ಬೆಂಗಳೂರು
ನಗರದಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ನಿಯಂತ್ರಿಸಲು ಸಿಗ್ನಲ್ಗಳಲ್ಲಿ ವೃತ್ತಗಳಲ್ಲಿ ನಿಲ್ಲಿಸಿದ ಹಾಗೂ ಕೂರಿಸಿರುವ ಸಂಚಾರ ಪೊಲೀಸ್ ಬೊಂಬೆ(ಮ್ಯಾನ್ಕ್ವೀನ್)ಗಳು ಇನ್ನೂ ಮುಂದೆ ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ಮೇಲೂ ಕಣ್ಣಿಡಲಿವೆ.
ನಗರದ ಮಾಗಡಿ ರಸ್ತೆ, ಹುಳಿಮಾವು, ಎಂ.ಜಿ.ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳ ೩೦ ಕಡೆಗಳಲ್ಲಿ ನಿಲ್ಲಿಸಿರುವ ಸಂಚಾರ ಪೊಲೀಸರು ಧರಿಸುವ ಸಮವಸ್ತ್ರ, ಜಾಕೆಟ್, ಟೋಪಿಯನ್ನು ತೊಡಿಸಿರುವ ಬೊಂಬೆಗಳ ಕಣ್ಣಲ್ಲಿ ಕ್ಯಾಮಾರ ಅಳವಡಿಸಲಾಗಿದ್ದು ಅದರಿಂದ ಸಂಚಾರ ನಿಯಮ ಉಲ್ಲಂಘನೆಯು ಚಿತ್ರೀಕರಣಗೊಳ್ಳಲಿದೆ.
ಗೊಂಬೆಗಳ ಕಣ್ಣಲ್ಲಿ ಹೈರೆಸಲ್ಯೂಷನ್ ಕ್ಯಾಮೆರಾ ಅಳವಡಿಸಲಾಗುತ್ತಿದ್ದು ಅದು ಸಂಚಾರ ನಿಮಯಗಳನ್ನು ಉಲ್ಲಂಘನೆ ಮಾಡಿದವರ ಮೇಲೆ ಕಣ್ಣಿಡಲಿದೆ ಸಂಚಾರ ನಿಯಮ ಉಲ್ಲಂಘನೆಯು ಒಮ್ಮೆ ಮ್ಯಾನ್ಕ್ವೀನ್ಗಳ ಕಣ್ಣಲ್ಲಿ ಸೆರೆಯಾದರೆ, ಮುಂದಿನ ಸಿಗ್ನಲ್ನಲ್ಲಿ ಪೊಲೀಸರು ಅವರನ್ನು ಹಿಡಿಯಲಿದ್ದಾರೆ.
ಈಗಾಗಲೇ ನಾಲ್ವರು ಇಂಜಿನಿಯರ್ಗಳ ನಗರ ಪೊಲೀಸ್ ಆಯುಕ್ತರು ಮಾತುಕತೆ ನಡೆಸಿ ಹೈರೆಸಲ್ಯೂಷನ್ ಕ್ಯಾಮೆರಾ ಅಳವಡಿಸಲು ತಯಾರಿ ನಡೆಸಿದ್ದಾರೆ.ಅಲ್ಲದೆ ಮುಂದಿನ ದಿನಗಳಲ್ಲಿ ರೋಬೊಟಿಕ್ ಮಾದರಿಯ ತಂತ್ರಜ್ಞಾನವನ್ನು ಮ್ಯಾನ್ಕ್ವೀನ್ಗಳಲ್ಲಿ ಅಳವಡಿಸುವ ಬಗ್ಗೆ ತಯಾರಿ ನಡೆದಿದೆ.
ಪೊಲೀಸ್ ಬೊಂಬೆಯನ್ನು ದೂರದಿಂದ ನೋಡಿದರೆ ನೈಜ ಪೊಲೀಸ್ ನೋಡಿದಂತೆ ಭಾಸವಾಗುತ್ತದೆ. ಅದನ್ನು ಕಂಡರೆ ವಾಹನ ಸವಾರರು ಭಯಪಡಬಹುದು. ಸಂಚಾರ ನಿಯಮ ಪಾಲಿಸಬಹುದೆಂಬ ವಿಶ್ವಾಸವಿತ್ತು ಇನ್ನೂ ಕ್ಯಾಮಾರ ಅಳವಡಿಸಿರುವುದರಿಂದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ
ನಗರದೆಲ್ಲೆಡೆ ವಿಸ್ತರಣೆ
ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ಎಲ್ಲ ಕಡೆಯಲ್ಲೂ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಇಲ್ಲವೆಂಬುದು ಗೊತ್ತಾಗುತ್ತಿದ್ದಂತೆ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಿದ್ದು ಅದನ್ನು ತಪ್ಪಿಸಲು ಪೊಲೀಸ್ ಬೊಂಬೆಗಳನ್ನು ನಿಲ್ಲಿಸಲಾಗುತ್ತದೆ.
ಪೊಲೀಸರನ್ನು ಕಂಡರೆ ಮಾತ್ರ ನಿಯಮ ಉಲ್ಲಂಘಿಸುವವರು ಹೆಚ್ಚಿದ್ದಾರೆ. ಹೀಗಾಗಿ, ಪೊಲೀಸರನ್ನೇ ಹೋಲುವ ಬೊಂಬೆಗಳನ್ನು ಪ್ರಾಯೋಗಿಕವಾಗಿ ನಿಲ್ಲಿಸಲಾಗಿದ್ದು ಇದರ ಪ್ರತಿಕ್ರಿಯೆ ಗಮನಿಸಿ ನಗರದ ಎಲ್ಲ ರಸ್ತೆಗಳಿಗೂ ವಿಸ್ತರಿಸಲಾಗುವುದು’ ಎಂದು ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








