ಬೆಂಗಳೂರು
ನಗರದಲ್ಲಿ ಬಂಧಿಸಿರುವ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎನ್ಬಿ) ಉಗ್ರ ಸಂಘಟನೆಯ ಸದಸ್ಯ ಮುಷರಫ್ ಹುಸೇನ್ ಅಲಿಯಾಸ್ ಮೂಸಾ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿ ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.
ಮುಷರಫ್ ಹುಸೇನ್ ಕೂಡ ಜೆಎನ್ ಬಿ ಉಗ್ರಸಂಘಟನೆಯ ಭಾಗವಾಗಿದ್ದನು. ಅಲ್ಲದೆ 2018ರ ಮಾರ್ಚ್ ತಿಂಗಳಲ್ಲಿ ಬೆಂಗಳೂರಿಗೆ ಬಂದಿದ್ದನು. ಬೆಂಗಳೂರಿನಲ್ಲಿ ಸಿಕ್ಕ ಆರೋಪಿಗಳ ಜೊತೆ ಕೈ ಜೋಡಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.ಈ ಹಿಂದೆ ಎನ್ಐಎ ಸಂಘಟನೆ ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ಉಗ್ರಗಾಮಿಗಳಾದ ಜಾಹಿದುಲ್ ಇಸ್ಲಾಮ್, ಹಬೀಬುರ್ ರೆಹಮಾನ್ ಸೇರಿದಂತೆ ಹಲವರನ್ನ ಬಂಧಿಸಿದ್ದರು.
ಈ ವೇಳೆ 3 ಗ್ರೆನೈಡ್, 3 ಫೆಬ್ರಕೇಟೆಡ್ ಗ್ರೆನೈಡ್ ಕ್ಯಾಪ್ಸ್, ಐಇಡಿ ಬಾಂಬ್, 9 ಎಮ್ ಎಮ್ ಪಿಸ್ತೂಲ್ ಹಾಗೂ ಒಂದು ಏರ್ ಗನ್ ಹಾಗೂ ಕೆಲ ಭಯೋತ್ಪಾದಕ ವಸ್ತುಗಳು ಪತ್ತೆಯಾಗಿದ್ದವು.ದೇಶದಲ್ಲೆಡೆ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿದ್ದವನನ್ನು ಬಂಧಿಸಿ ಅಧಿಕಾರಿಗಳ ತಂಡ ವಿಚಾರಣೆ ಮುಂದುವರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
