ತಿಪಟೂರು

ನವೆಂಬರ್ 20ರಂದು ನಗರದಲ್ಲಿ ನಡೆದ ಗಣೇಶ ವಿಸರ್ಜನೋತ್ಸವ ಶಾಂತಿಸಭೆಯಲ್ಲಿ ನಗರಸಭೆಯ ಅಧಿಕಾರಿಗಳಿಗೆ ರಸ್ತೆಯ ಗುಂಡಿಗಳನ್ನು ಮುಚ್ಚಿಸಲು ನಗರಸಭೆಯ ಸದಸ್ಯರುಗಳು ಆಗ್ರಹಿಸಿದ್ದರು.
ಇದರ ಫಲಶೃತಿಯಂತೆ ನ.21ರಂದು ನಗರಸಭೆಯ ಅಧಿಕಾರಿಗಳು ಗುತ್ತಿಗೆದಾರರ ಜೊತೆಗೂಡಿ ನಗರದ ಐ.ಬಿ.ಸರ್ಕಲ್‍ನಿಂದ ಪ್ರಾರಂಭವಾಗುವ ಗೋವಿನಪುರ ರಸ್ತೆಯನ್ನು ದುರಸ್ತಿಮಾಡಿದ್ದು ಹೇಗಿತ್ತೆಂದರೆ ಇವರ ಕಾರ್ಯವನ್ನು ನೋಡಿ ಪ್ರಜೆಗಳು ಮೂಗಿನ ಮೇಲಿನ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು.
ರಸ್ತೆ ದುರಸ್ತಿಗೆ ಜಲ್ಲಿ, ಮಣ್ಣು, ಇತ್ಯಾದಿಗಳನ್ನು ಹಾಕುವುದು ಸಾಮಾನ್ಯ. ಆದರೆ ಇಲ್ಲಿ ರಸ್ತೆಯ ಪಕ್ಕದಲ್ಲೇ ಇದ್ದ ಮಣ್ಣನ್ನು ಕೆರೆದು ಹಾಗೆ ತೇಪೆಹಾಕುವುದನ್ನು ಕಂಡು ಜನರು ಈ ಕೆಲಸವನ್ನು ಮೊದಲೇ ಮಾಡಿದ್ದರೆ ಮಳೆಯ ನೀರು ಸರಾಗವಾಗಿ ಚರಂಡಿಯಲ್ಲಿ ಹರಿದು ರಸ್ತೆಯು ಚೆನ್ನಾಗಿರುತ್ತಿತ್ತು. ಹೀಗೆ ಮಾಡಿದರೆ ಗುತ್ತಿಗೆದಾರರಿಗೆ ಸುಲಭವಾಗುತ್ತದೆಯೇ ಹೊರತು ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗುವುದಿಲ್ಲ.
ನಗರಸಭೆ ಅಧಿಕಾರಿಗಳಿಗೆ ಕಣ್ಣಿಗೆ ಕಾಣದ ಮ್ಯಾನ್‍ಹೋಲ್ : ನಗರಸಭೆ ಅಧಿಕಾರಿಗಳು ರಸ್ತೆಯನ್ನು ದುರಸ್ತಿಮಾಡಿಸಲು ಇದೇ ರಸ್ತೆಯಲ್ಲಿ ಕೇವಲ ಕಾರ್‍ನಲ್ಲಿ ಓಡಾಡಿದ್ದಾರೆಯೇ ಹೊರತು ಇಳಿದು ನೋಡುವ ಸ್ಥಿತಿಯಲ್ಲೂ ಇರಲಿಲ್ಲ. ಇದೇ ರಸ್ತೆಯಲ್ಲಿ ಕಳೆದ ತಿಂಗಳು ಮುರಿದು ಬಿದ್ದಿದ್ದ ಒಳಚರಂಡಿಯ ಮ್ಯಾನ್‍ಹೋಲ್ ಅನ್ನು ದುರಸ್ತಿಮಾಡಿದ್ದರು. ಆದರೆ ದುರಸ್ಥಿ ಮಾಡಿದ ವಾರಕಳೆಯುವುದರೊಳಗೆ ಮತ್ತೆ ಮುರಿದು ಬಿದ್ದರು.
ಜಾಣ ಕುರುಡರಂತೆ ಓಡಾಡುವ ಅಧಿಕಾರಿಗಳು ಈ ರಸ್ತೆಯಲ್ಲೇ ತಿರುಗುತ್ತಿದ್ದಾರೆ. ಇದರಿಂದ ಗಣೇಶ ವಿಸರ್ಜನೆಯ ವಾಹನಗಳು ಇದೇ ರಸ್ತೆಯಲ್ಲೇ ಸಂಚರಿಸುವ ಸಂದರ್ಭದಲ್ಲಿ ಏನಾದರೂ ಅಪಘಾತವಾದರೆ ಬದಲಿ ರಸ್ತೆಯೇ ಇರುವುದಿಲ್ಲ. ಆದ್ದರಿಂದ ಶೀಘ್ರವಾಗಿ ಮ್ಯಾನ್‍ಹೋಲ್ ದುರಸ್ತಿಮಾಡದೆ ಹೋದರೆ ಇದು ಕಟ್ಟಿಕೊಂಡು ಇಲ್ಲದ ಸಮಸ್ಯೆ ನಿರ್ಮಾಣವಾಗುತ್ತದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








