ಕಮಾಂಡ್ ಸೆಂಟರ್ ನಲ್ಲಿ ಪ್ರಾಯೋಗಿಕ ಮಾಹಿತಿ ವಿನಿಮಯ..!

ತುಮಕೂರು

     ನಗರದ ಪಾಲಿಕೆ ಆವರಣದಲ್ಲಿರುವ ಪುರಭವನದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಇಂಟಿಗ್ರೇಟೆಡ್ ಕಮ್ಯಾಂಡ್ ಸೆಂಟರ್ ಅನ್ನು ಅಳವಡಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪೋಲೀಸ್ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಲಾಯಿತು.

    ಸಭೆಯ ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ, ಕಮ್ಯಾಂಡ್ ಕಂಟ್ರೋಲ್ ಸೆಂಟರ್ ಹಾಗೂ ಟ್ರಾಫಿಕ್ ಸಿಗ್ನಲ್‍ಗೆ ಸಂಬಂಧಿಸಿದಂತೆ ಯಾವ ಯಾವ ಕೆಲಸಗಳು ಆಗಿವೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ. ನೂತನ ಸಿಗ್ನಲ್‍ಗಳು ಹೇಗೆ ಕಾರ್ಯನಿರ್ವಹಿಸಲಿವೆ ಎಂಬುದನ್ನು ವಿವರಿಸಿದ್ದಾರೆ. ಅಲ್ಲದೆ ಸ್ಮಾರ್ಟ್ ಸಿಟಿಯಿಂದ ಅಳವಡಿಸಲಾದ ಸ್ಮಾರ್ಟ್ ಪೋಲ್‍ಗಳಲ್ಲಿರುವ ಎಮರ್‍ಜೆನ್ಸಿ ಪ್ಯಾನಿಕ್ ಬಟನ್‍ನಿಂದಾಗುವ ಉಪಯೋಗದ ಬಗ್ಗೆ ಪ್ರಾಯೋಗಿಕವಾಗಿ ತೋರಿಸಲಾಗಿದೆ ಎಂದರು.

     ನಗರದಲ್ಲಿ ಪರಿಸರದ ಮಾಹಿತಿ ತೋರಿಸುವ ಮಾಲಿನ್ಯ ಬೋರ್ಡ್‍ಗಳನ್ನು ಅಳವಡಿಸಿದ್ದಾರೆ. ಹಲವಾರು ಸ್ಥಳಗಳಲ್ಲಿ ವೆರಿಯೇಬಲ್ ಮೆಸೇಜ್ ಸರ್ವೀಸ್‍ನ ಬೋರ್ಡ್‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಯಾವ ರೀತಿ ಮಾಹಿತಿಯನ್ನು ರವಾನಿಸಬಹುದು. ಹಾಗೂ ಜನರಿಗೆ ತಿಳಿಯಪಡಿಸಬೇಕಾದ ಸಂದೇಶವನ್ನು ಈ ಬೋರ್ಡ್‍ಗಳ ಮೂಲಕ ಪ್ರದರ್ಶಿಸಬಹುದಾಗಿದೆ ಎಂದು ತಿಳಿಸಿದರು.

     ಈಗಾಗಲೇ ನಗರದ ಹಲವು ವೃತ್ತಗಳಲ್ಲಿ ನೂತನ ಸಿಗ್ನಲ್‍ಗಳನ್ನು ಅಳವಡಿಸಲಾಗಿದೆ. ಜೊತೆಗೆ ನವೀನ ಮಾದರಿಯ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳ ಮೂಲಕ ಕಾನೂನು ಉಲ್ಲಂಘನೆ ಮಾಡುವ ವಾಹನ ಸವಾರರ ಮನೆಯ ವಿಳಾಸಕ್ಕೆ ನೋಟಿಸ್ ಕಳುಹಿಸಲಾಗುವುದು. ಕಳವು ಪ್ರಕರಣಗಳು ಸೇರಿದಂತೆ ಇನ್ನಿತರ ಪ್ರಕರಣಗಳನ್ನು ಬೇಧಿಸಲು ಕಮ್ಯಾಂಡಿಗ್ ಸೆಂಟರ್ ಅನುಕೂಲವಾಗಿದೆ. ಈಗ ಅಲ್ಲಲ್ಲಿ ಅಳವಡಿಸಲಾದ ಪ್ಯಾನಿಕ್ ಬಟನ್ ಮೂಲಕ ಸಾರ್ವಜನಿಕರು ತುರ್ತು ಪರಿಸ್ಥಿತಿಯಲ್ಲಿ ಪೋಲೀಸರಿಗೆ ಮಾಹಿತಿ ನೀಡಬಹುದಾಗಿದೆ. ಇದರಿಂದ ಯಾವುದೇ ಘಟನೆಗಳು ನಡೆಯದಂತೆ ನೋಡಿಕೊಳ್ಳಬಹುದಾಗಿದೆ ಎಂದರು.

     ಆರ್‍ಟಿಒ ಕಚೇರಿಯಲ್ಲಿ ಸಿಗುವ ವಾಹನಗಳ ಸಂಪೂರ್ಣ ಮಾಹಿತಿಯನ್ನು ಸ್ಮಾರ್ಟ್ ಸಿಟಿಯಿಂದ ಮಾಡಲಾದ ವೆಬ್‍ಸೈಟ್‍ಗೆ ಲಿಂಕ್ ಮಾಡುವ ಸಂಬಂಧ ಚರ್ಚೆ ಮಾಡಲಾಗಿದ್ದು, ಆರ್‍ಟಿಒ ಕಚೇರಿಯಿಂದ ಮಾಹಿತಿ ಲಿಂಕ್ ಆದಲ್ಲಿ ಇಡೀ ರಾಜ್ಯದ ಎಲ್ಲಾ ವಾಹನಗಳ ಸಂಪೂರ್ಣ ಮಾಹಿತಿಯು ಇಲ್ಲಿ ದೊರೆಯಲಿದೆ. ಇದರಿಂದ ನಗರದಲ್ಲಿ ನಡೆಯುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾಗಿದೆ.

     ಈ ಸಂದರ್ಭದಲ್ಲಿ ನಗರ ಡಿವೈಎಸ್‍ಪಿ ತಿಪ್ಪೇಸ್ವಾಮಿ, ಕಂಟ್ರೋಲ್ ರೂಂ ಸರ್ಕಲ್ ಇನ್‍ಸ್ಪೆಕ್ಟರ್ ಸುನೀಲ್‍ಕುಮಾರ್, ನಗರ ವೃತ್ತ ನಿರೀಕ್ಷಕ ನವೀನ್‍ಕುಮಾರ್, ಟ್ರಾಫಿಕ್ ಸಬ್‍ಇನ್‍ಸ್ಪೆಕ್ಟರ್ ಮಂಗಳಮ್ಮ, ಎಎಸ್‍ಐಗಳಾದ ಬಸವರಾಜು, ದೇವೇಗೌಡ, ಸ್ಮಾರ್ಟ್ ಸಿಟಿ ಆಡಳಿತ ವ್ಯವಸ್ಥಾಪಕ ಪಿ.ಎನ್ ಸ್ವಾಮಿ, ಐಟಿ ಮುಖ್ಯಸ್ಥ ಅಶ್ವಿನ್, ಸಂದೀಪ್, ವೆಂಕಟೇಶ್ ರಾವ್, ಕಮ್ಯಾಂಡಿಗ್ ಸೆಂಟರ್‍ನ ಮುಖ್ಯಸ್ಥರಾದ ಇಮಾಮ್ ಸಾಬ್, ಎಫ್ಕಾನ್ ಸಂಸ್ಥೆಯ ಮನಿಷ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link