ಬೆಂಗಳೂರು
ಅಂಬೇಡ್ಕರ್ ರಚನೆ ಮಾಡಿದ ಸಂವಿಧಾನ ಶಾಸ್ತ್ರಕ್ಕೆ ಸಿಗದ ಸಂವೇದನೆ ಆಗಿದ್ದು, ಈ ಬಗ್ಗೆ ತಪ್ಪು ಗ್ರಹಿಕೆ ಬೇಡ. ಅಲ್ಲದೆ, ಜಾತಿವಾದ ಜೀವಂತವಾಗಿರುವರೆಗೂ, ಮೀಸಲಾತಿ ಅಗತ್ಯತೆ ಇದೆ ಎಂದು ನಾಡೋಜಾ ಬರಗೂರು ಪ್ರತಿಪಾದಿಸಿದರು.
ನಗರದಲ್ಲಿಂದು ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ, ಮೀಸಲಾತಿ ನೂರು ವರ್ಷ ಕುರಿತ ರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಶತಮಾನಗಳಿಂದ ನಮ್ಮ ಮೇಲೆ ಹೇರಲ್ಪಟ್ಟ ಮನುವಾದ ಮೀಸಲಾತಿಯನ್ನು ಧಿಕ್ಕರಿಸಿ ಇಂದು ಮಾನವತಾವಾದಿ ಮೀಸಲಾತಿ ಜಾರಿಗೆ ತರಲಾಗಿದೆ. ಮೀಸಲಾತಿಯನ್ನು ಅಸಹನೀಯವಾಗಿ ಬಿಂಬಿಸುವ ವ್ಯಕ್ತಿಗಳು ನಮ್ಮ ಮಧ್ಯೆ ಇದ್ದಾರೆ.ಆದರೆ, ಶತಮಾನಗಳಿಂದ ಮೀಸಲಾತಿ ಜಾರಿಯಲ್ಲಿದೆ. ದೇವಾಲಯ, ಮನೆ, ಬಾವಿ ನೀರು, ಕೆರೆ, ಬೀದಿಗಳು ಕೆಲವರಿಗೆ ಮೀಸಲಾಗಿತ್ತು. ಅಷ್ಟೇ ಅಲ್ಲದೆ,
ಸ್ಪರ್ಶ ಸಹ ಮೀಸಲಾಗಿತ್ತು.ಆದರೆ, ಇದನ್ನು ನಾವು ಧಿಕ್ಕರಿಸಿದ ಕಾರಣ, ಕೆಲವರು ಇಂದಿಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೀಸಲಾತಿಯನ್ನು ಟೀಕಿಸುತ್ತಾರೆ ಎಂದರು.
ಸ್ವಾತಂತ್ರ್ಯ ಭಾರತದಲ್ಲಿ ಮೀಸಲಾತಿಗೆ ಒಂದು ಶಾಸನ ಸ್ಥಾನಮಾನ ನೀಡಿದ್ದು, ಡಾ.ಬಿ.ಆರ್. ಅಂಬೇಡ್ಕರ್ ಅವರು ಎಂದ ಅವರು, 1970, 80ರಲ್ಲಿ ಮೀಸಲಾತಿ ಬಗ್ಗೆ ಚರ್ಚಿಸುವಾಗ ಉಂಟಾದ ಸನ್ನಿವೇಶಕ್ಕೂ ಪ್ರಸ್ತುತ ಸನ್ನಿವೇಶಕ್ಕೂ ಸಾಕಷ್ಟು ವ್ಯತ್ಯಾಸ ಆಗಿದೆ ಎಂದು ನುಡಿದರು.
ಕರ್ನಾಟಕ ಶಿಕ್ಷಣ ಇಲಾಖೆಯ ಕೈಪಿಡಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಒಬ್ಬರೇ, ಸಂವಿಧಾನ ಬರೆದಿಲ್ಲ ಎಂದಿರುವುದು ಮನು ವಿಕರಾಕ. ಅಷ್ಟೇ ಅಲ್ಲದೆ, ಒರಿಸ್ಸಾ ರಾಜ್ಯದಲ್ಲಿ ಮಹಾತ್ಮ ಗಾಂಧಿ ಅವರು ಅವಘಡದಿಂದಾಗಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಆದರೆ, ಗಾಂಧಿಯನ್ನು ಹತ್ಯೆಗೈದ ಗೋಡ್ಸೆ ಹೆಸರು ಹೇಳಲು ಹಿಂಜರಿಕೆ ಏಕೆ ಎಂದು ಪ್ರಶ್ನೆ ಮಾಡಿದರು.
ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರ ನಡುವೆ ತಾರ್ಕಿಕ ಭಿನ್ನಾಭಿಪ್ರಾಯ ಮಾತ್ರ ಇದೆ. ಆದರೆ, ಅವರ ಅನುಯಾಯಿಗಳ ನಡುವೆ ಅಸಹನೆ ಹೆಚ್ಚಾಗಿದೆ ಎಂದ ಅವರು, ಗಾಂಧಿ ಮತ್ತು ಅಂಬೇಡ್ಕರ್ ನಮಗೆ ಮುಖ್ಯವಾಗಬೇಕು. ಇದೀಗ ಮೂಲಭೂತವಾದಿಗಳು ಅಂಬೇಡ್ಕರ್ ಅವರನ್ನು ವಶಪಡೆಸಿಕೊಳ್ಳುತ್ತಿರುವ ಪ್ರಕ್ರಿಯಲ್ಲಿ ನಿರತರಾಗಿದ್ದಾರೆ ಎಂದು ನುಡಿದರು.
ಸಮಾವೇಶದ ಅಧ್ಯಕ್ಷತೆಯನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ವಹಿಸಿದ್ದರು. ಈ ಸಂದರ್ಭದಲ್ಲಿ ಕಿರಣ್ ಗಾಜನೂರು, ಸಾಹಿತಿ ಡಾ.ರಾಜಪ್ಪ ದಳವಾಯಿ ಸಂಘಟನೆ ಸಂಚಾಲಕರಾದ ಡಾ.ರಾಜು ಗುಂಡಾಪುರ, ಬಿ.ರಾಜಶೇಖರ ಮೂರ್ತಿ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
