ಬೆಂಗಳೂರು
ಈಜು ಬಾರದ ಬಾಲಕನನ್ನು ಕೆರೆಯಲ್ಲಿ ಮುಳುಗಿಸಿ ಯುವಕರ ಗುಂಪೊಂದು ಚಿತ್ರ ಹಿಂಸೆ ನೀಡಿರುವ ಘಟನೆ ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಳಿ ನಡೆದಿದ್ದು ಕೃತ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮ್ಯಾನುಯಲ್, ಸೂರ್ಯ ಮತ್ತು ಚರಣ್ ಅಪ್ರಾಪ್ತ ಬಾಲಕನನ್ನು ಕಂಠೀರವ ಸ್ಟೇಡಿಯಂ ಬಳಿಯ ಕೆರೆಗೆ ತಳ್ಳಿ ಈಜು ಬರಲ್ಲ ಉಸಿರುಗಟ್ಟುತ್ತಿದೆ ಎಂದು ಬಾಲಕ ಕಿರುಚಾಡಿದರೂ ಬಿಡದೆ ನೀರಿನಲ್ಲಿ ಮುಳುಗಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ .ಬಾಲಕನನ್ನು ಕರೆಯ ದಡದಲ್ಲಿ ನಿಲ್ಲಿಸಿ ಅವನನ್ನು ಗುದ್ದಿಕೊಂಡು ಕೆರೆಗೆ ಹಾರಿ ವಿಡಿಯೋ ಮಾಡಿದ್ದಾರೆ.ಈ ವಿಡಿಯೋದಲ್ಲಿ ಯುವಕರು ಬಾಲಕನನ್ನು ಹಿಡಿದುಕೊಂಡು ನೀರಿನಲ್ಲಿ ಮುಳುಗಿಸುತ್ತಿರುವುದು, ದೈಹಿಕವಾಗಿ ಹಲ್ಲೆ ಮಾಡುತ್ತಿರುವುದು ಮತ್ತು ಅವಾಚ್ಯ ಪದಗಳಿಂದ ನಿಂದಿಸುತ್ತಿರುವುದು ಕಂಡು ಬಂದಿದೆ. ಅಲ್ಲದೇ ಈ ಕೃತ್ಯವನ್ನು ಅವರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಬಾಲಕ ಅಣ್ಣ ನನಗೆ ಈಜು ಬರುವುದಿಲ್ಲ.ನನಗೆ ಉಸಿರಾಡಲು ಆಗುತ್ತಿಲ್ಲ ಬಿಟ್ಟು ಬಿಡಿ ಎಂದು ಬೇಡಿಕೊಂಡರೂ ಬಿಡದ ಯುವಕರು ಬಾಲಕನನ್ನು ನೀರಿನ ಒಳಗೆ ಎತ್ತಿಕೊಂಡು ಹೋಗಿ ಮುಳುಗಿಸಿದ್ದಾರೆ. ಬಾಹುಬಲಿ ನಾನು ಎಂದು ಹೇಳಿ ಎತ್ತಿ ಎಸೆದಿದ್ದಾರೆ. ಈ ಸಂಬಂಧ ಸಂಪಂಗಿರಾಮ ನಗರ ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ಕೇಸ್ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








