ರಾಜೀನಾಮೆ ಕೊಟ್ಟು ನನ್ನನ್ನು ಎದುರಿಸು ಸಾಕು : ತಿಪ್ಪೇಸ್ವಾಮಿ

ಚಿತ್ರದುರ್ಗ

    ಸಿದ್ದರಾಮಯ್ಯ ಅವರೊಬ್ಬ ಮೇರು ಪರ್ವತ. ಅವರ ವಿರುದ್ದ ಸ್ಪರ್ದೆ ಬೇಡ. ನಿನಗೆ ನಿಜವಾಗಿಯೂ ತಾಕತ್ತು ಇದ್ದರೆ ಮೊದಲು ರಾಜೀನಾಮೆ ಕೊಟ್ಟು ಮತ್ತೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ನನ್ನ ವಿರುದ್ದ ಗೆಲ್ಲು ಸಾಕು…. ಹೀಗೆಂದು ಮೊಳಕಾಲ್ಮೂರಿನ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ತಮ್ಮ ರಾಜಕೀಯ ಎದುರಾಳಿಯೂ ಆಗಿರುವ ಸಚಿವ ಬಿ.ಶ್ರೀರಾಮುಲು ಅವರಿಗೆ ಸವಾಲು ಹಾಕಿದ್ದಾರೆ

   ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ತಿಪ್ಪೇಸ್ವಾಮಿ ಅವರು, ಸಚಿವ ಬಿ.ಶ್ರೀರಾಮುಲು ಅವರ ವಿರುದ್ದ ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಮೊದಲು ನನ್ನ ವಿರುದ್ಧ ನಿಂತು ಗೆಲ್ಲು “ರಾಜೀನಾಮೆ ನೀಡಿ ಮತ್ತೆ ಮೊಳಕಾಲ್ಮೂರು ಮತ ಕ್ಷೇತ್ರಕ್ಕೆ ಬಾ” ಎಂದು ಆಕ್ರೋಶ ವ್ಯಕ್ತಪಡಿಸಿದರು

   “ದೇವರ ಮೇಲೆ ಆಣೆ ಮಾಡಿ ನನಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದ್ದೆ, ನಾನೇ ಡಿಸಿಎಂ ಆಗುತ್ತೇನೆ, ಸಿಎಂ ಆಗುತ್ತೇನೆ ಅಂತ ಹೇಳಿದ್ರಿ. ಏನಾಯಿತು ? ಎಂದು ಕೇಳಿದರದಲ್ಲದೆ, ಬರೀ ಸುಳ್ಳು ಹೇಳೋದೆ ನಿನ್ನ ಕಾಯಕ” ಎಂದು ಏಕವಚನದಲ್ಲೇ ಕಿಡಿಕಾರಿದರು
“ಬಿ.ಶ್ರೀರಾಮುಲು ಅಂದ್ರೆ ಬುರುಡೆ ಶ್ರೀರಾಮುಲು ಅಂತ. ನೀನೆಲ್ಲಿ? ಸಿದ್ದರಾಮಯ್ಯ ಎಲ್ಲಿ? ನೀನು ಸಿದ್ದರಾಮಯ್ಯಗೆ ಸವಾಲು ಹಾಕುವುದಲ್ಲ, ನೀನೇ ರಾಜೀನಾಮೆ ಕೊಟ್ಟು ಮೊಳಕಾಲ್ಮೂರು ಕ್ಷೇತ್ರಕ್ಕೆ ಮತ್ತೆ ಬಾ, ಸವಾಲು ಹಾಕಿ ನನ್ನ ಎದುರು ನಿಂತು ಗೆದ್ದು ತೋರಿಸು, ಆಮೇಲೆ ಸಿದ್ದರಾಮಯ್ಯ ಬಗ್ಗೆ ಮಾತನಾಡು ಎಂದು ಹೇಳಿದರು

   ಸಿದ್ದರಾಮಯ್ಯ ಸರ್ಕಾರ ಇದ್ದಾಗ ನಾನು ಕ್ಷೇತ್ರಕ್ಕೆ ತಂದ ಯೋಜನೆಗಳಿಂದ ಈಗ ನೀವು ಹೆಸರು ಮಾಡಿಕೊಳ್ಳುತ್ತಿದ್ದೀರಿ. ನಿಮ್ಮಿಂದ ಈ ಕ್ಷೇತ್ರಕ್ಕೆ ಯಾವುದೇ ಕಾಣಿಕೆ ಇಲ್ಲ. ಒಂದು ಲೆಟರ್ ಬೇಕಾದರೆ ಜನ ನಿನ್ನನ್ನು ಭೇಟಿ ಮಾಡೋಕೆ ಆಗ್ತಿಲ್ಲ” ಎಂದು ಟೀಕಿಸಿದರು.

    ಸಿದ್ದರಾಮಯ್ಯ ರಾಜ್ಯದ ಮೇರುಪರ್ವತ. ಶ್ರೀರಾಮುಲು ಮೊಳಕಾಲ್ಮೂರು ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡುವುದಾಗಿ ದೇವರ ಮೇಲೆ ಆಣೆ ಮಾಡಿದ್ದರು. ಕೊನೆಗೆ ತಾನೇ ಬಂದು ನಿಂತರು. ಸೌಜನ್ಯಕ್ಕೂ ಮಾತಾಡಿಸಲಿಲ್ಲ ಎಂದು ದೂರಿದ ತಿಪ್ಪೇಸ್ವಾಮಿ ಕಳೆದ ಚುನಾವಣೆಯಲ್ಲಿ ಸಿಎಂ ಆಗ್ತಿನಿ, ಡಿಸಿಎಂ ಆಗ್ತಿನಿ ಅಂತಾ ಮೊಳಕಾಲ್ಮೂರು ಜನರಿಗೆ ಸುಳ್ಳು ಹೇಳಿ ಗೆದ್ದರು. ಯಡಿಯೂರಪ್ಪ ಸಿಎಂ ಆಗಲ್ಲ, ನಾನೇ ಆಗ್ತಿನಿ ಎಂದು ಹೇಳಿದ್ದರು ಎಂದು ಆರೋಪಿಸಿದರು.

   ಯಡಿಯೂರಪ್ಪ ಮುಖ್ಯಮಂತ್ರಿಯಾದ 24 ಗಂಟೆಯಲ್ಲಿ ನಾಯಕ ಜನಾಂಗಕ್ಕೆ ಶೇ. 7.5 ಮೀಸಲಾತಿ ಕೊಡಿಸುತ್ತೇನೆ. ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದಿದ್ದರು. ನಾಲ್ಕು ತಿಂಗಳಾಯಿತು ಎಲ್ಲಿ ಹೋಯ್ತಪ್ಪ ನಿನ್ನ ರಕ್ತ ಎಂದು ಪ್ರಶ್ನಿಸಿದರು ಶ್ರೀರಾಮುಲು ನಾಯಕ ಸಮುದಾಯದ ವರಲ್ಲ. ಆಂಧ್ರದ ಬೋಯಾಸ್ ಸಮುದಾಯಕ್ಕೆ ಸೇರಿದವರು. ಶ್ರೀರಾಮುಲು ಎಲ್ಲಿ ಹೋದರೂ ಸುಳ್ಳು ಹೇಳುತ್ತಾರೆ. ಅವರಿಗೆ ನಾಚಿಕೆ ಆಗಬೇಕು.

    ಮೊಳಕಾಲ್ಮೂರು ಶಾಸಕರಾಗಿ ಎರಡು ವರ್ಷ ಆಯ್ತು ಏನೂ ಅಭಿವೃದ್ಧಿ ಆಗಿಲ್ಲ. ತುಂಗಭದ್ರಾ ಹಿನ್ನೀರು ತಂದಿದ್ದು ನಾನು. ವಾಲ್ಮೀಕಿ ಸಮುದಾಯ ಭವನ, ಐಟಿಐ ಕಾಲೇಜು, ಮಿನಿ ವಿಧಾನ ಸೌಧ ತಂದಿದ್ದು ನಾನು. ಬೇಕಾದರೆ ಆರ್ಟಿಐ ನಲ್ಲಿ ತೆಗೆದು ನೋಡಿ ಎಂದರು.

ಪರ್ಸೆಂಟೇಜ್ ರಾಮುಲು:

    7 ರಿಂದ 10 ಪರ್ಸೆಂಟ್ ತೆಗೆದುಕೊಳ್ಳುತ್ತಿದ್ದಾರೆ. ರಾಮುಲು ಕಡೆಯವರು ಲೆಟರ್ ಹೆಡ್ ಗೆ ಎಂಟು ಹತ್ತು ಸಾವಿರ ತಗೋತಾರೆ ಅಂತ ಜನ ಮಾತನಾಡುತ್ತಿದ್ದಾರೆ. ನಿಮ್ಮದು ಅದೆಂತ ಆಡಳಿತವೆಂದು ಕೇಳಿದರಲ್ಲದೆ, ಶ್ರೀರಾಮುಲು ಹಣೆ ಬರಹಕ್ಕೆ ಅಳಿಯ, ತಂಗಿ, ಅಣ್ಣನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಬಳ್ಳಾರಿಯಲ್ಲಿ ಗೆಲ್ಲಲು ಆಗಲ್ಲ ಅಂತಾ ಮೊಳಕಾಲ್ಮೂರು ಕ್ಷೇತ್ರಕ್ಕೆ ಬಂದಿದ್ದಾರೆ ಕುಟುಕಿದರು

   ಮೊಳಕಾಲ್ಮೂರು ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ನರ್ಸ್ ಇಲ. ನಿನ್ನ ಇಲಾಖೆಯ ಕೆಲಸವನ್ನೇ ನೀನು ಮಾಡಿಕೊಡಲು ಆಗಿಲ್ಲ. ನೀನು ಲೀಡರ್ ಅಲ್ಲ. ಇಲ್ಲಿ ಮರಳು ದಂಧೆ ಜೋರಾಗಿ ನಡೆಯುತ್ತಿದೆ. ನೀವು ಅಭಿವೃದ್ದಿ ಮಾಡಲು ಬಂದಿಲ್ಲ, ಸಂಪತ್ತಿಗಾಗಿ ಬಂದಿದ್ದೀರಿ ಎಂದು ಹೇಳಿದರು

ಮೊದಲು ಕನ್ನಡ ಕಲಿಯಲಿ

    ಸಚಿವ ಶ್ರೀರಾಮುಲು ವೇಷ ಹಾಕಿಕೊಂಡು ಬಣ್ಣ ಬಳಿದುಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಕನ್ನಡವೇ ಬರುವುದಿಲ್ಲ. ಬಿಜೆಪಿಯವರು ಅವರಿಗೆ ಕನ್ನಡ ಕಲಿಯಲು ಹೇಳಬೇಕು. ಆಸ್ಪತ್ರೆಯಲ್ಲಿ ಕೆಳಗೆ ಕುಳಿತು ಡ್ರಾಮಾ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಣ್ಣ, ಚನ್ನಪ್ಪ ನೇರಲಗುಂಟೆ, ಚಿಕ್ಕೇಶ ಇದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link