ತುರುವೇಕೆರೆ
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಭರತ್ ಎನ್ನುವವರಿಗೆ 5 ಲಕ್ಷ ಪರಿಹಾರವನ್ನು ದೊರಕಿಸಲಾಗಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು
ತಾಲ್ಲೂಕು ಕಚೇರಿಯಲ್ಲಿ ಗುರುವಾರ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆಯಾದ ಪರಿಹಾರ ಹಣದ ಚೆಕ್‍ನ್ನು ಫಲಾನುಭವಿ ತಂದೆಗೆ ನೀಡಿದ ಶಾಸಕ ಮಸಾಲೆಜಯರಾಮ್ ಮಾತನಾಡಿದರು. ಸಾಮಾನ್ಯವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2ಲಕ್ಷ ನೀಡುವುದು ಸಹಜ. ಆದರೆ ಸದರಿ ಫಲಾನುಭವಿ ಆಸ್ಪತ್ರೆ ವೆಚ್ಚಕ್ಕೆ 40ಲಕ್ಷ ವ್ಯಯಿಸಿದ್ದು ಖುದ್ದು ಆಸ್ಪತ್ರೆಗೆ ತೆರಳಿ ಪರಿಶೀಲಿಸಿದ ನಾನು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಒತ್ತಾಯಿಸಿ 5 ಲಕ್ಷ ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಯಿಮ್‍ಉನ್ನೀಸ, ಗ್ರಾಮದ ಮುಖಂಡ ಆಯರಹಳ್ಳಿಪಾಂಡು, ಫಲಾನುಭವಿ ತಂದೆ ಪರಮೇಶ್ವರಯ್ಯ, ಮುಖಂಡ ವಿ.ಟಿ.ವೆಂಕಟರಾಮ್, ಕಾಳಂಜಿಹಳ್ಳಿ ಸೋಮಣ್ಣ, ವಿ.ಬಿ.ಸುರೇಶ್, ನಾಗಲಾಪುರ ಮಂಜಣ್ಣ , ರಾಮಚಂದ್ರು ಸೇರಿದಂತೆ ಇತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
