ಕಾನೂನು ಅರಿವಿನಿಂದ ಅಪರಾಧ ಕೃತ್ಯ ತಡೆ ಸಾಧ್ಯ..!

ಚಿತ್ರದುರ್ಗ;     ಮನುಷ್ಯ ತನ್ನ ಕಣ್ಣುಗಳ ಮೂಲಕ ನೋಡುವ ನೋಟ,ಕ್ರೋಧ,ಆಕ್ರೋಶ,ಅಪರಾಧಗಳಿಗೆ ಪ್ರಚೋದನೆ ನೀಡುವಂತೆ ಇರಬಾರದು ಆಗ ಮಾತ್ರ ಸಮಾಜದಲ್ಲಿ ಅತ್ಯುತ್ತಮ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಮುರುಘಾಮಠದ ಡಾ. ಶಿವಮೂರ್ತಿ ಮುರುಘಾಶರಣರು ಅಭಿಪ್ರಾಯಪಟ್ಟರು.

    ನಗರದ ಕ್ರೀಡಾಭವನದಲ್ಲಿ ಯುನೈಟೆಡ್ ಕ್ರಿಶ್ಚಯನ್ ಹ್ಯೊಮನ್ ರೈಟ್ಸ್ ಫೋರಮ್,ಚಿತ್ರದುರ್ಗ, ಹಾಗೂ ಬೆಂಗಳೂರಿನ ಪ್ರಾಜೆಕ್ಟ್ ರೆಸ್ಸ್ಕೂ ಫೌಂಡೇಷನ್ ಇವರವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ಕುರಿತು ಜಾಗೃತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಮನುಷ್ಯ ತನ್ನ ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಸುರಕ್ಷಿತ ಮತ್ತು ಉತ್ತಮವಾದ ಜೀವನವನ್ನು ನೆಡೆಸಬಹುದೆಂದು ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.ಇಂದಿನ ದಿನಮಾನದಲ್ಲಿ ಮಹಿಳೇ ಮತ್ತು ಮಕ್ಕಳ ಮೇಲೆ ದೌರ್ಜನ್ಯದ ಪ್ರಮಾಣ ಹೆಚ್ಚಾಗಿದೆ, ಇದರ ನಿಯಂತ್ರಣವಾಗಬೇಕಾದರೆ ಮಾನವನ ಇಂದ್ರೀಯಗಳು ಸರಿಯಾದ ರೀತಿಯಲ್ಲಿ ಇರಬೇಕಿದೆ, ಇದಕ್ಕೆ ಅವರಿಗೆ ಕಾನೂನಿನ ಅರಿವನ್ನು ಮೂಡಿಸಬೇಕಿದೆ ಎಂದರು.

      ಮಾನವ ಇಂದಿನ ದಿನಮಾನದಲ್ಲಿ ಅಹಿಂಸೆಯಿಂದ, ಹಿಂಸೆಯ ಕಡೆಗೆ ತಿರುಗುತ್ತಿದ್ದಾನೆ, ಜ್ಞಾನದ ಕೊರತೆಯಿಂದಾಗಿ ಇಂದು ವಿಕೃತವಾದ ಕಾರ್ಯಗಳಿಗೆ ಕೈಹಾಕಿದ್ದಾರೆ ಹಾಕುತ್ತಿದ್ದಾನೆ, ಮಾನವ ದೇಹದಲ್ಲಿ ಬಹು ಮುಖ್ಯವಾದ ಅಂಗ ಎಂದರೆ ಕಣ್ಣು ಇದನ್ನು ಸರಿಯಾದ ರೀತಿಯಲ್ಲಿ ಜೋಪಾನ ಮಾಡಿದರೆ ಉತ್ತಮವಾದ ಜೀವನವನ್ನು ಸಾಗಿಸಬಹುದಾಗಿದೆ. ಆದರೆ ಇತ್ತೀಚಿನ ದಿನಮಾನದಲ್ಲಿ ಕಣ್ಣು ತನ್ನ ನಿಯಂತ್ರಣವನ್ನು ಕಳೆದು ಕೊಂಡು ಬೇರೆ ರೀತಿಯಲ್ಲಿ ಕಾರ್ಯಾಚರಣೆಯನ್ನು ಮಾಡುತ್ತಿದೆ ಕಣ್ಣು ಮುಂಚೆ ಹೋದರೆ ನಂತರ ದೇಹದ ವಿವಿಧ ಭಾಗಗಳು ಸಹಾ ಅದನ್ನು ಅವಲಂಬಿಸಿ ಕೊನೆಗೆ ಶರೀರ ಪೂರ್ಣ ಪ್ರಮಾಣದಲ್ಲಿ ದೌರ್ಜನ್ಯಕ್ಕೆ ಸಾಕ್ಷಿಯಾಗುತ್ತದೆ ಎಂದು ಶರಣರು ನುಡಿದರು.

     ಮಾನವನ ನೋಟ ಚನ್ನಾಗಿದ್ದರೆ ಆತನ ಜೀವನದ ಪಾಠ ಚನ್ನಾಗಿ ಇರುತ್ತದೆ ಆದ್ದರಿಂದ ನಾವುಗಳು ನೋಡುವ ನೋಟ ಸಾತ್ವಿಕವಾಗಿ ಇರಬೇಕಿದೆ, ಇದರಲ್ಲಿ ಬೇರೆಯವರನ್ನು ತಿನ್ನುವಂತೆ ನೋಡುವುದು ಸಹಾ ಆಪರಾಧವಾಗಿದೆ, ಇಂದಿನ ದಿನದಲ್ಲಿ ಮಾನವನಿಗೆ ನೈತಿಕ ಪಾಠದ ಅಗತ್ಯ ಇದೆ, ಕಾನೂನಿನ ಭಯ ಇಲ್ಲದಿದ್ದರೆ ಮತ್ತಷ್ಟು ಅಪರಾಧಗಳು ನಡೆಯುತ್ತಿದೆ ಆದ್ದರಿಂದ ಅಪರಾಧಿಗಳಿಗೆ ಕಠಿಣವಾದ ಕಾನೂನು ನೀಡುವುದರ ಮೂಲಕ ಈ ಮಾನವ ಕಳ್ಳಸಾಗಾಣಿಕೆಯಂತಹ ಕೃತ್ಯವನ್ನು ನಿಲ್ಲಿಸಬೇಕಿದೆ ಎಂದು ಶರಣರು ಸರ್ಕಾರವನ್ನು ಆಗ್ರಹಿಸಿದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ರಾಜಾನಾಯ್ಕ್ ಮಾತನಾಡಿ, ಇಂದಿನ ದಿನಮಾನದಲ್ಲಿ ಮಾನವ ಕಳ್ಳಸಾಗಾಣಿಕೆ ವಿವಿಧ ಕಾರಣಗಳಿಂದ ನೆಡೆಯುತ್ತಿದೆ, ಹಣ, ಉದ್ಯೋಗ, ಮದುವೆ, ಆಡಂಬರದ ಜೀವನ ಸೇರಿದಂತೆ ವಿವಿಧ ರೀತಿಯ ಆಸೆಗಳನ್ನು ತೋರಿಸಿ ಮಹಿಳೆಯರನ್ನು ಯುವ ಜನಾಂಗವನ್ನು ಬೇರೆ ಕಡೆಗೆ ಸಾಗಾಟ ಮಾಡುವುದರ ಮೂಲಕ ರಾಜ್ಯ ದೇಶದಿಂದ ದೇಶಕ್ಕೆ ಮಹಿಳೆಯರನ್ನು ಮತ್ತು ಮಕ್ಕಳನ್ನು ಸಾಗಿಸುವ ಕಾರ್ಯ ನಡೆಯುತ್ತಿದೆ ಇದನ್ನು ತಪ್ಪಿಸಬೇಕಾದರೆ ಮನೆಯ ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿ ಹೊಸಬರು ಬಂದಿದ್ದಾರೆ ಅವರ ಕಾರ್ಯಚರಣೆಯ ಬಗ್ಗೆ ನಿಗಾವಹಿಸಬೇಕಿದೆ ಅವರು ಹೇಳಿದ್ದನ್ನು ನಂಬದೆ ಪರೀಶಿಲನೆಯನ್ನು ಮಾಡಬೇಕಿದೆ ಎಂದರು.

    ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿದೇಶಕರಾದ ನಾಗರಾಜ್, ಚಿತ್ರದುರ್ಗ ಜಿಲ್ಲಾ ಫಾಸ್ಟರ್ ಅಸೋಸೀಯೇಷನ್ ನ ಅಧ್ಯಕ್ಷ ಬ್ರದರ್ ವಿ ಅಬ್ರಾಹಿಂ, ಯುನೈಟೆಡ್ ಕ್ರಿಶ್ಚಿಯನ್ ಹ್ಯೂಮನ್ ರೈಟ್ಸ್ ಫೋರಮ್ ಅಧ್ಯಕ್ಷ ಫಾದರ್ ಸರ್ಜಿ ಜಾಜ್, ಪ್ರಧಾನ ಕಾರ್ಯದರ್ಶೀ ರೆವರೆಂಡ್ ಫಾದರ್ ಎಂ.ಎಸ್.ರಾಜು ಡಾ.ಮ್ಯಾಥ್ಯೂ ಡ್ಯಾನಿಯಲ್ ಭಾಗವಹಿಸಿದ್ದರು.ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಕಾರ್ಯಕ್ರಮದ ಉದ್ದೇಶವನ್ನು ಪ್ರಾಸ್ತಾವಿಕವಾಗಿ ಮಾತನಾಡಿದರು ವೇದಿಕೆಯಲ್ಲಿ ನಿವೃತ್ತ ಡಿವೈಎಸ್ಪಿ, ಮಹಮ್ಮದ್ ರೆಹಮಾನ್ ಮುಂತಾದವರು ಹಾಜರಿದ್ದರು ನೂರಾರು ಮಹಿಳೆಯರು ಮಕ್ಕಳು ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap