ದುರಾಸೆಗಾಗಿ ಕೊಲೆ ಮಾಡಿದ ಕೊಲೆಗಾರನ ಬಂಧನ..!

ತುರುವೇಕೆರೆ:

     ಹಣದ ದುರಾಸೆಗೆ ವ್ಯಕ್ತಿಯೊಬ್ಬನ ಕೊಲೆ ಮಾಡಿದ್ದ ಖತರ್ನಾಕ್ ಕೊಲೆಗಾರರನ್ನು ಕೇವಲ 15 ದಿನಗಳೊಳಗಾಗಿ ಬಂಧಿಸುವಲ್ಲಿ ತುರುವೇಕೆರೆ ಪೋಲೀಸರು ಸಫಲರಾಗಿದ್ದಾರೆ.ತಾಲ್ಲೂಕಿನ ಮಾಯಸಂದ್ರ ಹೋಬಳಿ ವಿಠಲಾಪುರ ಗ್ರಾಮದ ನಾಯಕನಕೆರೆ ಬಳಿ ಅಕ್ಟೋಬರ್ 14 ರಂದು ಯಾವುದೋ ಅಪರಿಚಿತ ಗಂಡಸಿನ ಶವವನ್ನು ಗುರುತು ಸಿಗದ ರೀತಿ ಸುಟ್ಟು ಹಾಕಿದ್ದು ಈ ಸಂಬAದ ತುರುವೇಕೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಪ್ರಕರಣ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ವಂಶಿಕೃಷ್ಣ  ಅವರು ಸಿಪಿಐ ಲೋಕೇಶ್ ಅವರ ನೇತೃತ್ವದಲ್ಲಿ ವಿಶೇµÀ ತನಿಖಾ ತಂಡ ರಚಿಸಿದ್ದು, ಹೆಚ್ಚುವರಿ ಜಿಲ್ಲಾ ಪೋಲೀಸ್ ಅಧೀಕ್ಷಕ ಟಿ.ಜೆ.ಉದೇಶ್ ಹಾಗೂ ಕುಣಿಗಲ್ ಡಿ.ಎಸ್.ಪಿ. ರಾಮಲಿಂಗೇಗೌಡ ಮರ್ಗದರ್ಶನದಲ್ಲಿ ತನಿಖೆ ಕೈಗೊಂಡು ಕೊಲೆಯಾದ ವ್ಯಕ್ತಿ ಯಡಿಯೂರು ಹೋಬಳಿ ಚಾಕೇನಹಳ್ಳಿ ಗ್ರಾಮದ ಶಿವಲಿಂಗಯ್ಯ (74) ಎಂಬುದನ್ನು ಪತ್ತೆಹಚ್ಚಿ ಮೃತ ಶಿವಲಿಂಗಯ್ಯ ಯಡಿಯೂರಿನಲ್ಲಿ ವಾಸವಿದ್ದ ಬಾಡಿಗೆ ಮನೆಯ ಮಾಲೀಕನ ಮಗ ಹರೀಶ ಈತನ ಸ್ನೇಹಿತರಾದ ನವೀನ್ ಹಾಗೂ ವಿಜಯ್ ಅವರನ್ನು ಈ ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮೃತ ಶಿವಲಿಂಗಯ್ಯನ ಮೈಮೇಲಿದ್ದ ಒಡವೆ ದೋಚಿ ಐಷಾರಾಮಿ ಜೀವನ ನಡೆಸಬೇಕೆಂಬ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ತಿಳಿದು ಬಂದಿರುತ್ತದೆ.

   ಮೃತನ ಮೈಮೆಲಿದ್ದ ಬ್ರಾಷಲೈಟ್, ಉಂಗುರ, ಕೊರಳಚೈನು ಮತ್ತು ಒಂದು ದ್ವಿಚಕ್ರ ವಾಹನ ಸೇರಿದಂತೆ ಸುಮಾರು 2 ಲಕ್ಷ ರೂ. ಮೌಲ್ಯದ ವಸ್ತುಗಳು ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಸಿದ ಒಂದು ಕಾರು ಮತ್ತು ಬೈಕನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

     ಹೆಚ್ಚುವರಿ ಜಿಲ್ಲಾ ಪೋಲೀಸ್ ಅಧೀಕ್ಷಕ ಟಿ.ಜೆ.ಉದೇಶ್ ಹಾಗೂ ಕುಣಿಗಲ್ ಡಿ.ಎಸ್.ಪಿ. ರಾಮಲಿಂಗೇಗೌಡ ಅವರ ಮಾರ್ಗದರ್ಶನದಲ್ಲಿ ತುರುವೇಕೆರೆ ಸಿಪಿಐ ಲೋಕೇಶ್ ಸಿಬ್ಬಂದಿಗಳಾದ ಎಎಸ್‌ಐ ಶಿವಲಿಂಗಯ್ಯ, ಕಾನ್‌ಸ್ಟೇಬಲ್‌ಗಳಾದ ರಮೇಶ್, ಗಜೇಂದ್ರ, ಮಧುಸೂದನ್, ಮುತ್ತಣ್ಣ, ಪಾರ್ವತಮ್ಮ, ಸುಪ್ರೀತ, ವಿಜಯ್‌ಕುಮಾರ್, ಚಾಲಕ ಕುಮಾರ್, ಸೋಮಶೇಖರ್ ತನಿಖಾ ತಂಡವನ್ನು ಪೋಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link