ತುಮಕೂರು:
ಡಿ.ಕೆ.ಶಿವಕುಮಾರ್ ಅವರ ವಿರುದ್ಧ ದೇವೇಗೌಡರೇ ಇಡಿಗೆ ಮೂಗರ್ಜಿ ಹಾಕಿದ್ದಾರೆಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಗಂಭೀರ ಆರೋಪ ಮಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೊದಲಿನಿಂದಲೂ ಮಾಜಿ ಪ್ರಧಾನಿಗಳು ಯಾವಾಗಲೂ ಮೂಗರ್ಜಿ ಗಿರಾಕಿಗಳು. ಅವರು ತಮ್ಮ ಸರಿಸಾಟಿ ಬೆಳೆಯುವ ನಾಯಕರ ವಿರುದ್ಧ ದೂರುಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಡಿಕೆಶಿ ಪ್ರಕರಣದಲ್ಲೂ ಇದೇ ರೀತಿ ಮಾಡಿದ್ದಾರೆ.
ಇದರಿಂದಾಗಿ ಡಿ.ಕೆ.ಶಿವಕುಮಾರ್ ಮನೆ ಮೇಲೆ ರೈಡಾಗಿದ್ದು. ಇದನ್ನೆಲಾ ದೇವೇಗೌಡರು ಯಾವುದಾದರೂ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಇಲ್ಲ ಎಂದು ಹೇಳಲಿ. ಬೇಕಾದರೆ ಡಿ.ಕೆ.ಶಿವಕುಮಾರ್ ಅವರನ್ನೇ ಹೋಗಿ ಕೇಳಿ ಎಂದು ಆರೋಪಿಸಿದರು.ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ದೇವೇಗೌಡರ ಕುಟುಂಬ ಡಿಕೆಶಿ ಪರ ಇದೆಯಷ್ಟೆ. ಡಿಕೆಶಿ ಮೇಲೆ ಈಗ ದೇವೇಗೌಡರ ಕುಟುಂಬ ತೋರುವ ಅನುಕಂಪ, ಎಸ್.ಎಂ.ಕೃಷ್ಣ ಅವರ ಅಳಿಯ ಕಾಫಿ ಡೇ ಸಿದ್ಧಾರ್ಥ ಅವರ ಮೇಲೆ ಏಕೆ ತೋರುತ್ತಿಲ್ಲ? ಸಿದ್ಧಾರ್ಥ 50 ಸಾವಿರ ಜನರಿಗೆ ಉದ್ಯೋಗ ನೀಡಿದ್ದರು. ಅಂತಹವರ ಬಗ್ಗೆ ಕಾಳಜಿ ತೋರುವ ಬದಲು ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಡಿಕೆಶಿ ಮೇಲೆ ಅನುಕಂಪ ತೋರುತ್ತಿದ್ದಾರೆ ಎಂದು ದೇವೇಗೌಡರು ಮತ್ತು ಕುಟುಂಬದ ವಿರುದ್ಧ ಹರಿಹಾಯ್ದರು.
ಹೆಚ್.ಡಿ.ಕುಮಾರಸ್ವಾಮಿ ಒಬ್ಬ ವಚನ ಭ್ರಷ್ಟ ರಾಜಕಾರಣಿ. ಈಗಾಗಲೇ ಇದು ರುಜುವಾತಾಗಿದೆ. ಬಿಜೆಪಿಗೆ ಯಾವುದೇ ಭರವಸೆ ಕೊಟ್ಟರೂ ಅದು ನಂಬಿಕೆಗೆ ಅರ್ಹವಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ