ತುಮಕೂರು : ನಗರದ ಸರ್ವತೋಮುಖ ಬೆಳವಣಿಗೆಗೆ ಡೆನ್ಮಾರ್ಕ್ ಸಹಭಾಗಿತ್ವ

ಬೆಂಗಳೂರು

     ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವಲ್ಲಿ ತುಮಕೂರು ನಗರದ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾಗಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಆಲ್‍ಬೋರ್ಗ್ ಸ್ಮಾರ್ಟ್ ಸಿಟಿ ಡೆನ್ಮಾರ್ಕ್ ನಡುವೆ ಸಹಭಾಗಿತ್ವದ ಒಡಂಬಡಿಕೆ ಸಹಿ ಮಾಡಿದ ನಂತರ ಅವರು ಮಾತನಾಡಿದರು.

    ಈ ಒಡಂಬಡಿಕೆಯಲ್ಲಿ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಜ್ಞಾನದ ವಿನಿಮಯ, ಅಧ್ಯಯನ ಪ್ರವಾಸ ಹಾಗೂ ಕಾರ್ಯಾಗಾರಗಳ ಆಯೋಜನೆ, ಸ್ಮಾರ್ಟ್ ಸಿಟಿ ಯೋಜನಾ ಕ್ಷೇತ್ರದಲ್ಲಿ ಜಂಟಿಯಾಗಿ ಯೋಜನೆಗಳನ್ನು ರೂಪಿಸುವುದು, ಉನ್ನತ ಮಟ್ಟದ ಪ್ರತಿನಿಧಿಗಳು ಎರಡೂ ನಗರಗಳನ್ನು ಪರಸ್ಪರ ಸಂದರ್ಶಿಸುವ ಅಂಶಗಳನ್ನು ಇದು ಒಳಗೊಂಡಿದೆ. ಆಲ್ ಬೋರ್ಗ್ ನಗರವು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆಗಳಿಗಾಗಿ ಆರ್ಥಿಕ ಸಹಾಯವನ್ನು ಒದಗಿಸುವ ಸಂಭಾವ್ಯ ಮೂಲಗಳನ್ನು ಗುರುತಿಸುವಲ್ಲಿ ಸಹಕಾರ ನೀಡಲಿದೆ ಎಂದರು.

    ಸಂಭಾವ್ಯ ಸಹಕಾರದ ವ್ಯಾಪ್ತಿಯು ಸ್ಮಾರ್ಟ್ ಶಿಕ್ಷಣ, ಡಿಜಿಟಲೀಕರಣ ಮತ್ತು ಶಕ್ತಿ ದಕ್ಷ ಉಪಕ್ರಮಗಳು, ನಗರ ನೀರು ನಿರ್ವಹಣೆ, ಸಾರಿಗೆ, ಹಸುರು ಕಟ್ಟಡ ನಿರ್ಮಾಣದ ತಂತ್ರಜ್ಞಾನ, ಕಸ ನಿರ್ವಹಣೆ, ಆರೋಗ್ಯಕರ ಮತ್ತು ವಾಸ ಯೋಗ್ಯ ನಗರಗಳು, ಆರೋಗ್ಯ ಇ-ಆಡಳಿತ ಸಹ ಯೋಜನೆಯಲ್ಲಿ ಒಳಗೊಂಡಿರುತ್ತದೆ.

    ಕಾರ್ಯಕ್ರಮದಲ್ಲಿ ಡೆನ್ಮಾರ್ಕ್ ದೇಶದ ರಾಯಭಾರಿ ಫ್ರೆಡ್ಡಿ ಸ್ವಾನೆ ಒಡಂಬಡಿಕೆಗೆ ಸಹಿ ಹಾಕಿದರು. ಯೋಜನೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಸೇರಿದಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap