ಮೈಸೂರು: ಮೈಸೂರು ಜಿಲ್ಲೆಯ ಹುಣಸೂರಿನ ಲಕ್ಷ್ಮೀಪುರ ಗ್ರಾಮದ ಆನೆಚೌಕೂರಿನಲ್ಲಿ ಕಡವೆ ಬೇಟೆಯಾಡಿ ಮಾಂಸ ಬಚ್ಚಿಟ್ಟ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೇಟೆಯಲ್ಲಿ ಸಿಕ್ಕ 80 ಕೆ.ಜಿ ಕಡವೆ ಮಾಂಸವನ್ನು ತಂಬಾಕಿನ ಬ್ಯಾರಕ್ ನಲ್ಲಿ ಬಚ್ಚಿಟ್ಟಿದ್ದನು. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ವಾಮಿ ಮನೆ ಮೇಲೆ ದಾಳಿ ನಡೆಸಿದೆ. ಅಲ್ಲದೆ ಕಡವೆ ಮಾಂಸ, ತಲೆ, ಒಂದು ಮಚ್ಚು ವಶಕ್ಕೆ ಪಡೆದಿದ್ದಾರೆ. ಆರೋಪಿ ಸ್ವಾಮಿ ಜೊತೆ ಬೇಟೆಯಾಡಲು ತೆರಳಿದ್ದ ಇತರ ನಾಲ್ವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
