ಕಾಬೂಲ್:
ತಾಲಿಬಾನ್ ಉಗ್ರರ ವಿರುದ್ಧ ಅಫ್ಘಾನ್ ಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು 15 ಉಗ್ರರನ್ನು ಹತ್ಯೆಗೈಯಲಾಗಿದೆ.
ವಿಶೇಷ ಪಡೆ ಕಮಾಂಡರ್ ಈ ವಿಷಯವನ್ನು ತಿಳಿಸಿದ್ದು, ನಿಶ್ ಜಿಲ್ಲೆಯ ಖಿಂಜಾಕ್ ಪ್ರದೇಶದಲ್ಲಿ ಶುಕ್ರವಾರ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎನ್ನಲಾಗಿದೆ. ಕಾರ್ಯಾಚರಣೆಯಲ್ಲಿ 15 ತಾಲಿಬಾನ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ದಕ್ಷಿಣ ಪ್ರಾಂತ್ಯದ ಕಂದಹಾರ್ ನಲ್ಲಿ ನಡೆದ ಈ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಸೆರೆ ಹಿಡಿಯಲಾಗಿದೆ. ಅಫ್ಘಾನಿಸ್ಥಾನದ ವಿಶೇಷ ಪಡೆಯ ಈ ಕಾರ್ಯಾಚರಣೆಯ ಬಗ್ಗೆ ತಾಲಿಬಾನ್ ಉಗ್ರ ಸಂಸ್ಥೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ