ಇಂದ್ರನ ಸಿಂಹಾಸನ ಕೊಟ್ಟರು ನಿಮ್ಮ ಸಹವಾಸ ಬೇಡ : ಸಂಜಯ್ ರಾವತ್

ಮುಂಬೈ:

   ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಲ್ಲಿ ಭಾರೀ ಬೆಳವಣಿಗೆಗಳ ನಂತರ ಜನತೆ ಹಿತದೃಷ್ಠಿಯಿಂದ ಮಹಾ ಮೈತ್ರಿಕೂಟ ರಚನೆಯಾಗಿದ್ದು ಇದನ್ನು ತಡೆಯಲು ಯತ್ನಿಸುತ್ತಿರುವ ಬಿಜೆಪಿ ನಾನಾ ಕಸರತ್ತು ಮಾಡುತ್ತಿದ್ದು ನಮ್ಮ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ನಡೆಸುತ್ತಿರುವ ಯತ್ನಗಳು ಎಂದಿಗೂ ಫಲ ಕೊಡುವುದಿಲ್ಲಾ ಮತ್ತು ಅವರು ನಮಗೆ ಸ್ವರ್ಗಾಧಿಪತಿ ಇಂದ್ರನ ಸಿಂಹಾಸನ ನೀಡಿದರೂ ನಮಗೆ ಅಗತ್ಯವಿಲ್ಲಾ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

   ಎನ್ ಸಿಪಿ-ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದರೆ ಶಿವಸೇನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪಟ್ಟ ದೊರಕಲಿದೆ ಎಂದರು.ಬಿಜೆಪಿ ಶಿವಸೇನೆಗೆ ಸಿಎಂ ಹುದ್ದೆ ನೀಡಲು ಒಪ್ಪಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಬಿಜೆಪಿಯ ಜೊತೆ ಮಾತುಕತೆ ನಡೆಸುವ ಸಮಯ ಮುಗಿದಿದೆ. ಈಗ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಸಿಎಂ ಆಗುವುದನ್ನು ಮಹಾರಾಷ್ಟ್ರದ ಜನತೆ ಬಯಸುತ್ತಿದ್ದಾರೆ ಎಂದರು. ಇಂದೇ ರಾಜ್ಯಪಾಲರನ್ನು ಮೂರೂ ಪಕ್ಷಗಳು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸುತ್ತೀರಾ ಎಂದು ಕೇಳಿದಾಗ, ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವಾಗ ರಾಜ್ಯಪಾಲರ ಭೇಟಿಯ ಅಗತ್ಯವಾದರು ಏನಿದೆ ಎಂದು ಮರುಪ್ರಶ್ನಿಸಿದ್ದಾರೆ.

   ನಿನ್ನೆ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರು ಸಭೆ ಸೇರಿ ಮಾತುಕತೆ ನಡೆಸಿದ್ದು, ಮುಖ್ಯಮಂತ್ರಿಯಾಗಿ ಶಿವಸೇನೆಯ ನಾಯಕರೇ 5 ವರ್ಷ ಇರಬೇಕೆ ಅಥವಾ ಎರಡೂ ಪಕ್ಷಗಳು ಸಮಾನವಾಗಿ ಹಂಚಿಕೆ ಮಾಡಿಕೊಳ್ಳಬೇಕೆ ಎಂದು ಚರ್ಚಿಸಿದ್ದಾರೆ. ಉದ್ಧವ್ ಠಾಕ್ರೆಯವರನ್ನು ಮುಖ್ಯಮಂತ್ರಿ ಮಾಡಲು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎಂದು ಎನ್ ಸಿಪಿಯ ಹಿರಿಯ ನಾಯಕರು ಕೂಡ ತಿಳಿಸಿದ್ದಾರೆ ಮತ್ತು ಇದು ಒಂದು ಆರೋಗ್ಯಕರ ಮೈತ್ರಿಯ ಲಲ್ಷಣ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link