ಕೈಲಾಸವಾಸಿಗಳಾಗುವ ಸದಾವಕಾಶ ನೀಡಿದ ತಾಲ್ಲೂಕು ಪಂಚಾಯಿ..!

ತಿಪಟೂರು :
       ಅಲ್ಲಲ್ಲಿ ರಸ್ತೆ ಅಪಘಾತವಾಗಿ ಮೃತರಾಗುತ್ತಿರುವ ಸುದ್ದಿಗಳನ್ನು ಕೇಳುತ್ತಿದ್ದೇವೆ ಆದರೆ ತಾಲ್ಲೂಕಿನಲ್ಲಿ ಸ್ವಲ್ಪ ಯಾಮಾರಿದರು ಕೈಲಾಸವಾಸಿಗಳಾಗುವ ಸದಾವಕಾಶವನ್ನು ತಾಲ್ಲೂಕು ಪಂಚಾಯಿತಿ ಕರುಣಿಸಿದಂತೆ ಕಾಣುತ್ತಿದೆ.ತಾಲ್ಲೂಕಿನಲ್ಲಿ ಮತ್ತು ನಗರದಲ್ಲಿ ರಸ್ತೆಗಳ ಬಗ್ಗೆ ಹೇಳತೀರದಷ್ಟು ಹದಗೆಟ್ಟಿದ್ದು ಇದಕ್ಕೆ ಇನ್ನೊಂದು ಕೊಂಡಿ ಎಂದರೆ ಈಚನೂರು ಕೆರೆ ಕೋಡಿಯಿಂದ ಕರಡಾಳಿಗೆ ಹೋಗುವ ಹೇಮಾವತಿ ನಾಲೆ ಪಕ್ಕದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಮೊನ್ನೆ ಬಂದ ಮಳೆಯಿಂದ ರಸ್ತೆಯಲ್ಲಿ ಸಂಚರಿಲಾರದಷ್ಟು ಕೆಸರು ಮಯವಾಗಿದ್ದು ಎತ್ತು ಏರಿಗೆ ಎಳೆದರೆ ಎಮ್ಮೆ ನೀರಿಗೆಳಿಯಿತು ಎನ್ನುವಂತೆ ನಾವೊಂದು ಕಡೆ ವಾಹನವನ್ನು ಚಲಾಯಿಸಿದರೆ ಅದು ಇನ್ನೊಂದು ಕಡೆಗೆ ಹೋಗುವಷ್ಟರಮಟ್ಟಿಗೆ ರಸ್ತೆಯಿದೆ.
      ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದು ಇಲ್ಲಿನ ಜನರು ದಿನನಿತ್ಯ ಪ್ರಾಣವನ್ನು ಕೈಯಲ್ಲಿಡಿದು ಸಂಚರಿಸುವಂತೆ ಮಾಡಿದೆ. ಪಕ್ಕದ ಹೇಮಾವತಿ ನಾಲೆಯಲ್ಲಿ ಈಗ ನೀರುಹರಿಯುತ್ತಿದೆ ಆದರೆ ನೀರಿಲ್ಲದ ಸಂದರ್ಭದಲ್ಲಿ ಆಳವಾದ ಕಂದಕವನ್ನು ನೋಡಿದರೆ ಹೆದರಿಕೆಯಾಗುವಂತಿದ್ದು ಇಲ್ಲಿನ ರಸ್ತೆಯು ಈಗ ಕೆಸರಿನಿಂದ ಸಂಪೂರ್ಣವಾಗಿ ಹಾಳಾಗಿದ್ದು ಇಂದು ನಂದಿನಿ ಡೈರಿಗೆ ಹಾಲು ಸಾಗಿಸುವ ವಾಹನವೊಂದು ಕೆಸರಿನಲ್ಲಿ ಸಿಲುಕಿದ್ದು ಚಾಲಕನ ಸಮಯಪ್ರಜ್ಞೆಯಿಂದ ವಾಹನ ನಾಲಾಪಾಲಾಗುವುದು ತಪ್ಪಿದೆ. ಸ್ಥಳಿಯರು ಟ್ರ್ಯಾಕ್ಟರ್ ತಂದು ವಾಹನವನ್ನು ಕೆಸರಿನಿಂದ ಹೊರತೆಗೆಯಲು ಹರಸಾಹಸ ಪಟ್ಟು ಕೊನೆಗೆ ಕೆಸರಿನಲ್ಲಿ ಹೂತಿದ್ದ ವಾಹವನ್ನು ಹೊರತೆಗೆದರು.
      ಸ್ಥಳೀಯರಾದ ವಿಶ್ವನಾಥ್, ತೋಂಟಾರಾಧ್ಯ, ಪ್ರದೀಪ್, ಭರತ್ ಭೂಷಣ್ ಶಿರ್ಗರವಾಘಿ ರಸ್ತೆ ನಿರ್ಮಿಸಿ ನಾಲಾದಡಕ್ಕೆ ಸೂಕ್ತವಾದ ತಡೆಗೋಡೆಯನ್ನು ನಿರ್ಮಿಸಿ ರೈತರಿಗೆ ಮತ್ತು ವಾಹನ ಸವಾರರಿಗೆ ಅನುಕೂಲಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.ಹೇಮಾವತಿ ನಾಲಾ ಕಂದಕವೊಂದು ರಸ್ತೆಯ ಬದಿಗಿದ್ದು ಸ್ವಲ್ಪ ಹೆಚ್ಚು ಕಡಿಮೆಯಾದರು ಸಾಕು ನೇರವಾಗಿ ಪ್ರತಾಪಕ್ಕೆ ಬಿದ್ದು ಹೆಚ್ಚಿನ ಸಾವು ನೋವುಗಳು ಸಂಭವಿಸುವ ಸಾಧ್ಯತೆ ಇದ್ದು ಸುಮಾರು 3 ಕಿಮೀ ಆದರೂ ಸೂಕ್ತವಾದ ತಡೆಗೋಡೆಯನ್ನು ನಿರ್ಮಿಸಿ ಜನರ ಪ್ರಾಣ ಕಾಪಾಡಬೇಕೆಂದು ಸ್ಥಳೀಯ ಭರತ್ ಭೂಷಣ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap