ಅಕ್ರಮ ಔಷದಿ ಮಾರುವ ಮೆಡಿಕಲ್ ಶಾಪ್ ಗಳ ಮೇಲೆ ಪೊಲೀಸ್ ದಾಳಿ

ಬೆಂಗಳೂರು

     ವೈದ್ಯರ ಅಧಿಕೃತ ಚೀಟಿ ಇಲ್ಲದೇ ಅಕ್ರಮವಾಗಿ ನೆಶೆ ಬರಿಸುವ ಔಷಧ ಮಾರಾಟ ಮಾಡುವ ಔಷಧಾಲಯಗಳ ಮೇಲೆ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳೊಂದಿಗೆ ಕೇಂದ್ರ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.

    ಆಸ್ಟಿನ್‌ಟೌನ್, ವಿವೇಕನಗರ, ನೀಲಸಂದ್ರ, ಈಜಿಪುರ, ಆನೇಪಾಳ್ಯ, ವಸಂತನಗರ, ವೈಯಾಲಿಕಾವಲ್, ಶೇಷಾದ್ರಿಪುರಂ ಸೇರಿದಂತೆ ಕೇಂದ್ರ ವಿಭಾಗದ ಪ್ರದೇಶಗಳಲ್ಲಿನ ಸುಮಾರು 24 ಮೆಡಿಕಲ್ ಸ್ಟೋರ್‍ಸ್‌ಗಳ ಮೇಲೆ ದಾಳಿ ನಡೆಸಿ ಡ್ರಗ್ ಇನ್ಸ್‌ಪೆಕ್ಟರ್‌ಗಳೊಂದಿಗೆ ಪರಿಶೀಲನೆ ನಡೆಸಲಾಗಿದೆ ಎಂದು ಡಿಸಿಪಿ ಚೇತನ್‌ಸಿಂಗ್ ರಾತೋರ್ ತಿಳಿಸಿದ್ದಾರೆ.

      ಇತ್ತ್ತಿಚೆಗೆ ಅನಧಿಕೃತವಾಗಿ ಔಷಧಿಗಳ ಹೆಚ್ಚಿನ ಡೊಸೇಜ್ ಉಪಯೋಗಿಸಿ, ವಿದ್ಯಾರ್ಥಿಗಳಿಬ್ಬರು ಮೃತ ಹೊಂದಿದ ಹಿನ್ನೆಲೆಯಲ್ಲಿ ಅಮಲಿನಿಂದ ಕೂಡಿದ ಔಷಧಗಳನ್ನು ಯುವಕರ/ವಿದ್ಯಾರ್ಥಿಗಳ ದುಶ್ಚಟಕ್ಕಾಗಿ ನೀಡಲು ಅನಧಿಕೃತವಾಗಿ ಸಂಗ್ರಹಣೆ ಮಾಡುವ ಹಾಗೂ ಇಂತಹ ಔಷಧಿಗಳನ್ನು ವೈದ್ಯರ ಯಾವುದೇ ಅಧೀಕೃತ ಚೀಟಿ ಇಲ್ಲದೇ ಕಾನೂನು ಬಾಹಿರವಾಗಿ ಮಾರಾಟ ಮಾಡುವ ಔಷಧಾಲಯಗಳ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ ಎಂದರು.

      ದಾಳಿಯ ವೇಳೆಯಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೇ, ಅಮಲಿನ ಹಾಗೂ ಪದೇ ಪದೇ ಇಂತಹ ಔಷದಿಗಳಿಗೆ ವ್ಯಸನಿಗಳಾಗು ವಂತೆ ಯುವಕರಿಗೆ ಅನಧೀಕೃತವಾಗಿ ಮಾರಾಟ ಮಾಡುತ್ತಿದ್ದ ವನ್ನಾರಪೇಟೆಯ ಎಸ್.ಟಿ.ಮೆಡಿಕಲ್ಸ್, ಈಜಿಪುರದ ಸೌಭಾಗ್ಯ ಮೆಡಿಕಲ್ಸ್ ಮಾಲೀಕರ ವಿರುದ್ಧ ಡ್ರಗ್ಸ್ ಮತ್ತು ಕಾಸ್ಮೆಟಿಕ್ ಆಕ್ಟ್ ಮತ್ತು ರೂಲ್ಸ್ ರಡಿಯಲ್ಲಿ ನಿಯಮಗಳ ಉಲ್ಲಂಘನೆ ಮಾಡಿರುವುದು ಕಂಡುಬಂದಿದ್ದು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link