ಕೇಂದ್ರ ಬಿಜೆಪಿ ಸರ್ಕಾರಕ್ಕೆ ಗೊತ್ತು ಗುರಿ ಏನೂ ಇಲ್ಲ

ಚಿತ್ರದುರ್ಗ

      ಮಹರಾಷ್ಟ್ರದಲ್ಲಿ ರಾತ್ರೋರಾತ್ರಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಹೋಗಿ ಉರುಳಿ ಬಿದ್ದ ನಂತರ ಬಿಜೆಪಿಗರು ತಮ್ಮ ನಡುರಾತ್ರಿ ಕಳ್ಳತನ ಸಮರ್ಥಿಸಲು ಸತ್ಯದ ತಲೆಗೆ ಹೊಡೆದಂತೆ ಬುಲ್ಲೆಟ್ ಟ್ರೈನಿನ ಸುಳ್ಳು ಕಥೆ ಹರಡುತ್ತಿದ್ದಾರೆ ಎಂದು , ಕೆಪಿಸಿಸಿಮಾಧ್ಯಮ ವಿಶ್ಲೇಷಕರು ಜಿ. ಬಿ. ಬಾಲಕೃಷ್ಣ ಸ್ವಾಮಿ ಆರೋಪಿಸಿದ್ದಾರೆ.

      ಈ ಬಗ್ಗೆ ಮಾಧ್ಯಮಗಳಿಗೆ ಹೇಳೀಕೆ ನೀಡಿರುವ ಆವರು, ಬಿಜೆಪಿಗರು ಕಪ್ಪುಹಣ ಹೊರತೆಗೆಯಲು ನೋಟು ರದ್ದತಿ ಮಾಡಲಾಗಿದೆ ಎಂದು ಹೇಳಿದರು. ಬಡವರು ಮನೆಯಲ್ಲಿ ಕೂಡಿಟ್ಟಿದ್ದ ಪುಡಿಗಾಸು ಬ್ಯಾಂಕ್‍ಗೆ ಬಂತೇ ಹೊರತು ಧನಿಕರ ಕಪ್ಪುಹಣ ಹೊರಗೆ ಬರಲೇ ಇಲ್ಲ. ಕಾಶ್ಮೀರಕ್ಕೆ ಇದ್ದ ಸಂವಿಧಾನದ 370 ಮತ್ತು 35 ಎ ವಿಧಿಯನ್ನು ರದ್ದುಗೊಳಿಸಲಾಯಿತು. ಮುಂದೇನು ಮಾಡಬೇಕು ಎಂಬ ಗುರಿಯಿಲ್ಲ. ಎನ್‍ಸಿಆರ್ ಮತ್ತು ನಾಗರಿಕತೆ ತಿದ್ದುಪಡಿ ಮಸೂದೆ ಕೂಡ ಅದೇ ರೀತಿಯದ್ದು ಎಂದರು.

      ಫಡ್ನವಿಸರ ಮೂರು ದಿನದ ಮುಖ್ಯಮಂತ್ರಿ ಪದ ನಿಜವಾಗಿ ಮೋದಿ-ಷಾಗಳೇ ದೇಶದ ಒಳಿತಿಗಾಗಿ ರಚಿಸಿದ ಅದ್ಭುತ ರಹಸ್ಯ ಯೋಜನೆಯೆಂದು ಹೇಳಿಕೊಳ್ಳುತ್ತಾ ಬರೀಸುಳ್ಳು ಸುಳ್ಳು ಮಾಹಿತಿಯನ್ನು ಜನರಲ್ಲಿ ತುಂಬುತ್ತಾ ಬಂದಿರುವ ಬಿಜೆಪಿಯ ಆಟ ಇನ್ನು ಮುಂದೆ ಸಾಗೊಲ್ಲ. ರಾಷ್ಟ್ರೀಯ ಪೌರತ್ವ ನೊಂದಣಿ (ಎನ್‍ಆರ್ಸಿ) ನಾಗರಿಕತೆ ತಿದ್ದುಪಡಿ ಮಸೂದೆ ಕಾಶ್ಮೀರದಲ್ಲಿ 370 ವಿಧಿ ರದ್ದು, ನೋಟು ರದ್ದತಿಯಂತಹ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಗೊತ್ತು ಗುರಿ ಏನೂ ಇಲ್ಲ ಎಂದು ಅವರು ಟೀಕಿಸಿದ್ದಾರೆ

      ಎಲ್ಲಾ ಉದ್ದಿಮೆಗಳಲ್ಲಿ ಕೆಲಸಗಾರರಿಗೆ ಕೂಲಿ ಇಲ್ಲದೆ, ಕಾರ್ಮಿಕರಿಗೆ ಭವಿಷ್ಯವಿಲ್ಲದೇ, ವಾಸಿಸಲು ಮನೆಯಿಲ್ಲದೇ, ತೀವ್ರ ತೊಂದರೆಗಳನ್ನು ಅನುಭವಿಸುತ್ತಿರುವ ದೇಶದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸದೇ ಭಾರತದಲ್ಲಿ ಆರ್ಥಿಕ ಹಿಂಜರಿತವೇ ಆಗಿಲ್ಲ ಎಂದು ಸ್ವತಹಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರೇ ಹೇಳುತ್ತಿರುವುದು ಹಾಸ್ಯಾಸ್ಪದವಲ್ಲದೇ ಇನ್ನೇನು? ಎಂದು ಪ್ರಶ್ನಿಸಿದ್ದಾರೆ.

      ದೇಶದ ಜನರು ಬಿಜೆಪಿಗರ ಈ ಎಲ್ಲಾ ಸುಳ್ಳು ಪೆÇಳ್ಳು ಮಾತುಗಳಿಗೆ ಬೇಸತ್ತು ಗೋಗಿದ್ದಾರೆ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ಆರಾಧಿಸುತ್ತಲೇ ಬಂದಿರುವ ಬಿಜೆಪಿ,. ಇದೀಗ ಸಂಸತ್ ಭವನದ ಒಳಗೇ ಆತನನ್ನು ದೇಶಭಕ್ತ ಎಂದು ಕರೆದಿದೆ. ಆ ಮೂಲಕ ಭಾರತವೂ ಸೇರಿದಂತೆ ಇಡೀ ಜಗತ್ತಿನ ಪಾಲಿನ ಭಯೋತ್ಪಾದಕನನ್ನು ಸಂವಿಧಾನ ಮತ್ತು ಕಾನೂನಿನ ಚಿಂತನ ಚಾವಡಿಯಲ್ಲಿಯೇ ಹಾಡಿಗೊಹಳುವ ಪ್ರಯತ್ನಕ್ಕೆ ಬಿಜೆಪಿ ಚಾಲನೆ ನೀಡಿದೆ. ದೇಶದಲ್ಲಿ ಆಪರೇಷನ್ ಕಮಲವನ್ನು ಬೇರು ಸಮೇತವಾಗಿ ಕಿತ್ತು ಹಾಕುವ ಸಲುವಾಗಿ ಬಿಜೆಪಿ ನೋಟು ಕಾಂಗ್ರೆಸ್ ಗೆ ಓಟು ಎಂಬ ಪದಗಳನ್ನು ಬಳಸಿ ರಾಜ್ಯದ ಜನರು ಜಾಗೃತಗೊಂಡಿದ್ದಾರೆ. ಬಿಜೆಪಿಯವರ ಅನಿಷ್ಟ ತತ್ವಗಳು ಅವರಿಗೆ ತಿರುಗುಬಾಣವಾಗಿದೆ. ಇನ್ನೆಂದು ಆಪರೇಷನ್ ಕಮಲ ಎಂಬ ಪದವನ್ನು ಬಳಸದಂತೆ ಬುದ್ದಿ ಕಲಿಸುವ ಸಮಯ ಆಸನ್ನವಾಗಿದೆ ಎಂದಿದ್ದಾರೆ.

       ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಈರುಳ್ಳಿ ಬೆಲೆ 25 ರಿಂದ 60 ತನಕ ಏರಿಕೆ ಆಗಿತ್ತು. ಅಂದು ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಬೆಲೆ ಏರಿಕೆ ವಿರುದ್ದ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ ಇಂದು ಈರುಳ್ಳಿ ಬೆಲೆ 100ಕ್ಕೆ ಏರಿದ್ದರೂ ಗ್ರಾಹಕರ ಪರವಾಗಿ ಕ್ರಮ ಕೈಗೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ. ಈ ಎಲ್ಲಾ ಅಪ್ರಬುದ್ದತೆಯ ಕೊನೆಯ ಹಂತಕ್ಕೇರಿದ ಬಿಜೆಪಿ ಸಮರ್ಥಿತರ ಮತಾಂಧತೆಯ ಮಂಕು ಅವರನ್ನು ಮಂಕುದಿಣ್ಣೆಗಳನ್ನಾಗಿ ಮಾಡಿತ್ತು. ಪರಿಣಾಮ ಈಗ ದೇಶದ ಜನತೆಯ ಕಣ್ಣ ಮುಂದಿದೆ.

        ಈ ಉಪ ಚುನಾವಣೆಯಲ್ಲಿ ಬಿಜೆಪಯವರು ಸೋಲನ್ನಪ್ಪುವ ಪರಿಸ್ಥಿತಿಯೆದುರಾಗುವ ಸಂದರ್ಭ ತೀರಾ ದೂರವೇನಿಲ್ಲ. ನಮ್ಮ ದೇಶದಲ್ಲಿ ಮೋದಿ, ಆರೆಸ್ಸೆಸ್ ಮತ್ತು ಕೋಮುವಾದ ಈ ಮೂರಿಂದಲೇ ದೇಶವನ್ನು ಒಡೆದು ಆಳುವ ಅನೈತಿಕ ಪದ್ದತಿಗಳನ್ನು ಮೈಗೂಡಿಸಿಕೊಂಡು ನಿರಂಕುಶತ್ವದ ಆಡಳಿತಾವೈಖರಿಯನ್ನು ನೆರವೇರಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಖ್ಯವಾಗಿ ರಾಜ್ಯ ಸರ್ಕಾರದ ವಿರುದ್ದ ಜನರು ತಿರುಗಿಬಿದ್ದು ತಕ್ಕ ಪಾಠ ಕಲಿಸುವ ದಿನ ಇನ್ನು ಕೇವಲ 4 ದಿನಗಳ ದೂರವಿದೆ. ಕಾದು ನೋಡೋಣ, ನಾಡಿನ ಜನತೆ ಸಂಭ್ರಮಿಸಲು ಸಿದ್ದರಾಗಬೇಕಿದೆ ಎಂದಿದ್ದಾರೆ.

 

Recent Articles

spot_img

Related Stories

Share via
Copy link