ತೆಲ್ ಅವೀವ್
ಇತ್ತೀಚೆಗೆ ನೈಋತ್ಯ ಸಿರಿಯಾ ಮೇಲೆ ನಡೆಸಿದ ವಾಯುದಾಳಿಯ ಚಿತ್ರಗಳನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ. ಅಲ್ಲಿನ ಉಪಗ್ರಹ ನಿಯಂತ್ರಕ ಇಮೇಜ್ ಸ್ಯಾಟ್ ಇಂಟರ್ ನ್ಯಾಷನಲ್ (ಐಎಸ್ಐ) ಈ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.ಬುಧವಾರ ಸಿರಿಯಾ ರಾಜಧಾನಿ ಡಮಾಸ್ಕಸ್ ನಲ್ಲಿ ಶಕ್ತಿಶಾಲಿ ಸ್ಫೋಟ ಸಂಭವಿಸಿತ್ತು. ಈ ದಾಳಿ ನಡೆಸಿದ್ದ ಇಸ್ರೇಲ್ ಅಲ್ಲಿನ 20 ತಾಣಗಳನ್ನು ಗುರಿಯಾಗಿಸಿರುವುದಾಗಿ ಹೇಳಿಕೆ ನೀಡಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಕಂಪನಿ, ಸಿರಿಯಾ ಮೇಲೆ ನಡೆಸಿದ ವಾಯು ದಾಳಿಯಲ್ಲಿ ಭಾರಿ ನಷ್ಟವಾಗಿದೆ. ಅಲ್ಲಿನ ಗಾಜಿನ ಮನೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಧ್ವಂಸವಾಗಿದೆ ಎಂದು ಮಾಹಿತಿ ನೀಡಿತ್ತು.ಇಸ್ರೇಲ್ ಮೇಲೆ ಸಿರಿಯಾ ನಡೆಸಿದ ರಾಕೆಟ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪ್ರತಿದಾಳಿ ನಡೆಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
