ಕಣ್ವ ಕರ್ಮ ಕಾಂಡ : ವ್ಯವಸ್ಥಾಪಕ ನಿರ್ದೇಶಕರಿಗೆ ನ್ಯಾಯಾಂಗ ಬಂಧನ..!

ಬೆಂಗಳೂರು

    ಅಧಿಕ ಬಡ್ಡಿಯ ಆಸೆ ತೋರಿಸಿ ಕೋಟ್ಯಂತರ ರೂ ನಿಶ್ಚಿತ ಠೇವಣಿ ಸಂಗ್ರಹಿಸಿ ವಂಚಿಸಿರುವ ಆರೋಪದಡಿ ಬಸವೇಶ್ವರ ನಗರ ಪೊಲೀಸರು ಬಂಧಿಸಿರುವ ಕಣ್ವ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೆಶಕ ಎನ್.ನಂಜುಂಡಯ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

      ಕಣ್ವ ಸಮೂಹ ಸಂಸ್ಥೆಯ ಶ್ರೀ ಕಣ್ವ ಸೌಹಾರ್ದ ಕೋಆಪರೇಟಿವ್ ಸೊಸೈಟಿಯಲ್ಲಿ ಹಣ ಠೇವಣಿ ಇರಿಸಿದ್ದ ಯಲಹಂಕದ ಪದ್ಮಾವತಿ,ನಿವೃತ್ತ ನೌಕರ ಗೋಪಾಲ್ ಸೇರಿದಂತೆ ಮೂವರು ಸದಸ್ಯರು ನಮಗೆ ವಂಚನೆ ನಡೆಸಲಾಗಿದೆ ಎಂದು ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡು ನಂಜುಂಡಯ್ಯ ಅವರನ್ನು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

     ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು ಜೈಲಿಗೆ ಕಳುಹಿಸಿರುವ ನಂಜುಂಡಯ್ಯ ಅವರನ್ನು ವಿಚಾರಣೆ ನಡೆಸಿ ವಂಚನೆ ಹಾಗೂ ಹಣಕಾಸಿನ ವ್ಯವಹಾರದ ಮಾಹಿತಿಯನ್ನು ಪೊಲೀಸರು ಪಡೆಯುತ್ತಿದ್ದಾರೆ.ವಂಚನೆ ಸಂಬಂಧ ಸಂಸ್ಥೆಯ ಶ್ರೀ ಕಣ್ವ ಸೌಹರ‍್ದ ಕೋಆಪರೇಟಿವ್ ಸೊಸೈಟಿಯ ಕೆಲವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬನ್ನೊತ್ ತಿಳಿಸಿದ್ದಾರೆ.

    ಬಸವೇಶ್ವರ ನಗರದಲ್ಲಿರುವ ಕಂಪನಿಯ ಕಚೇರಿಯಲ್ಲಿ ತಪಾಸಣೆ ನಡೆಸಿ ಕೆಲ ದಾಖಲೆಗಳನ್ನು ಸಂಗ್ರಹಿಸಲಾಗಿದೆ.ಸೊಸೈಟಿಯ ಕೆಲ ಸಿಬ್ಬಂದಿಯಿಂದಲೂ ಹೇಳಿಕೆ ಪಡೆಯಲಾಗಿದ್ದು ಯಾವಾಗ ಸೊಸೈಟಿ ಆರಂಭವಾಗಿತ್ತುಇಲ್ಲಿಯವರೆಗೆ ಎಷ್ಟು ಮಂದಿ ಹಣ ತೊಡಗಿಸಿದ್ದರು ಅವರಿಗೆ ಸಕಾಲಕ್ಕೆ ಬಡ್ಡಿ ಅಸಲು ಹಿಂತಿರುಗಿಸಲಾಗುತ್ತಿದೆಯೇ ಇನ್ನಿತರ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

    ಸೊಸೈಟಿಯಲ್ಲಿ ಹಣ ಠೇವಣಿ ಇಟ್ಟಿರುವ ಎಲ್ಲರಿಗೂ ಅಸಲು ಬಡ್ಡಿ ಹಿಂತಿರುಗಿಸಲಾಗುತ್ತಿದೆ ಎಲ್ಲರೂ ಒಂದೇ ಬಾರಿಗೆ ಬಂದರೆ ಹಿಂತಿರುಗಿಸುವುದು ಕಷ್ಟವಾಗಲಿದ್ದು ಸ್ವಲ್ಪ ದಿನ ಕಾಯುವಂತೆ ಠೇವಣಿದಾರರಿಗೆ ಮನವಿ ಮಾಡಲಾಗಿದೆ.‘ಕಣ್ವ ಸಮೂಹ ಸಂಸ್ಥೆಯು ಗರ‍್ಮೆಂಟ್ಸ್ ಉದ್ಯಮದಲ್ಲಿ ನಷ್ಠ ಉಂಟಾಗಿರುವುದರಿಂದ ಸಮಸ್ಯೆ ಎದುರಾಗಿದ್ದು ಕೆಲ ದಿನಗಳಲ್ಲಿಯೇ ನಿವಾರಣೆಯಾಗಲಿದೆ ಎಂದು ನಂಜುಂಡಯ್ಯ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದಾರೆ ಎಂದರು.
 

ಸಂಕಷ್ಟ ಕಾರಣ

       ಕಳೆದ ೨೦೦೫ರಲ್ಲಿ ಸ್ಥಾಪಿಸಲಾಗಿದ್ದ ಸೊಸೈಟಿ ಆರಂಭದಲ್ಲಿ ಉತ್ತಮ ಪ್ರಗತಿ ಕಂಡಿತ್ತಾದರೂ ಇತ್ತೀಚೆಗೆ ಸಾಲ ಪಡೆದವರು ವಾಪಸು ಕೊಡದಿದ್ದರಿಂದ ಸೊಸೈಟಿಯು ರ‍್ಥಿಕ ಸಂಕಷ್ಟದಲ್ಲಿದೆ. ಕಣ್ವ ಸಂಸ್ಥೆಗೆ ಸೇರಿದ ಕೋಟ್ಯಾಂತರ ಮೌಲ್ಯದ ಆಸ್ತಿಯಿದ್ದು ಅದನ್ನು ಮಾರಾಟ ಮಾಡಿ ಠೇವಣಿದಾರರಿಗೆ ಹಣ ನೀಡಲು ಕಂಪನಿ ಸಿದ್ಧವಿದೆ

     ಮೂರು ವರ್ಷದಿಂದ ಸೊಸೈಟಿಯ  ಆರ್ಥಿಕ ಸ್ಥಿತಿ ಕುಗ್ಗಿದೆ. 31 ತಿಂಗಳಲ್ಲಿ ಠೇವಣಿ ಅವಧಿ ಮುಕ್ತಾಯವಾಗಿದ್ದಕ್ಕೆ ಸಹ ಸದಸ್ಯರಿಗೆ 267 ಕೋಟಿ ಮರು ಪಾವತಿ ಮಾಡಿದ್ದೇವೆ ಉಳಿದವರಿಗೂ ಹಣ ವಾಪಸ್ ನೀಡಲಿದ್ದು ಠೇವಣಿದಾರರು ಆತಂಕ ಪಡುವ ಆಗತ್ಯವಿಲ್ಲ ಸಾಲಗಾರರಿಂದ ಹಣ ವಸೂಲಿ ಮಾಡುವ ಕೆಲಸ ನಡೆದಿದೆ. ಎಲ್ಲ ಸದಸ್ಯರಿಗೂ ಹಣ ಮರುಪಾವತಿ ಮಾಡುವ ಸಾಮರ್ಥ್ಯ ಸೊಸೈಟಿಗೆ ಇದೆ

     ಐಎಂಎ ಕಂಪನಿ ವಂಚನೆ ಪ್ರಕರಣ ಬಯಲಾದ ನಂತರ, ನಮ್ಮ ಸೊಸೈಟಿ ಬಗ್ಗೆ ಕೆಲವರು ಅಪಪ್ರಚಾರ ಮಾಡಿದರು. ಹಲವು ಸದಸ್ಯರು ತಾವು ಠೇವಣಿ ಇಟ್ಟಿದ್ದ ಹಣವನ್ನು ವಾಪಸು ಪಡೆದರು. ಎಲ್ಲರಿಗೂ ಹಣ ನೀಡುತ್ತಿದ್ದು, ಕೊನೆಯ ಸದಸ್ಯರಿಗೆ ಹಣ ಸಿಗಲಿಲ್ಲ. ಈಗ ಅಂಥ ಸದಸ್ಯರು ದೂರು ನೀಡಿದ್ದಾರೆ’ ಎಂದು ವಿಚಾರಣೆಯಲ್ಲಿ ನಂಜುಂಡಯ್ಯ ತಿಳಿಸಿದ್ದಾರೆ ಎಂದು ರಮೇಶ್ ಮಾಹಿತಿ ನೀಡಿದರು.

ಮೂರೇ ಮಂದಿ ದೂರು

     ಕಣ್ವ ಸೌಹರ್ದ ಕೋಆಪರೇಟಿವ್ ಸೊಸೈಟಿಯಲ್ಲಿ ಹಣ ಠೇವಣಿಯಾಗಿರಿಸಿಕೊಂಡು ಬಡ್ಡಿ ಅಸಲನ್ನು ವಾಪಸ್ ನೀಡದೇ ವಂಚಿಸಲಾಗಿದೆ ಎಂದು ಯಲಹಂಕದ ಪದ್ಮಾವತಿ,ಮಂಜುನಾಥನಗರದ ನಿವೃತ್ತ ನೌಕರ ಗೋಪಾಲ್ ಸೇರಿದಂತೆ ಮೂವರು ಸದಸ್ಯರು ದೂರು ನೀಡಿರುವುದನ್ನು ಬಿಟ್ಟರೆ ಇಲ್ಲಿಯವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದರು

    ಕಣ್ವ ಸೊಸೈಟಿಯಲ್ಲಿ ವಂಚನೆಗೊಳಗಾದವರು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದ್ದು ಇಲ್ಲಿಯವರೆಗೆ ಮೂವರನ್ನು ಬಿಟ್ಟರೆ ಬೇರ್‍ಯಾರು ದೂರು ಸಲ್ಲಿಸಿಲ್ಲ ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link