ಚಿತ್ರದುರ್ಗ
ಆಧುನಿಕ ಸಮಾಜ ಅನಾಹುತಗಳಿಗೆ, ದುರ್ಘಟನೆಗಳಿಗೆ, ವಿಪತ್ತುಗಳಿಗೆ ಒಳಗಾಗುತ್ತಿದೆ. ಜಗತ್ತು ಶಾಂತಿಯಿAದ ಅಶಾಂತಿಯ ಕಡೆಗೆ, ಸಂತೃಪ್ತಿಯಿಂದ ಅಸಂತೃಪ್ತಿಯ ಕಡೆಗೆ ವಾಲುತ್ತಿದೆ. ಕಾರಣ ತಳಮಳ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ತಳಮಳ, ಅತೃಪ್ತಿ, ಅಶಾಂತಿ ತುಂಬಿ ತುಳುಕುತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಿಸಿದರು.
ಜಮುರಾ ಕಲಾಲೋಕ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಲಾಗಿರುವ ಜಮುರಾ ರಾಷ್ಟಿçÃಯ ನಾಟಕೋತ್ಸವದ 5ನೇ ದಿನದ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಆಶಾಂತಿ ಜಗತ್ತನ್ನು ಆವರಿಸುತ್ತಿರುವುದಕ್ಕೆ ಅಜ್ಞಾನವೇ ಕಾರಣವಾಗಿದೆ. ಅರಿವು ಮಾನವನಿಗೆ ಅಗತ್ಯವಾಗಿರುವಂತಹದ್ದು. ಅಜ್ಞಾನ ಮತ್ತು ಅರಿವು ಇವುಗಳಲ್ಲಿ ಮಾನವ ಯಾವುದಕ್ಕೆ ಒತ್ತಾಸೆಯಾಗಿರಬೇಕು ಎಂಬುದನ್ನು ನೀವು ಚಿಂತಿಸಬೇಕು.
ಏಕಮುಖಿ ವ್ಯಕ್ತಿತ್ವಕ್ಕಿಂತ ಬಹುಮುಖಿ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳಬೇಕು. ಅದು ತುಂಬ ಉಪಯೋಗಕಾರಿಯೂ ಹೌದು. ರಂಗದ ಮೇಲೆ ಪ್ರದರ್ಶನಗೊಳ್ಳುವ ನಾಟಕಗಳ ಅಭಿನಯದಲ್ಲಿ ಮೂಲ ಲೇಖಕರ ಬರಹದಿಂದ ಹೊರತಾದ ವಿಚಾರಗಳನ್ನು ಬಳಸಬಾರದು. ಮಠ-ಪೀಠಗಳು ಆಯೋಜಿಸುವ ನಾಟಕಗಳು ಅತ್ಯುತ್ತಮವಾಗಿರಬೇಕು. ಅಂತಹ ಅತ್ಯುತ್ತಮ ನಾಟಕಗಳಿಗೆ ಶ್ರೀಮಠವು ಅವಕಾಶ ನೀಡಿದೆ ಎಂದು ತಿಳಿಸಿದರು.
ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ನಾಟಕದ ನೀತಿಯುತ ವಿಚಾರಗಳು ನಮ್ಮ ಬದುಕನ್ನು ಬದಲಿಸುವ ಶಕ್ತಿ ಹೊಂದಿವೆ. ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಧನಾತ್ಮಕ ಪ್ರಭಾವ ಬೀರುವ ಶಕ್ತಿ ನಾಟಕಗಳಿಗಿದೆ. ನಾಟಕಗಳನ್ನು ಸಂಘಟಿಸುತ್ತ ಶ್ರೀಮಠವು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಅಷ್ಟೇ ಅಲ್ಲ ಇಂದು ಬೆಳಗ್ಗೆ ಆಯೋಜಿಸಲಾಗಿದ್ದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವವು ಅದ್ಭುತ ಕಾರ್ಯವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
16 ಸಾವಿರ ಜೋಡಿ ವಿವಾಹಗಳು ನಡೆದಿರುವುದು ನಿಜವಾಗಿಯು ವಿಶ್ವದಾಖಲೆಯೇ ಸರಿ. ಮದುವೆಯ ಹೆಸರಿನಲ್ಲಿ ಸಾಕಷ್ಟು ಸಾಲ ಮಾಡುವುದನ್ನು ತಪ್ಪಿಸಲು ಇದು ಅತ್ಯಂತ ಸಹಕಾರಿಯಾಗಿದೆ. ಶ್ರೀಮಠವು ಶಿಕ್ಷಣ, ಆಧ್ಯಾತ್ಮ, ಅನ್ನದಾಸೋಹ ಹೀಗೆ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದೆ. ಇಂದು ಜನ ರಾಜಕೀಯ ಕ್ಷೇತ್ರ ಬಹಳ ಕೆಟ್ಟಿದೆ ಎಂದುಕೊಳ್ಳುತ್ತಾರೆ ನಾನು ಜನಪರ ಕೆಲಸ ಮಾಡುವವನು ಎಂದು ಪಾಟೀಲರು ಹೇಳಿದರು.
ರಂಗನಿರ್ದೇಶಕ ನಟರಾಜ ಹೊನ್ನವಳ್ಳಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ರಂಗಭೂಮಿಯನ್ನು ಕೈಗೆತ್ತಿಕೊಂಡು ಜ್ಞಾನದ ಪರಿಧಿಯನ್ನು ಎತ್ತರಿಸುವ ಮಹತ್ತರ ಕಾರ್ಯವನ್ನು ಶ್ರೀಮಠದ ಜಮುರಾ ಸುತ್ತಾಟ ತಂಡ ಮಾಡುತ್ತಿದೆ. ಸಾಮಾಜಿಕ, ರಾಜಕೀಯ ಪ್ರಜ್ಞೆ ಬೆಳೆಸುತ್ತ ಕೀಳರಿಮೆಯನ್ನು ತೊಲಗಿಸಲು, ತಿಳುವಳಿಕೆ ತುಂಬಲು, ಅಂತರAಗ ಮತ್ತು ಬಹಿರಂಗವಾಗಿ ನಮ್ಮನ್ನು ಶುದ್ಧರನ್ನಾಗಿ ಈ ರಂಗಭೂಮಿ ಮಾಡುತ್ತದೆ. ಸಮಾಜವನ್ನು ಶುದ್ಧಿಗೊಳಿಸುವ, ಎಲ್ಲರನ್ನು ತಿದ್ದುವ, ಸಮುದಾಯ ಪ್ರಜ್ಞೆಯನ್ನು ಮೂಡಿಸುವ ಕಾರ್ಯವನ್ನು ಅದು ಮಾಡುತ್ತದೆ. ಉನ್ನತ ಆಲೋಚನೆಗಳಿಗೆ ಅವಕಾಶ ನೀಡುವುದು ಈ ನಾಟಕ ಸಾಹಿತ್ಯ. ಒಳ್ಳೆಯ ರಾಜಕಾರಣ, ಪ್ರವಚನ ಹಾಗೆಯೇ ನಾಟಕವೂ ನಮ್ಮನ್ನು ಸದಾ ಚುರುಕಾಗಿಸುತ್ತವೆ. ಕಲೆ ಎಂಬುದು ನಮ್ಮನ್ನು ಎಚ್ಚರಿಸುವ, ತಿದ್ದುವ ಸುತ್ತಿಗೆಯಾಗಬೇಕು. ಈ ಕೆಲಸವನ್ನು ಶ್ರೀಮಠ ಚೆನ್ನಾಗಿ ನಿರ್ವಹಿಸುತ್ತಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಹೊಳಲ್ಕೆರೆಯ ಹಿರಿಯ ರಂಗ ಕಲಾವಿದ ಸುಭಾಷ್‌ಚಂದ್ರ ದೇವರಗುಡ್ಡ ಅವರು, ಇಂದು ನಾಟಕಗಳ ಪ್ರದರ್ಶನ ಬಹಳ ಕ್ಷೀಣಿಸುತ್ತಿದೆ. ಚಲನಚಿತ್ರಗಳು, ಮೊಬೈಲ್‌ಗಳ ಹಾವಳಿಯಿಂದ ರಂಗಭೂಮಿ ಸೊರಗುತ್ತಿದೆ. ನಮ್ಮನ್ನು ತಿದ್ದುವ ಮಹಾಶಕ್ತಿ ಎಂದರೆ ನಮ್ಮೊಳಗಿನ ಪ್ರಜ್ಞೆ. ಇಂದು ಭ್ರಷ್ಟಾಚಾರ, ಕೊಲೆ, ಸುಲಿಗೆ ಹೆಚ್ಚಾಗಿವೆ. ನಾಟಕಗಳು ಕೇವಲ ಮನರಂಜನೆಯ ಸರಕುಗಳಾಗದೆ ಸಮಾಜವನ್ನು ಸುಸ್ಥಿರದ ಕಡೆಗೆ ಕೊಂಡೊಯ್ಯುವAತಹ ಸಾಧನವಾಗಬೇಕು. ಸತ್ಯಹರಿಶ್ಚಂದ್ರ ನಾಟಕವನ್ನು ನೋಡಿ ಗಾಂಧೀಜಿ ಪ್ರಭಾವಿತರಾಗುತ್ತಾರೆ. ಅಂತಹ ಮಹತ್ವದ ಶಕ್ತಿ ಈ ನಾಟಕಗಳಿಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








