ಹೊಸಕೋಟೆ :
ಅನರ್ಹ ಶಾಸಕ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆದ್ದರೆ 24 ಗಂಟೆಗಳ ಒಳಗೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಹೊಸಕೋಟೆ ವಿಧಾನಸಭಾ ಉಪ ಚುನಾವಣೆಯ ಕಣ ರಂಗೇರಿದೆ. ಇಂದು ಹೊಸಕೋಟೆಯ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಳಿದಿದ್ದಾರೆ. ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಪ್ರಮಾಣಿಕತೆಗೆ ಮತ್ತೊಂದು ಹೆಸರೇ ಎಂಟಿಬಿ ನಾಗರಾಜ್, ಇಂತಹ ವ್ಯಕ್ತಿಯಿಂದ ಹೊಸಕೋಟೆ ಕ್ಷೇತ್ರ ಅಭಿವೃದ್ಧಿಗೊಳ್ಳಲಿದೆ. ಎಂಟಿಬಿ ನಾಗರಾಜ್ ಅವರು ಹೊಸಕೋಟೆ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಲು ತಾವು ಎಲ್ಲಾ ನೆರವಾಗುತ್ತೇನೆ. ಅವರು ಗೆದ್ದ 24 ಗಂಟೆಯಲ್ಲಿಯೇ ಸಚಿವ ಸ್ಥಾನವನ್ನು ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.
ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್, ಹೊಸಕೋಟೆ ತಾಲೂಕಿನಲ್ಲಿ 20 ವರ್ಷಗಳಿಂದ ಸತತವಾಗಿ ಕುಡಿಯುವ ನೀರಿನ ಅಭಾವವಿದೆ. ಕೈ ಮುಗಿದು ಪರಿಪರಿಯಾಗಿ ಹೆಚ್ಡಿಕೆಗೆ ಅನುದಾನ ಕೊಡುವಂತೆ ಕೇಳಿಕೊಂಡೆ. ಆದ್ರೆ ಕೊಡಲಿಲ್ಲ. ಕೇವಲ ಜೆಡಿಎಸ್ ಎಂಎಲ್ಎಗಳಿಗೆ ಮಾತ್ರ ಕೊಟ್ರು. ನಾನು ಯಾವಾಗಲೂ ಪಾರದರ್ಶಕವಾಗಿ ಪ್ರಾಮಾಣಿಕವಾಗಿದ್ದೀನಿ ಎಂದು ಹೇಳಿದ ಎಂಟಿಬಿ, ತಾರತಮ್ಯ ಮಾಡದೆ ಅನುದಾನ ನೀಡುವ ರಾಜ್ಯದ ಧೀಮಂತ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಹೊಗಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ