ಡಿ.31ರೊಳಗೆ ಪ್ಯಾನ್ – ಆಧಾರ್ ಲಿಂಕ್ ಕಡ್ಡಾಯ !!

ನವದೆಹಲಿ: 

      ಡಿಸೆಂಬರ್ 31 ರ ಒಳಗಾಗಿ  ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

     ಈ ಹಿಂದೆ ಸೆ.30ಕ್ಕೆ ಇದ್ದ ಕಡೆಯ ದಿನಾಂಕವನ್ನು ಈ ವರ್ಷಾಂತ್ಯದವರೆಗೂ ಕೇಂದ್ರೀಯ ನೇರ ತೆರಿಗೆ ಮಂಡಳಿ ವಿಸ್ತರಿಸಿತ್ತು. ಈ ಪ್ರಕ್ರಿಯೆಗೆ ಇದುವರೆಗೆ ಒಟ್ಟಾರೆ ಏಳು ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ.

     “ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ! ಆದಾಯ ತೆರಿಗೆ ಸೇವೆಗಳ ತಡೆರಹಿತ ಲಾಭವನ್ನು ಪಡೆಯಲು, 2019 ರ ಡಿಸೆಂಬರ್ 31 ರ ಮೊದಲು ಪ್ರಮುಖ ಲಿಂಕ್ ಅನ್ನು ಪೂರ್ಣಗೊಳಿಸಿ” ಎಂದು ಇಲಾಖೆ ತಿಳಿಸಿದೆ.

     ಆಧಾರ್ ಸಂಖ್ಯೆ ಕಡ್ಡಾಯ ಕುರಿತ ತಕರಾರು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ನೀಡಿದ ತೀರ್ಪಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಸಂಖ್ಯೆ ನೀಡಬೇಕು ಮತ್ತು ಆದಾಯ ತೆರಿಗೆ ಸಲ್ಲಿಸಲು ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್​ಗೆ ಜೋಡಿಸಿರಬೇಕು ಎಂದು ಸೂಚಿಸಿತ್ತು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link