್ಯ ಸೂಚಂಕ..!

ನವದೆಹಲಿ

     ದೇಶದ ಶಕ್ತಿ ಕೇಂದ್ರ ದೆಹಲಿಯಲ್ಲಿ ದಿನೇದಿನೆ ವಾಯು ಗುಣಮಟ್ಟ ಕುಸಿಯುತ್ತಿರುವ ಕಾರಣ ದೆಹಲಿಯಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಭೀತಿ ಹೆಚ್ಚಾಗ ತೊಡಗಿದೆ .

   ದೆಹಲಿಯಲ್ಲಿ ಮಾಲಿನ್ಯ ಮಟ್ಟ ತೀರಾ ಹದಗೆಟ್ಟಿದ್ದು ಅಸ್ತಮಾದಿಂದ ಬಳಲುತ್ತಿರುವವರು ಉಸಿರಾಟದ ತೊಂದರೆಗೊಳಗಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ ಮತ್ತು ಬೆಳಿಗ್ಗೆ ಸಮಯದಲ್ಲಿ ಆದಷ್ಟು ರೋಗಿಗಳು ಹೊರಗಡೆ ಬರದಿರಲು ಸೂಚನೆ ನೀಡಲಾಗಿದೆ.

   ಏಮ್ಸ್ ಆಸ್ಪತ್ರೆಯ ಪ್ರಮುಖ ವೈದ್ಯ ವಿಜಯ್ ಹಡ್ಡಾ ಅವರು ಆಸ್ತಮಾದೊಂದಿಗೆ ಹೋರಾಡುವ ರೋಗಿಗಳು ವಾಯುಮಾಲಿನ್ಯದಿಂದಾಗಿ ಶಾಶ್ವತ ಅಸ್ತಮಾ ಹೊಂದುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.ದಿನದಿಂದ ದಿನಕ್ಕೆ ಮಾಲಿನ್ಯ ಮಟ್ಟ ಹೆಚ್ಚಳವಾಗುತ್ತಿರುವುದರಿಂದ ಜನರ ನಿತ್ಯ ಜೀವನದಲ್ಲಿ ಬದಲಾವಣೆಯಾಗುತ್ತಿದೆ.

     ಹಲವರಿಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ, ಗಂಟಲು ಮತ್ತು ಕಣ್ಣುಗಳಲ್ಲಿ ಉರಿ, ಸೀನುವಿಕೆ, ತಲೆನೋವು ಮತ್ತು ಬಾಯಿಯಲ್ಲಿ ಕಹಿ ರುಚಿ ಇತ್ಯಾದಿ ತೊಂದರೆಗಳುಂಟಾಗುತ್ತಿದ್ದು. ಇವೆಲ್ಲ ಆರಂಭಿಕ ಲಕ್ಷಣಗಳಾಗಿದ್ದು ಮುಂದೆ ಗಂಭೀರ ಉಸಿರಾಟದ ತೊಂದರೆಯುಂಟಾಗಬಹುದು ಎಂದು ಹಡ್ಡಾ ಹೇಳಿದ್ದಾರೆ.

     ದೀಪಾವಳಿ ಕಳೆದ ನಂತರ ದೆಹಲಿ-ಎನ್ ಸಿಆರ್ ಸುತ್ತಮುತ್ತ ಆಸ್ಪತ್ರೆಗಳಲ್ಲಿ ಉಸಿರಾಟ ತೊಂದರೆ, ಅಸ್ತಮಾ, ಕಣ್ಣುರಿ, ಅಲರ್ಜಿ ಇತ್ಯಾದಿ ಸಮಸ್ಯೆಗಳಿಂದ ರೋಗಿಗಳು ತುಂಬಿ ಹೋಗಿದ್ದಾರೆ. ಬೆಳಗ್ಗೆ 10 ಗಂಟೆಗೆ ದೆಹಲಿಯ ವಾಯುಮಾಲಿನ್ಯ ಸೂಚ್ಯಂಕ 450ರ ಆಸುಪಾಸಿನಲ್ಲಿತ್ತು ಎನ್ನಲಾಗಿದೆ. ಈ ಮಧ್ಯೆ ಆರೋಗ್ಯ ದೃಷ್ಟಿಯಿಂದ ಶಾಲೆಗಳಿಗೆ ಇದೇ 5ರವರೆಗೆ ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

      ಧೂಳು, ಹೊಗೆಯಿಂದ ದಟ್ಟ ವಾಯುಮಾಲಿನ್ಯ, ನೆರೆಯ ರಾಜ್ಯಗಳಲ್ಲಿ ಬೆಳೆ ಕಟಾವು ಮಾಡಿದ ನಂತರ ಕಳಪೆಯನ್ನು ತೆಗೆಯಲು ಬೆಂಕಿಯಿಂದ ಸುಡುವುದರಿಂದ ಮತ್ತು ಮಣ್ಣಿನಿಂದ ಧೂಳಿಗಳಿಂದಾಗಿಯೇ ಇಂದು ದೆಹಲಿ ಸುತ್ತಮುತ್ತ ಇಷ್ಟೊಂದು ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link