ಬೆಳಗಾವಿ:
ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ಯೋಧ ಹುತಾತ್ಮರಾಗಿದ್ದಾರೆ.
ಬೆಳಗಾವಿ ತಾಲೂಕಿನ ಉಚಗಾವ ಗ್ರಾಮದ ರಾಹುಲ್ ಭೈರು ಸುಳಗೇಕರ (25) ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹೋರಾಡಿ ವೀರಮರಣವನ್ನಪ್ಪಿದ ವೀರ ಯೋಧ.
ರಾಹುಲ್ ರಜೆಯ ಮೇಲೆ ಗಣೇಶ ಉತ್ಸವ ವೇಳೆ ತವರಿಗೆ ಬಂದಿದ್ದರು. ನಂತರ ಹಬ್ಬ ಮುಗಿಸಿಕೊಂಡು ಕರ್ತವ್ಯಕ್ಕೆ ಮರಳಿದ್ದರು. ಪಾಕ್ ಪಡೆಗಳು ಗುರುವಾರ ಮಧ್ಯರಾತ್ರಿ 2.30ರ ಸುಮಾರಿಗೆ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಪಾಕ್ ಪುಂಡಾಟಕ್ಕೆ ಭಾರತದ ಪಡೆಗಳು ತಕ್ಕ ಪ್ರತ್ಯುತ್ತರ ನೀಡಲಾರಂಭಿಸಿದವು. ಈ ವೇಳೆ ರಾಹುಲ್ ಸುಳಗೇಕರ ಗುಂಡು ತಗುಲಿ ವೀರಮರಣ ಹೊಂದಿದ್ದಾರೆ.
