ಮುಂಬೈ:
ಗೊಂದಲದ ಗೋಡಾಗಿದ್ದ ಸರ್ಕಾರ ರಚನೆಗೆ ಕೊನೆಗೂ ಉತ್ತರ ಸಿಕ್ಕಿದಂತೆ ಕಾಣುತ್ತದೆ ,ಈ ಬೆಳವಣಿಗೆಗೆ ಕಾರಣವಾಗಿದ್ದು ಎನ್ ಸಿಪಿಯ ಆ ಒಂದು ಮಹತ್ವದ ಘೋಷಣೆ,ರಾಜಕೀಯದಲ್ಲಿ ಬದ್ಧ ವೈರಿಗಳು ಎಂದೇ ಜನಜನಿತವಾಗಿರುವ ಎನ್ ಸಿ ಪಿ ಹಾಗು ಶಿವಸೇನೆ ಜೊತೆ ಸೇರಿ ಸರ್ಕಾರ ರಚಿಸುವ ಇಂಗಿತ ವ್ಯಕ್ತಪಡಿಸಿವೆ ಎನ್ನಲಾಗಿದೆ.
ಎನ್ಸಿಪಿ ವಕ್ತಾರ ನವಾಬ್ ಮಲಿಕ್ ಈ ಕುರಿತಂತೆ ಟ್ವೀಟ್ ಮಾಡಿದ್ದು, ‘ಬಿಜೆಪಿಯ ಬೆಂಬಲವಿಲ್ಲದೆ “ಛತ್ರಪತಿ ಶಿವಾಜಿ ಮಹಾರಾಜ್ ಅವರು ಊಹಿಸಿದಂತೆ ಜನರ ಸರ್ಕಾರವನ್ನು” ರಚಿಸುವ ಪ್ರಸ್ತಾಪವನ್ನು ಶಿವಸೇನೆ ಮಂಡಿಸಿದರೆ ತಮ್ಮ ಪಕ್ಷ “ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ.ನಾವು ಮಹಾರಾಷ್ಟ್ರದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕೊಂಡು ಉದ್ಧವ್ ಠಾಕ್ರೆ ಅವರು ಸರ್ಕಾರ ರಚನೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಶಿವಸೇನೆಗೆ ಪರ್ಯಾಯ ಮಾರ್ಗಗಳು ತೆರೆದುಕೊಳ್ಳಲಿವೆ ಎಂದು ಮಲಿಕ್ ತಿಳಿಸಿದೆ.