ಮಂಗಳೂರು ಗೋಲಿಬಾರ್ ಸರ್ಕಾರ ಪ್ರಯೋಜಿತ : ಈಶ್ವರ್ ಖಂಡ್ರೆ

ಬೆಂಗಳೂರು

     ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ವೇಳೆ ಗೋಲಿಬಾರ್ ಮಾಡಿರುವುದು ರಾಜ್ಯ ಸರ್ಕಾರದ ಪ್ರಾಯೋಜಿತ ಕ್ರಮವಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ ಅವರು ಆರೋಪಿಸಿದ್ದಾರೆ.

     ಗೋಲಿಬಾರ್, ರಾಜ್ಯಸರ್ಕಾರದ ಪ್ರಾಯೋಜಿತ ಕ್ರಮವಾಗಿದೆ. ಇತಿಹಾಸಕಾರರು, ಪ್ರಗತಿಪರರು, ಕಾಲೇಜು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸುವುದು, ಬಂಧಿಸುವುದು, ಇನ್ನಿತರ ಸಂವಿಧಾನ ಕೃತ್ಯದಲ್ಲಿ ರಾಜ್ಯಸರ್ಕಾರ ತೊಡಗಿದೆ ಎಂದು ದೂರಿದರು

     ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಗುಂಡು ಶಹಾರಿಸಿ ಇಬ್ಬರ ಸಾವು ಹಾಗೂ ನೂರಾರು ಮಂದಿ ಗಾಯಗೊಳ್ಳಲು ಕಾರಣರಾಗಿರುವವರನ್ನು ಪತ್ತೆ ಹಚ್ಚಲು ನ್ಯಾಯಾಂಗ ತನಿಖೆ ನಡೆಸುವುದು ಅಗತ್ಯಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಪ್ರತಿಪಾದಿಸಿದರು.

    ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿರುವುದು ಹೀನಕೃತ್ಯವಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡದೆ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಅನುಸರಿಸಿರುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಪೌರತ್ವ ಕಾಯ್ದೆಜಾರಿಗೆ ತರುವ ಮೂಲಕ ಒಂದು ಕೋಮಿನವರಲ್ಲಿ ಭಯಭೀತಿ ಹುಟ್ಟಿಸಿ, ಹಿಂದೂ-ಮುಸ್ಲಿಂ ಜನಾಂಗದ ಭಾವನೆಯನ್ನು ಕೆರಳಿಸಲಾಗುತ್ತದೆ. ಬಿಜೆಪಿ ಮುಖಂಡರು ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ದೇಶದಲ್ಲಿ ಅಲ್ಲೋಲ್ಲ-ಕಲ್ಲೋಲ ವಾತಾವರಣ ಉಂಟು ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

    ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದೆ. ಸ್ವಾತಂತ್ರ್ಯ ಬಂದು 72 ವರ್ಷಗಳ ನಂತರ ನಾಗರಿಕರ ರಾಷ್ಟ್ರೀಯ ನೋಂದಣಿ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಅವರು ಪ್ರಶ್ನಿಸಿದರು.ರಾಷ್ಟ್ರೀಯ ಪೌರತ್ವ ಕಾಯ್ದೆ ಜಾರಿಗೆ ತರುವ ಮೂಲಕ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಉಂಟಾಗಿ ಜನ ನೆಮ್ಮದಿಯಾಗಿ ಬದುಕುವ ವಾತಾವರಣ ಇಲ್ಲದಂತಾಗಿದೆ ಎಂದು ಖಂಡ್ರೆ ಆರೋಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link