ತುಮಕೂರು
2019 ರಲ್ಲಿ ವಿಶ್ವದಾದ್ಯಂತ ಸುಮಾರು 49 ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಸಂಸ್ಥೆ ತಿಳಿಸಿದೆ ಇದು 16 ವರ್ಷಗಳಲ್ಲಿ ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ ಎಂದು ತಿಳಿಸಿದೆ.
“ಐತಿಹಾಸಿಕವಾಗಿ ಕಡಿಮೆಯಾದರು ಯೆಮೆನ್, ಸಿರಿಯಾ ಮತ್ತು ಅಫ್ಘಾನಿಸ್ತಾನಗಳಲ್ಲಿನ ಘರ್ಷಣೆಯನ್ನು ಒಳಗೊಂಡಂತೆ ಬೇರೆ ಬೇರೆ ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿಯೇ ಇದೆ ಎಂದು ಪ್ಯಾರಿಸ್ ಮೂಲದ ವಾಚ್‌ಡಾಗ್ ಹೇಳಿದೆ ಮತ್ತು ಇಂದು “ಪತ್ರಿಕೋದ್ಯಮವು ಅಪಾಯಕಾರಿ ವೃತ್ತಿಗಳಲ್ಲಿ ಒಂದಾಗಿದೆ” ಎಂದು ಎಚ್ಚರಿಸಿದೆ. ಕಳೆದ ಎರಡು ದಶಕಗಳಲ್ಲಿ ವರ್ಷಕ್ಕೆ ಸುಮಾರು 80 ಪತ್ರಕರ್ತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಫ್ರೆಂಚ್ ಇನಿಶಿಯಲ್ಸ್ ಆರ್ಎಸ್ಎಫ್ ಹೇಳಿದೆ.ಆದರೆ ಅದರ ಮುಖ್ಯಸ್ಥ ಕ್ರಿಸ್ಟೋಫ್ ಡೆಲೊಯಿರ್ ಅವರು ಶಾಂತಿಯುತ ದೇಶಗಳಲ್ಲಿ ಹತ್ಯೆಗೀಡಾದ ಪತ್ರಕರ್ತರ ಸಂಖ್ಯೆ ಇನ್ನೂ ಆತಂಕಕಾರಿಯಾಗಿದೆ ಎಂದು ಎಚ್ಚರಿಸಿದ್ದಾರೆ,
“ಲ್ಯಾಟಿನ್ ಅಮೆರಿಕ, ಖಂಡದಾದ್ಯಂತ ಒಟ್ಟು 14 ವರದಿಗಾರರನ್ನು ಕೊಲ್ಲಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು. “ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಪತ್ರಕರ್ತರು ಮಾಡುವ ಕೆಲಸಗಳಿಗಾಗಿ ಪತ್ರಕರ್ತರನ್ನು ಹತ್ಯೆ ಮಾಡಲಾಗುತ್ತಿದೆ ಮತ್ತು ಇದು ಪ್ರಜಾಪ್ರಭುತ್ವದ ನಿಲುವಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.”
2019 ರಲ್ಲಿ ಸುಮಾರು 389 ಜನರನ್ನು ಬಂಧನ ಮಾಡಲಾಗಿದ್ದು ಇದು ಕಳೆದ ವರ್ಷಕ್ಕಿಂತ 12% ಹೆಚ್ಚಾಗಿದೆ.ಕಳೆದ ವರ್ಷ ಇಸ್ತಾಂಬುಲ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಅಂಕಣಕಾರ ಜಮಾಲ್ ಖಶೋಗ್ಗಿ ಅವರ ಭೀಕರ ಹತ್ಯೆಗೆ ಕಾರಣರಾದ ಸೌದಿ ಅರೇಬಿಯಾ ಮತ್ತು ಇನ್ನಿತರೆ ದೇಶಗಳಲ್ಲಿ ಸುಮಾರು ಪತ್ರಕರ್ತರನ್ನು ಗೃಹಬಂಧನ ಅಥವಾ ಅರೆ ಬಂಧನಾವಸ್ಥೆಯಲ್ಲಿಡಲಾಗಿದೆ ಎಂದು ವರದಿಯಾಗಿದೆ.
ಏತನ್ಮಧ್ಯೆ, ಸಿರಿಯಾ, ಯೆಮೆನ್, ಇರಾಕ್ ಮತ್ತು ಉಕ್ರೇನ್‌ನಲ್ಲಿ 57 ಪತ್ರಕರ್ತರನ್ನು ಬಂಧಿಸಿಡಲಾಗಿದೆ ಎಂದು ಆರ್ ಎಸ್ ಎಫ್ ವರದಿ ಮಾಡಿದೆ “ಸಿರಿಯಾದಲ್ಲಿ ಪ್ರಮುಖ ಬೆಳವಣಿಗೆಗಳ ಹೊರತಾಗಿಯೂ ಈ ವರ್ಷ ಒತ್ತೆಯಾಳುಗಳನ್ನು ಗಮನಾರ್ಹವಾಗಿ ಮುಕ್ತಗೊಳಿಸಲಾಗಿಲ್ಲ” ಎಂದು ಆರ್ಎಸ್ಎಫ್ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
