ಅಮರಾವತಿ :
ಮಾಜಿ ರಾಷ್ಟ್ರಪತಿ ಮತ್ತು ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಹೆಸರಿನಲ್ಲಿ ನೀಡಲಾಗುತ್ತಿದ್ದ ಪ್ರಶಸ್ತಿ ಹೆಸರು ಬದಲಿಸಿ ಆಂಧ್ರ ಪ್ರದೇಶ ರಾಜ್ಯ ಸರ್ಕಾರ ಮಹತ್ವದ ಆದೇಶವೊಂದು ಹೊರಡಿಸಿದೆ.
ಆಂಧ್ರ ಸರ್ಕಾರವು ಪ್ರತೀ ವರ್ಷ ನವೆಂಬರ್ 1 ರಂದು ಅಬ್ದುಲ್ ಕಲಾಂ ಅವರ ಹುಟ್ಟು ಹಬ್ಬದ ನೆನಪಿಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ಕೊಡಲಾಗುತ್ತಿತ್ತು.
Andhra Pradesh Government redesignates "Dr APJ Abdul Kalam Pratibha Puraskar Awards" as "YSR Vidya Puraskars" from 2019 onwards, for distribution on the occasion of National Education Day (birth anniversary of Maulana Abul Kalam Azad), on 11th November. pic.twitter.com/f0SLE7rYm7
— ANI (@ANI) November 5, 2019
ಆದರೆ, ಇದೀಗ ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪ್ರಶಸ್ತಿಯ ಹೆಸರನ್ನು ತನ್ನ ತಂದೆ ವೈ.ಎಸ್. ರಾಜಶೇಖರ್ ರೆಡ್ಡಿ ಹೆಸರಿಗೆ ಬದಲಾಯಿಸಿ ವೈಎಸ್ ಆರ್ ವಿದ್ಯಾಪುರಸ್ಕಾರ್ ಎಂದು ಮರುನಾಮಕರಣ ಮಾಡಿದ್ದಾರೆ.
ಈ ಮೂಲಕ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
