ಬಡ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕು:ಚಂದ್ರಪ

ಚಿತ್ರದುರ್ಗ

    ಬಯಲು ಸೀಮೆಯ ಪ್ರತಿಷ್ಟಿತ ಶ್ರೀ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಎಸ್.ಎಲ್.ವಿ. ಪದವಿ ಪೂರ್ವ ಕಾಲೇಜು ಹಾಗೂ ಇಂಡಿಯನ್ ಇಂಟರ್ ನ್ಯಾಷನಲ್ ಸಿಬಿಎಸ್‍ಇ ಪದವಿ ಪೂರ್ವ ಕಾಲೇಜುವತಿಯಿಂದ ಭಾನುವಾರ ರೆಸ್ಪೆಕ್ಟ್ ಟ್ಯಾಲೆಂಟ್-2019 ಶಿರ್ಷಿಕೆಯಡಿ ಪ್ರತಿಭಾನ್ವೇಷಣಾ ಪರೀಕ್ಷೆ ಹಾಗೂ ಎಸ್‍ಎಸ್‍ಎಲ್‍ಸಿ ಪಠ್ಯಕ್ರಮ ಕುರಿತ ಕಾರ್ಯಾಗಾರ ಯಶ್ವಿಯಾಗಿ ಜರುಗಿತು

      ಅರ್ಹ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನವನ್ನು ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಸುಮಾರು 4500ಕ್ಕೂ ಅಧಿಕ ವಿದ್ಯಾರ್ಥಿಗಳು ಆಗಮಿಸಿದ್ದರು. ಇಡೀ ವಿದ್ಯಾಸಂಸ್ಥೆಯ ಆವರಣವು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹಾಗೂ ಕಠಿಣ ವಿಷಯಗಳಿಗೆ ತರಬೇತಿಯನ್ನು ಸಹ ನೀಡಲಾಯಿತು.

      ಹಾಗೆಯೇ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಅತ್ಯಂತ ಸಮರ್ಥವಾಗಿ ಎಸ್.ಎಲ್.ವಿ.ಪದವಿಪೂರ್ವ ಕಾಲೇಜಿನ ನುರಿತ ಅಧ್ಯಾಪಕವೃಂದ ಯಶಸ್ವಿಯಾಗಿ ನೀಡಿತು. ಈ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಾಧಾರಿತ ಲ್ಯಾಪ್‍ಟಾಪ್ ಹಾಗೂ ಟ್ಯಾಬ್‍ಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.
ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್‍ನ ವಿಶಾಲ ಮೈದಾನದಲ್ಲಿ ಜರುಗಿದ ಈ ಕಾರ್ಯಕ್ರಕ್ಕೆ ದೇವರಾಜ್ ಅರಸು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳೂ ಆಗಿರುವ ಹೊಳಲ್ಕೆರೆ ಶಾಸಕ ಎಮ.ಚಂದ್ರಪ್ಪ ಚಾಲನೆ ನೀಡಿದರು.

     ನಂತರ ಮಾತನಾಡಿದ ಶಾಸಕರು ಚಿತ್ರದುರ್ಗ ಆರ್ಥಿಕವಾಗಿ ತೀರಾಹಿಂದುಳದ ಪ್ರದೇಶವಾಗಿದ್ದು, ಇಲ್ಲಿನ ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗುವುದು ಕಷ್ಟದ ಕೆಲಸ. ಬಡವರ ನೋವು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿ ಬಹುಕೋಟಿ ವೆಚ್ಚದಲ್ಲಿ ಬೃಹತ್ ಕಟ್ಟಡವನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು

      ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಸಂಸ್ಥೆಯಡಿಯಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗಿದೆ. ಮದ್ಯ ಕರ್ನಾಟಕದಲ್ಲಿಯೇ ಇಂತಹ ಅತ್ಯುತ್ತಮ ಸಂಸ್ಥೆ ಎಲ್ಲೂ ಇಲ್ಲವೆಂದು ಎಂ.ಚಂದ್ರಪ್ಪ ನುಡಿದರು.

      ಈ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನಮ್ಮ ಸಂಸ್ಥೆಯಿಂದ ನೀಡಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿರುವ ಕಾರಣಕ್ಕೆ ಉತ್ತಮ ಕಾಲೇಜುಗಳಿಗೆ ದುಬಾರಿ ಶುಲ್ಕವನ್ನು ಕಟ್ಟಲಾಗದೆ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಂಡಿದ್ದಾರೆ. ಈ ದೃಷ್ಟಿಯಿಂದ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿದ್ಯಾರ್ಥಿವೇತನವನ್ನು ನಮ್ಮ ಸಂಸ್ಥೆಯಿಂದ ನೀಡಿ ಅವರಿಗೆ ಉನ್ನತ ಶಿಕ್ಷಣವನ್ನು ನೀಡುವುದು ನನ್ನ ಆಶಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

      “ಹಾಗೆಯೇ 14 ರಿಂದ 18ನೇ ವಯಸ್ಸು ಮನುಷ್ಯನ ಜೀವನದ ಮಹತ್ವದ ಹಂತ. ಇಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಎಡವಬಾರದು. ತಾವು 2 ವರ್ಷ ಕಷ್ಟಪಟ್ಟು ಓದಿದರೆ, ನಿಮ್ಮ ತಂದೆ-ತಾಯಿಗಳಿಗೆ ಕೋಟ್ಯಾಂತರ ರೂಪಾಯಿ ಉಳಿಸಿದಂತೆಯೇ ಸರಿ. ಇಂದಿನ ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ಅತ್ಯಂತ ದಕ್ಷತೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಹಾಗೂ ಸಿಗುವ ಯಾವುದೇ ಸಣ್ಣ ಅವಕಾಶವನ್ನು ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಬಳಸಿಕೊಳ್ಳಬೇಕು. ಅತ್ಯಂತ ವೆಚ್ಚದಾಯಕವಾದ ವೈದ್ಯಕೀಯ ಮತ್ತಿತರ ಕೋರ್ಸುಗಳಿಗೆ ಪ್ರವೇಶಾವಕಾಶವನ್ನು ಪೋಷಕರಿಗೆ ಹೊರೆಯಾಗದ ಹಾಗೆ ವೈಯಕ್ತಿಕ ಶೈಕ್ಷಣಿಕ ಸಾಮಥ್ರ್ಯದಿಂದ ಗಳಿಸುವಂತಾಗಬೇಕು” ಎಂದು ಕಿವಿಮಾತು ಹೇಳಿದರು.

      ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಈ.ರುದ್ರಮುನಿ ಮಾತನಾಡಿ, “ಬದಲಾಗುತ್ತಿರುವ ಶೈಕ್ಷಣಿಕ ಸನ್ನಿವೇಶಗಳಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಜಾಗರೂಕರಾಗಿ ಓದಿನಲ್ಲಿ ತೊಡಗಿಸಿಕೊಳ್ಳಬೇಕು” ಎಂದು ನುಡಿದರು. ಎಸ್.ಎಲ್.ವಿ.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಎ.ಕೊಟ್ರೇಶ್‍ರವರು ಮಾತನಾಡಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಪಿ.ಯು.ಸಿ ಹಾಗೂ ಮುಂದಿನ ವಿದ್ಯಾಭ್ಯಾಸದಲ್ಲಿ ಹೇಗೆ ಕೋರ್ಸ್‍ಗಳನ್ನು ಆಯ್ಕೆಮಾಡಿಕೊಳ್ಳಬೇಕು ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಇಂಡಿಯನ್ ಇಂಟರ್‍ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಕೊಟ್ರೇಶ್.ಕೆ.ಟಿ., ಶ್ರೀ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶಿವಕುಮಾರ್.ಎ.ಜೆ., ಎಸ್.ಎಲ್.ವಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಹಾಂತೇಶ್, ಇಂಡಿಯನ್ ಇಂಟರ್‍ನ್ಯಾಷನಲ್ ರಾಜ್ಯ ಪಠ್ಯಕ್ರಮ ಶಾಲೆಯ ಲಿಂಗಮೂರ್ತಿ, ಎಂ.ಎಂ.ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಪಾಪಣ್ಣನವರು ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link