ನವದೆಹಲಿ:
ಸಂಸತ್ತಿನ 250ನೇ ಕಲಾಪದಲ್ಲಿ ರಾಜ್ಯಸಭೆಯ ಮಾರ್ಷಲ್’ಗಳು ಧರಿಸಿದ್ದ ಸಮವಸ್ತ್ರದ ವಿಚಾರವಾಗಿ ಭಾರೀ ಟೀಕೆಗಳು ಹಾಗೂ ವಿರೋಧಗಳು ವ್ಯಕ್ತವಾಗುತ್ತಿದ್ದು ಈ ಕಾರಣದಿಂದ ಮಾರ್ಷಲ್ ಗಳ ವಸ್ತ್ರಸಂಹಿತೆ ಪರಿಶೀಲಿಸಲು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಆದೇಶಿಸಿದ್ದಾರೆ.
ಸಮಿತಿಗಳ ಸಲಹೆ ಪರಿಗಣಿಸಿದ ನಂತರ ರಾಜ್ಯಸಭಾ ಸಚಿವಾಲಯ ಮಾರ್ಷಲ್ಗಳಿಗೆ ಹೊಸ ವಸ್ತ್ರಸಂಹಿತೆಯನ್ನು ರೂಪಿಸಿದೆ. ಆದರೆ ಕೆಲ ರಾಜಕೀಯ ಪಕ್ಷಗಳು ಹಾಗೂ ಗಣ್ಯ ವ್ಯಕ್ತಿಗಳಿಂದ ಅಭಿಪ್ರಾಯಗಳನ್ನು ಸ್ವೀಕರಿಸಿದ ನಂತರ ಈ ಬಗ್ಗೆ ಪರಿಶೀಲಿಸಲು ಸಚಿವಾಲಯದ ಕಾರ್ಯದರ್ಶಿಯವರಿಗೆ ಸೂಚಿಸಲು ನಿರ್ಧರಿಸಿದ್ದೇನೆ ಎಂದು ನಾಯ್ಡು ತಿಳಿಸಿದ್ದಾರೆ.ರಾಜ್ಯಸಭೆಯಲ್ಲಿ ಸೋಮವಾರ ಮಾರ್ಷಲ್’ಗಳು ಧರಿಸಿದ್ದ ನೂತನ ಸಮವಸ್ತ್ರ ಎಲ್ಲರ ಗಮನವನ್ನು ಸೆಳೆದಿತ್ತು.
ಈ ಹಿಂದೆ ಭಾರತೀಯ ಶೈಲಿಯ ಪೇಟ ಇರುವ ಪೋಷಾಕಿಗೆ ಬದಲಾಗಿ ಮಿಲಿಟರಿ ಶೈಲಿಯ ಹೊಸ ಸಮವಸ್ತ್ರ ಧರಿಸಿ ಮಾರ್ಷಲ್’ಗಳು ಕಾರ್ಯನಿರ್ವಹಿಸಿದ್ದಾರೆ. ನೂತನ ಸಮವಸ್ತ್ರ ಸೇನಾ ಸಮವಸ್ತ್ರ ಹೋಲುತ್ತಿದ್ದು, ಅದೇ ಶೈಲಿಯ ಸೂಟ್ ಹಾಗೂ ಪ್ಯಾಂಟ್ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/11/naidu-rajyasabha-uniform.gif)