ಚಿತ್ರದುರ್ಗ
ಚಿತ್ರದುರ್ಗದ ಆರ್ ಟಿ ಒ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ ಪರೀಶೀಲನೆ ಮಾಡಿದ ಘಟನೆ ಇಂದು ನಡೆದಿದೆ.ಚಿತ್ರದುರ್ಗ ಆರ್ ಟಿ ಒ ಕಚೇರಿಯಲ್ಲಿ ಹೆಚ್ಚಾಗಿರುವ ಮಧ್ಯವರ್ತಿಗಳ ಹಾವಳಿ ಹಿನ್ನೆಲೆ ಸಾರ್ವಜನಿಕರ ದೂರಿನ ಮೇರೆಗೆ ದಿಢೀರ್ ಭೇಟಿಕೊಟ್ಟ ಲೋಕಾಯುಕ್ತ ಅಧಿಕಾರಿಗಳು ಪರೀಶಿಲನೆ ಮಾಡಿದ್ದಾರೆ.
ಲೋಕಾಯುಕ್ತ ಪ್ರಭಾರಿ ಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಮಂಜುನಾಥ್, ಸಿಪಿಐ ಮಹೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಆರ್ ಟಿ ಒ ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದರು.ದಾಳಿ ಬಗ್ಗೆ ಮಾಹಿತಿ ತಿಳಿದು ನಾಪತ್ತೆಯಾದ ಬ್ರೋಕರ್‍ಗಳು ಕಚೇರಿಯಿಂದ ನಾಪತ್ತೇಯಾಗಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
