ಸಚಿವ ಶ್ರೀರಾಮುಲು ವಿರುದ್ಧ ಭೂಕಬಳಿಕೆ ಆರೋಪ : ಪ್ರಕರಣ ದಾಖಲು!!

ಬೆಂಗಳೂರು :

      ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ನಿರೀಕ್ಷೆಯಲ್ಲಿರುವ ಸಚಿವ ಬಿ.ಶ್ರೀರಾಮುಲುಗೆ ಇದೀಗ ಬಿಗ್ ಶಾಕ್ ಎದುರಾಗಿದೆ.

       ಶ್ರೀರಾಮುಲು ಅವರು ಬಳ್ಳಾರಿ ಹೊರವಲಯದಲ್ಲಿರುವ ಜಮೀನು ಕಬಳಿಸಿದ ಆರೋಪಕ್ಕೊಳಗಾಗಿದ್ದು ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡಿದೆ. ನಿವೇಶನ ಕಳೆದುಕೊಂಡಿರುವ ಜಿ.ಕೃಷ್ಣಮೂರ್ತಿ ಎಂಬುವರು ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

       2008 ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶ್ರೀರಾಮುಲು, ಕೌಲ್ ಬಜಾರ್ ಪ್ರದೇಶದ 57 ಎಕೆರೆ ಸರ್ಕಾರಿ ಮತ್ತು ಖಾಸಗಿ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಎನ್.ನಾರಾಯಣ ನೇತೃತ್ವದ ಪೀಠ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸುವಂತೆ ಸೂಚಿಸಿರುವುದಲ್ಲದೇ, ಈ ಸಂಬಂಧ ಸಮಗ್ರ ವರದಿಗೆ ಸೂಚನೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link