ಬೆಂಗಳೂರು
ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲದರ ದರವು ಏರಿಕೆಯಾಗಿದೆ ನಿಜ ಆದರೆ 150 ವ್ಯಾಟ್ ನ ಒಂದು ಎಲ್ ಇ ಡಿ ಬಲ್ಬ್ ಮಾರುಕಟ್ಟೆಯಲ್ಲಿ 5 ಸಾವಿರ ರೂಗೆ ಲಭ್ಯವಿದ್ದರೂ ಕೂಡ ಕೆಐಎಡಿಬಿಯ ಎಂಜಿನಿಯರ್‌ಗಳು ಅದಕ್ಕೆ ಬರೋಬ್ಬರಿ 52,890 ರೂ ವ್ಯಯಿಸುತ್ತಿರುವುದು ಆಶ್ಚರ್ಯ ಮತ್ತು ಅನುಮಾನ ಮೂಡಿಸಿದೆ. ಹಾಗೆಂತ ಇದೇನು ದೇವಲೋಕದ ಅದರೆ ಎಲ್‌ಇಡಿ ದೀಪವಲ್ಲ 5000ರೂಗಳಿಗೆ ಸಿಗುವ ಎಲ್‌ಇಡಿ ದೀಪ ನೀಡುವ ಬೆಳಕನ್ನೇ ಈ ದೀಪವು ಕೂಡ ನೀಡಲಿದೆ.
ಅಂದಹಾಗೆ ಇದು ಒಂದು ಪ್ರದೇಶದ ಎಲ್ಲಾ ದೀಪಗಳಿಗೆ ಸೇರಿ ಅಲ್ಲ, ಕೇವಲ ಒಂದೇ ಬೀದಿ ದೀಪಕ್ಕೆ ಇಷ್ಟು ಹಣವನ್ನು ವ್ಯಯಿಸಲಾಗುತ್ತಿದ್ದು ಈ ಪ್ರದೇಶ ಇರುವುದಾದರು ಎಲ್ಲಿ ಎಂದರೆ ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಏರೋಸ್ಪೇಸ್ ಪಾರ್ಕಿಗೆ 186 ಸ್ಟ್ರೀಟ್‌ಲೈಟ್‌ಗಳನ್ನು ಅಳವಡಿಸಲು ಕೆಐಎಡಿಬಿ ಗುತ್ತಿಗೆ ಪಡೆದಿದೆ.
ಅದರ ಜೊತೆಗೆ ವಿದ್ಯುತ್ ಕಂಬ, ಎಚ್‌ಡಿಪಿಇ ಪೈಪ್ ಅಳವಡಿಕೆಯೂ ಕೂಡ ನಡೆಯುತ್ತಿದೆ. ಪ್ರತಿ ವಿದ್ಯುತ್ ಕಂಬಕ್ಕೆ 21,055 ರೂಗಳನ್ನು ವೆಚ್ಚ ಮಾಡಲಾಗುತ್ತಿದೆ. ಎರಡು ಮೀಟರ್ ಬ್ರಾಕೆಟ್‌ಗಳಿಗೆ 3,395ರೂಗಳನನ್ಉ ವ್ಯಯಿಸಲಾಗುತ್ತಿದೆ. ಕೇಬಲ್‌ಗೆ 203 ರೂ, ಎಚ್‌ಡಿಪಿಇ ಪೈಪ್‌ಗಳಿಗೆ 321ರೂ ಹೆಚ್ಚಾಗಿ ವಹಿಸಲಾಗುತ್ತಿದೆ.
ಹೀಗೆ ಆಗಿರುವುದು ಇದೇ ಮೊದಲಲ್ಲ ಬೆಂಗಳೂರು ಮೆಟ್ರೋ ನಿಗಮವು 150 ವ್ಯಾಟ್ ಎಲ್‌ಇಡಿ ಬೀದಿ ದೀಪಕ್ಕೆ 11,125 ರೂ ನೀಡಿ ಖರೀದಿ ಮಾಡಿತ್ತು. ಆದರೆ ಕೆಐಎಡಿಬಿ ಒಂದು ದೀಪಕ್ಕೆ 52,890 ರೂ ಖರ್ಚು ಮಾಡುತ್ತಿದೆ. ಆದರೆ ಅಷ್ಟು ಕಡಿಮೆ ಬೆಲೆಗೆ ಸಿಕ್ಕರೂ ಯಾಕೆ ಹೆಚ್ಚು ಹಣ ವ್ಯಯಿಸಲಾಗುತ್ತಿದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ