ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲಾ : ದೇವೇಗೌಡ

ಬೆಂಗಳೂರು

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ‌ ಶತ್ರು ಅಲ್ಲ. ಅವರು ನಮ್ಮ ರಾಜಕೀಯ ಎದುರಾಳಿ, ರಾಜಕೀಯದ ಚದುರಂಗದಾಟದ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಹೀಗೆ ಬಿಜೆಪಿಯ ಬಗ್ಗೆ ಮೃದು ಧೋರಣೆ ಮಾತುಗಳನ್ನಾಡಿರುವ ದೇವೇಗೌಡ, ಚಾಣಕ್ಷ್ಯತನದ ಮೂಲಕ ಮತ್ತೊಮ್ಮೆ ಬಿಜೆಪಿ ನಾಯಕರ ಗಮನ ಸೆಳೆದಿದ್ದಾರೆ.

    ಕೆಲವು ದಿನಗಳ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಯಡಿಯೂರಪ್ಪ ಸರ್ಕಾರ  ಉರುಳಲು ಬಿಡುವುದಿಲ್ಲ ಎಂದಿದ್ದರು. ಮಗನ ಮಾತನ್ನು ಪುಷ್ಠೀಕರಿಸಿ ಮಂಗಳವಾರ ಮಾತನಾಡಿದ್ದ ದೇವೇಗೌಡ,ತಮ್ಮ ಗುರಿ ಪಕ್ಷ‌ಸಂಘಟನೆಯೇ ಹೊರತು ಯಡಿಯೂರಪ್ಪ ಅವರನ್ನು ಪದವಿಯಿಂದ ಕೆಳಗಿಳಿಸುವುದಲ್ಲ ಎಂದಿದ್ದರು. ಇದೀಗ ಯಡಿಯೂರಪ್ಪ ತಮ್ಮ ಶತ್ರು ಅಲ್ಲ ಎನ್ನುವ ಮೂಲಕ‌ ಮತ್ತೊಮ್ಮೆ ರ‍್ಚೆಯ ಕೇಂದ್ರ ಬಿಂದುವಾಗಿದ್ದಾರೆ.

    ರಾಜಕೀಯ ಯಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ. ರಾಜಕೀಯದಲ್ಲಿ ಯಾವಾಗ ಏನೂ ಬೇಕಾದರೂ ಆಗಬಹುದು. ಯಡಿಯೂರಪ್ಪ, ಸಿದ್ದರಾಮಯ್ಯ ನಮಗೇನು ಆ ಜನ್ಮ ಶತ್ರುಗಳು ಅಲ್ಲ. ರಾಜಕೀಯವಾಗಿ ಮಾತಾಡುತ್ತೇವೆ .ಕಾಲಕಾಲಕ್ಕೆ ಏನೇನು ಆಗಬೇಕೋ ಅದು ಆಗುತ್ತದೆ ಎಂದರು.

    ಪಕ್ಷದ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿಯಲ್ಲಿ ದೇವೇಗೌಡ, ಹಿಂದುಳಿದವರ ನಾಯಕ ದೇವರಾಜ್ ಅರಸು ಅವರಷ್ಟು ಎತ್ತರಕ್ಕೆ ಬೆಳೆಯಬೇಕು ಎನ್ನುವ ಮೂಲಕ ರಾಜ್ಯದಲ್ಲಿ ಎರಡನೇ ದೇವರಾಜ ಅರಸು ಎಂದು ಹೆಸರು ಪಡೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಕುಟುಕುವ ಪ್ರಯತ್ನ ಮಾಡಿದರು.

    ಸರ‍್ವತ್ರಿಕ ಚುನಾವಣೆ ಯಾವಗ ಏನು ಬೇಕಾದರೂ ಎದುರಾಗಬಹುದು. ಆದರೆ ಯಾವುದೇ ಚುನಾವಣೆ ಬಂದರೂ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಾವು ಯಡಿಯೂರಪ್ಪ ಪರ, ಸಿದ್ದರಾಮಯ್ಯ ವಿರುದ್ಧ ಎಂದು ವ್ಯಾಖ್ಯಾನಿಸುವುದು ಸರಿ ಅಲ್ಲ. ಮಹಾರಾಷ್ಟ್ರದಲ್ಲಿ ಈಗ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ-ಶಿವಸೇನೆ ಮೈತ್ರಿ ತಿಕ್ಕಾಟವನ್ನು ಪರೋಕ್ಷವಾಗಿ ಉದಾಹರಿಸಿದರು.

    ಉಪ ಚುನಾವಣೆ ಬಳಿಕ ಬಿಜೆಪಿಗೆ ಬೆಂಬಲ ವಿಚಾರದಲ್ಲಿ ಜಾಣತನದ ಉತ್ತರ ನೀಡಿದ ದೇವೇಗೌಡ, ಉಪಚುನಾವಣೆ ಫಲಿತಾಂಶದ ಬಳಿಕ ಅಂದು ನಡೆಯುವ ಸನ್ನಿವೇಶದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವ ನರ‍್ಧಾರ ಕೈಗೊಳ್ಳಬಹುದು ಎಂಬುದೆಲ್ಲ ಕಾಲ್ಪನಿಕ ವಿಚಾರಗಳು. ಇಂತಹ ಕಾಲ್ಪನಿಕ ಪ್ರಶ್ನೆಗಳಿಗೆ ಯಾರಾದರೂ ಉತ್ತರ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

     ಆಪರೇಷನ್ ಕಮಲ ಕುರಿತು ಯಡಿಯೂರಪ್ಪ ಅವರ ಹೇಳಿಕೆಯ ಆಡಿಯೋ ವಿಡಿಯೋವನ್ನು ಸುಪ್ರೀಂಕೊರ್ಟ್  ಪರಿಗಣಿಸುವು ದಾಗಿ ಹೇಳಿದೆ. ಇನ್ನು ಎರಡು-ಮೂರು ದಿನಗಳಲ್ಲಿ ತರ‍್ಪು ಬರುವ ನಿರೀಕ್ಷೆಯಿದೆ. ಕೋರ್ಟ್ ಇದಕ್ಕೆ ಹೆಚ್ಚು ಮಹತ್ವ ಕೊಟ್ಟಿದೆ ಎಂಬ ಭಾವನೆ ತಮಗಿಲ್ಲ. ಈ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಲಯ ತರ‍್ಪಿನ ಬಗ್ಗೆ ತರ‍್ಮಾನ ಮಾಡಿದೆ ಎಂದು ಮರ‍್ಮಿಕವಾಗಿ ಹೇಳಿದರು.

     ರಾಜಕೀಯವಾಗಿ ತಮ್ಮ ಹಾಗೂ ಯಡಿಯೂರಪ್ಪ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಬೆಂಗಳೂರಿನ ಬುಕ್ ಹೌಸ್ ಒಂದರ ಕಡತವೊಂದನ್ನು ಯಡಿಯೂರಪ್ಪ ತಡೆ ಹಿಡಿದ್ದಿದ್ದರು. ಆಗ ಅವರ ಲಕ್ಷ್ಮೀನಾರಾಯಣ ಅವರಿಗೆ ಕರೆ ಮಾಡಿ ಅವರ ಜೊತೆ ಮಾತಾಡಿನಾಡಿದ್ದನ್ನು ಬಿಟ್ಟರೆ ಬೇರೆ ಯಾವುದೇ ಚರ್ಚೆ ನಡೆಸಿಲ್ಲ. ಯಡಿಯೂರಪ್ಪ ಜೊತೆ ಮಾತಾಡಲೇಬಾರದು ಎಂದೇನು ಇಲ್ಲ‌ ಅಂತಹ ಸಂದರ್ಭ ಇನ್ನೂ ಎದುರಾಗಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link